ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭4 ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಎಂದ ವೃಕ್ಷಗಳ೦ದ ಇಟ್ಟಣಿಸಿದ ವಜ್ರಗಿರಿಯೆಂಬ ಪರ್ವವಿದೆ ; ಆ ಪರ್ವತವು ನೂರುಗಾವುದ ಉನ್ನ ತವು ನರುಗಾ ವುದ ಹರಹ ಉಳ್ಳದ್ದಾಗಿರುವದು ; ಅದರಲ್ಲಿ ಅನೇಕ ಗುಹೆಗಳಿರುವವು ; ಆ ಗುಹೆಗಳಲ್ಲಿ ಸೀತಾದೇವಿಯನ್ನು ಅರಸಿ ನೋಡೀ ! ಆ ಸಮುದ್ರದ ಅಗ್ರಭಾಗದಲ್ಲಿ ಚಕ್ರವಾಕಗಿರಿಯೆಂಬ ಪರ್ವತವಿರುವದು ; ಆ ಪರ್ವತದಲ್ಲಿ ವಿಶ್ವಕರ್ಮ ನು ಸಾವಿರ ಅಲಗುಗಳುಳ್ಳ ಸುದರ್ಶನವೆಂಬ ಚಕ್ರವನ್ನು ನಿರ್ಮಿಸಿದನು ; ಪುರುಷೋತ್ತಮನಾದ ನಾರಾಯಣನು ಪಾ ರ್ವದಲ್ಲಿ ಆ ಗಿರಿಯಲ್ಲಿ ಪಂಚಜನ್ಮನೆಂಬ ದಾನವನನ್ನ ಹಯಗ್ರೀವನೆಂಬ ದಾನವನನ್ನೂ ಕೊಂದು ಪಂಚಜನ್ಮವೆಂಬ ಶಂಖವನ್ನೂ ಸುದರ್ಶನವೆಂಬ ಚಕ್ರವನ್ನೂ ತಂದನು ; ಚಕ್ರವಾಕಗಿರಿಯ ತಪ್ಪಲಗಳಲ್ಲಿ ವಿಶಾಲವಾದ ಗುಹೆಗಳಿವೆ; ಅವುಗಳಲ್ಲಿ ರಾವಣನನ್ನೂ ಸೀತಾದೇವಿಯನ್ನ ಹುಡುಕಿ! ಅಲ್ಲಿಂದ ಮುಂದೆ ಸುವರ್ಣಮಯವಾದ ದುರ್ದರಗಿರಿ ಯೆಂಬ ಪರ್ವತವಿದೆ ; ಆ ಪರ್ವತದಲ್ಲಿ ಅನೇಕ ವಜ್ರಗಳ ಜರಿಗಳ ಸಿಂಹಗಳೂ ಆನೆಗಳೂ ವ್ಯಾಘ್ರಗಳ ಕಾ ಡುಹಂದಿಗಳ ಘರ್ಜಿಸುತ್ತಿರುವವು ; ಅಲ್ಲಿ ದೇವೇಂದ್ರನು ಸಂಚರಿಸಿಕೊಂಡಿರುವನು ; ಆ ಪರ್ವತದ ಸಮೀಪದಲ್ಲಿ ಮೇಘಪರ್ವತವೆಂಬ ಗಿರಿಯುಂಟು ; ಮಹೇಂದ್ರ ಪರ್ವತದ ಸವಿಾಪದಲ್ಲಿರುವ ಮೇಘರರ್ವತವನ್ನು ದಾಟಿ ಮತ್ತೂ ಪಡುವಲಾಗಿ ನಡೆದರೆ ಅರವತ್ತು ಸಾವಿರ ಸುವರ್ಣಮಯವಾದ ಪರ್ವತಗಳು ಬಾಲಸರನಂತೆ ಅತಿ ಪ್ರಕಾಶಮಾ ನವಾಗಿ ಒಪ್ಪುತ್ತಿರುವವು ; ಅಲ್ಲಿ ಸುವರ್ಣಮಯವಾದ ವೃಕ್ಷಗಳು ಸದಾಕಾಲದಲ್ಲಿ ಸುಪ್ರಫಲಗಳಿಂದ ಮನೆ ಹರವಾಗಿರುವವು ; ಆ ಅರವತ್ತು ಸಾವಿರ ಪರ್ವತಗಳ ಮಧ್ಯದಲ್ಲಿ ಪರ್ವತರಾಜನಾದ ಮಹಾಮೇರು ಪರ್ವತವಿರು ವದು ; ಆ ಪರ್ವತಕ್ಕೆ ಪೂರ್ವದಲ್ಲಿ ದೇವೇಂದ್ರನು 'ಎಳ್ಳೆ ಪರ್ವತರಾಜನೆ, ನಿನ್ನಲ್ಲಿ ಆಶ್ರಯಮಾಡಿಕೊಂಡಿರುವ ವರು ಸುವರ್ಣದಂತೆ ತನುಕಾಂತಿಯುಳ್ಳವರಾಗಲಿ ! ನಿನ್ನ ಸವಿಾಪಕ್ಕೆ ಬಂದು ದರ್ಶನವನ್ನು ಮಾಡುವವರು ಸುವರ್ಣದಂತೆ ದಿವ್ಯಕಾಂತಿಯುಳ್ಳವರಾಗಲೀ !' ಎಂದು ವರವನ್ನು ಕೊಟ್ಟನು ; ಮಹಾಮೇರುಪರ್ವತಕ್ಕೆ ವಿಶ್ಲೇ ದೇವತೆಗಳು ಅವಸಗಳು ಮರುತ್ತುಗಳು ಮೊದಲಾದವರು ಬಂದು ಸಾಯಂಕಾಲ ಸಂಧ್ಯಾವಂದನೆಗಳನ್ನು ಮಾಡಿ ಸರೆಪಾಸನವನ್ನು ಮಾಡುವರು ; ಆಮೇಲೆ ಸೂರನು ಆ ದೇವತೆಗಳು ಮಾಡಿದ ಪುಜೆಯನ್ನು ಕೈ ಕೊಂಡು ಆ ಪರ್ವತದ ಪಡುವಣದಿಕ್ಕಿನಲ್ಲಿ ಮರೆಯಾಗಿ ಅಸ್ತಂಗತನಾಗುವನು! ಸೂರೈನು ಎರಡುಂಕ್ಷಗಾವುದ ದಾರಿಯನ್ನು ಮೂವತ್ತು ಘಳಿಗೆಗಳಲ್ಲಿ ದಾಟುವನು; ಮಹಾಮೇರುಪರ್ವತದ ಪಡುವಣದಿಕ್ಕಿನ ಕೋಡುಗಲ್ಲಿ ನಮೇಲೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟದ್ದಾಗಿ ರತ್ನ ಖಚಿತವಾಗಿ ಸುವರ್ಣಮಯವಾದ ದಿವಗೃಹ ಬಂದುಂಟು ; ಅದು ಮಹಾತ್ಮನಾದ ವರುಣನ ಆರನೆಯು ; ಆ ಅರಮನೆಯು ನಾನಾಪ್ರಕಾರವಾದ ಉಪ್ಪರಿಗೆಗಳಿಂದಲೂ ಚಿತ್ರ ಗಳಿಂದಲೂ ರಮಣೀಯವಾಗಿರುವದು ! ಅಸ್ತಮಯಪರ್ವತದ ಸಮೀಪದಲ್ಲಿ ಹತ್ತು ಕವಲಗಳುಳ್ಳದ್ದಾಗಿ ಸುವರ್ಣ ಮಯವಾಗಿ ಮಹಾಸಂಪತ್ತುಳ್ಳದ್ದಾಗಿ ರತ್ನ ಖಚಿತವಾದ ಜಗತಿಯುಳ್ಳ ಒಂದು ತಾಳೆಮರವಿರುವದು ; ಆ ಮರದ ಬಳಿಯಲ್ಲಿ ಯು ಮತ್ತು ಅಲ್ಲಲ್ಲಿರುವ ದುರ್ಘಟವಾದ ಸ್ಥಳಗಳಲ್ಲಿಯೂ ಸೀತಾದೇವಿಯನ ರಸಿ ಕಾಳೇ; ಮಹಾಮೇರು ಪರ್ವತದಲ್ಲಿ ಬ್ರಹ್ಮದೇವನಿಗೆ ಸಮಾನನಾಗಿ ಧರ್ಮರಹಸ್ಯವನ್ನು ಬಲ್ಲ ತಪಸ್ಸಿಯಾದ ಮೇರು ಸಾವರ್ಣಿಯೆಂಬ ಬಯಸ್ತೀಶ್ವರನಿರುವನು ; ಆ ಮಹೀಶರನಿಗೆ ಸಪ್ತಾಂಗ ನಮಸ್ಕಾರವನ್ನು ಮಾಡಿ ಸೀತಾದೇವಿಯು ವೃತ್ತಾಂತವನ್ನು ಕೇ೪ ; ಇದೀಗ ಏಣಿಲೋಕಕ್ಕೆ ಪ್ರಾತಃಕಾಲ ಸಾಯಂಕಾಲಗಳನ್ನು ಮಾಡುವ ಸೂರೈನು ಸಂಚರಿಸುವ ಲೋಕವು ! ಎಲೈ ಕಪಿನಾಯಕರುಗಳಿರಾ, ಈ ಸ್ಥಳಗಳ ಕಪಿಗಳಿಗೆ ಸಂಚರಿಸುವದಕ್ಕೆ ಯೋಗ್ಯ ವಾದಂಥಾವು ; ಆಮೇಲೆ ಸೂpಸಂಚಾರವಿಲ್ಲದ ಭೂಮಿಯನ್ನು ನಾನು ಅರಿತವನಲ್ಲ; ಸರಸಂಚಾರವುಳ ಭೂ ಮಿಯೊಳಗೆ ಸೀತಾದೇವಿಯನ್ನ ರಿಸಿ ಕಂಡು ಒಂದು ತಿಂಗಳ ಒಳಗೆ ಬನ್ನಿ; ಆ ತಿಂಗಳಮೇಲೆ ವಿಳಂಬಮಾಡಿಕಂ ಡಿರಬೇಡೀ; ಈ ಕವಿನಾಯಕರಲ್ಲಿ ಯಾರು ಒಂದು ತಿಂಗಳೊಳಗಾಗಿ ಬರದಿರುವರೋ ಅವರಿಗೆ ಶರಣಾಂತವಾದ ಆಜ್ಞೆಯನ್ನು ಮಾಡಿಸುವನು; ಆದಕಾರಣ ನೀವು ನಾನು ಹೇಳಿದ ಸ್ಥಾನಗಳಿಗೆ ಹೋಗಿ ಸೀತಾದೇವಿಯನ್ನ ರಸಿ ಕೊಂಡು ಬನ್ನಿ ! ಎಲ್ಲಿ ಕಪಿನಾಯಕರುಗಳರ, ಸುಷೇಣನು ನನಗೆ ಮಾವನಾಗಿ ಗುರುವಿಗೆ ಸಮಾನನಾದವನು ; ನೀವು ಆತನ ಮಾತಿಗೊಳಗಾಗಿರೀ; ನೀವು ಪಡುವಣದಿಕ್ಕಿಗೆ ಹೋಗಿ ಸೀತಾದೇವಿಯನ್ನರಸಿ ಕಂಡು ಬಂದಿರಾದರೆ