ವಿಷಯಕ್ಕೆ ಹೋಗು

ಪುಟ:ಕಮಲಕುಮಾರಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಯ ಹೆಸರೇ ಕಮಲೆ,-ಕಮಲ ಕುಮಾರಿ. ಅನಂತರ ಮಗಳನ್ನು ಚುಂಬಿಸಿ ಅವಳ ತಲೆಗೂದಲ್ಗಳನ್ನು ತನ್ನ ಅಂಗೈಯಿಂದ ಸವರಿ-“ಅಮ್ಮ ನಿನ್ನ ಯಾತನೆಗಳನ್ನು ನಾನಿನ್ನೆಷ್ಟು ಕಾಲ ಕಾಣಬೇಕಾಗಿರುವುದೋ!" ಎಂದು ನಿಟ್ಟುಸಿರನ್ನಿಟ್ಟಳು.

ಕಮಲೆ:- ಯಾತನೆ! ಅದಾವುದು ? ನನಗೆ ಅಂತಹುದಾವುದೂ ಬೋಧೆಯಾಗುವುದಿಲ್ಲ.

ವೃದ್ಧೆಯು ಕಣ್ಣೀರನ್ನೊರೆಸಿಕೊಂಡಳು ಮತ್ತು-"ನೀನು ಇಂತು ಭಿಕ್ಷೆಯನ್ನೆತ್ತಿ ಉದರಭರಣವನ್ನು ಮಾಡಿಕೊಳ್ಳಬೇಕಾಗಿ ಬರುವುದೆಂಬುದನ್ನು ನಾನು ಸ್ವಪ್ನೇಪಿ ತಿಳಿದಿರಲಿಲ್ಲ!" ಎಂದಳು. ಒಡನೆಯೆ ಪುನಃ ಅತ್ತುಬಿಟ್ಟಳು.

ಕಮಲೆ-ಅಳುವುದೇನಮ್ಮ? ನಿನ್ನ ಕಣ್ಣುಗಳಿಂದ ನೀರಿಳಿವುದೆಂದರೆ ನನ್ನ ಹೃದಯದಲ್ಲುಂಟಾಗುವ ಕಳವಳವ್ಯಥೆಯು, ಮತ್ತಾವ ಪರಿಯಿಂದಲೂ ನನ್ನಲ್ಲುಂಟಾಗುವುದಿಲ್ಲ, ಅಳಬಾರದಮ್ಮ!

ವೃದ್ಧೆ:-ಇಲ್ಲ ; ಅಳುವುದಿಲ್ಲ

ಕಮಲೆ:-ನೀನು ಇನ್ನೂ ಆಹಾರವನ್ನುಂಡುದಿಲ್ಲವೇ ?

ವೃದ್ಧೆ:-ನಿನ್ನೊಡನೆಯೆ ಅಲ್ಲದೆ, ನಾನು ಉಣ್ಣಲಾಪನೆ ?

ಕಮಲೆ:-ಚಿಃ ! ನಾನು ನಡೆದ ಬರುತ್ತ ಏನನ್ನಾದರೂ ತಿಂದಲ್ಲದೆ ಇತ್ತ ಬರುವುದಿಲ್ಲ.

ವೃದ್ಧೆ:-ಇದೂ ಅಹುದೆ?

ಕಮಲೆ:-ಅಹುದು ಆದುದರಿಂದ ನೀನು ಅನುನಿತ್ಯವೂ ನನಗೆ ಮೊದಲಾಗಿಯೆ ಅನ್ನವನ್ನುಂಡರಾಗದೆ?

ವೃದ್ಧೆ:-ಇಂದಿಗೆ ಇರಲಿ ನೀನು ಮಿಂದು ಬಾ ಕೂಡೆ ನಾವಿಬ್ಬರೂ ಉಣ್ಣುವ.

ಕಮಲೆಯು ಇದಕ್ಕೆ ಮರುಮಾತನಾಡಲಾರದೆ ಹೋದಳು. ಅವಳು ಬೆವತುಹೋದಳು. ಅವಳ ತುಟಿಗಳೊಣಗಿದವು.

ವೃದ್ಧೆ:-ಇದೇಕ ಸುಮ್ಮನಾದೆ ? ಇಂದು ಭಿಕ್ಷೆಯು ದೊರೆತುದಿಲ್ಲವೆ?

ಕಮಲೆ:- ಒಂದು ಹಿಡಿಯತುಂಬ ಅಕ್ಕಿಕಾಳು ದೊರಕಿದೆಯಷ್ಟೆ !