ಪುಟ:ಕಮ್ಯೂನಿಸಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಜ್ಞಾನಿಕ ಸಮಾಜವಾದ ಕಾರ್ಮಿಕವರ್ಗಕ್ಕೆ ಅವರು ಬಗೆದ ದ್ರೋಹವನ್ನೂ ಮತ್ತು ಅವರುಗಳು ಪ್ರಸಾರಮಾಡಿದ ತತ್ತ್ವವನ್ನೂ ಲೆನಿನ್ ಕಟುವಾಗಿ ಮೂದಲಿಸಿದನು. ಸಾಮ್ರಾಜ್ಯವಾದಿ ಯುದ್ಧವನ್ನು (Imperialist war) ಕಾರ್ಮಿಕರು ಬಹಿ ಸ್ಕರಿಸುವಂತೆಯೂ ಯುದ್ಧಕ್ಕೆ ಆಸರೆಯಾಗಿರುವ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ನಾಶಪಡಿಸುವಂತೆಯೂ ಮತ್ತು ಬಂಡವಾಳವರ್ಗದ ಮೇಲೆ ಯುದ್ಧವನ್ನು ಘೋಷಿಸುವಂತೆಯೂ ಕರೆಯಿತ್ತನು. ಆತನ ವಾಣಿ ಯುದ್ಧಮಯ ವಾತಾವರಣದಲ್ಲಿ ಬಂಡವಾಳವರ್ಗವನ್ನು ಸಿಡಿಲಿನಂತೆ ತಟ್ಟಿತು. ಸುಧಾರಕರು ಕಾರ್ಮಿಕವರ್ಗವನ್ನು ಎಳೆದೊಯ್ದು ತಪ್ಪುಹಾದಿ ಬಯಲಾಯಿತು, ಲೆನಿನ್ ತನ್ನ ಕರೆಯನ್ನು ಕಾರ್ಯಗತಮಾಡಲು 1919 ರಲ್ಲಿ ಹೊಸ ಕಾರ್ಮಿಕವರ್ಗದ ರಂಗವೊಂದನ್ನು ರಚಿಸಿದನು. ಈ ರಂಗ ಸಮಾಜವಾದದ ಇತಿಹಾಸದಲ್ಲಿ “ಮೂರನೇ ಅಂತರರಾಷ್ಟ್ರೀಯ” (Third International) ಎಂದು ಹೆಸರು ಪಡೆದಿದೆ. ಲೆನಿನ್ ಮಾರ್ಕ್ಸ್-ಏಂಗೆಲ್ಸರ ತತ್ರ್ಯ ಸಮುಚ್ಚಯದ ಆಧಾರದ ಮೇಲೆ ಹೊಸ ಸಿದ್ಧಾಂತವೊಂದನ್ನು ರಚಿಸಿದನು. .ಸಮಾಜವಾದೀ ಕ್ರಾಂತಿಗೆ ಕರೆಯಿತ್ತನು. ಲೆನಿನ್ನನ ನೂತನ ಸಿದ್ದಾಂತ ಸಮಾಜವಾದದ ಮುನ್ನಡೆಯಲ್ಲಿ ಅತಿ ಪ್ರಾಮುಖ್ಯವಾದುದು, ಸುಧಾರಕರು ಮಾರ್ಕ್ಸ್‌ವಾದದಲ್ಲಿರುವ ಚೇತನಾ ಶಕ್ತಿ, ಮಾರ್ಕ್ಸ್-ಏಂಗೆಲ್ಸರ ವಿಮರ್ಶಾಕ್ರಮ, ಆ ವಾದದ ಚಾರಿತ್ರಿಕ ಸನ್ನಿವೇಶ ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾ ವಣೆಗಳು ಇವುಗಳನ್ನು ತಿಳಿಯಲು ಅಸಮರ್ಥರಾಗಿ ದಾರಿ ತಪ್ಪಿರ.ವರೆಂದನು. ಮಾರ್ಕ್ಸ್-ಏಂಗೆಲ್ಯರು ತಮ್ಮ ವೈಜ್ಞಾನಿಕ ಸಮಾಜವಾದದ ರಚನೆಗಾಗಿ 19 ನೇ ಶತಮಾನದಲ್ಲಿ ವಿಮರ್ಶೆಮಾಡಿದ ಬಂಡವಾಳ ಆರ್ಥಿಕ ವ್ಯವಸ್ಥೆ ಯನ್ನು ಪುನಃ ವಿಮರ್ಶೆಗೊಳಪಡಿಸಿ ಅದರಲ್ಲಿ ಉಂಟಾಗಿರುವ ಬದಲಾವಣೆ ಗಳನ್ನು ಲೆನಿನ್ ನಿರೂಪಿಸಿದನು. ಈಗ 20 ನೇ ಶತಮಾನದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಸಾಮ್ರಾಜ್ಯವಾದೀ ರೂಪವನ್ನು (Imperialism) ಹೊಂದಿರುವುದಾಗಿ ವಾದಿಸಿದನು. ಈ ಅವಸ್ಥೆಯಲ್ಲಿ ಬಂಡವಾಳ ಆರ್ಥಿಕ ವ್ಯವಸ್ಥೆ ಮರಣಾವಸ್ಥೆಯಲ್ಲಿದ್ದು (Moribund) ಅದರಿಂದ ಹೊಮ್ಮು