ರಷ್ಯಾದಲ್ಲಿ ಸಮಾಜವಾದ ೧೦೭ ವ ಐದನೆಯದಾಗಿ, ಕಾರ್ಮಿಕ ಪ್ರಜಾಸತ್ತೆ (Proletarian Demo- cracy) ಬಂಡವಾಳಶಾಹಿ ಪ್ರಜಾಸತ್ತೆಯಿಂದ ಬೇರೆಯಾಗಿದೆ. ಬಂಡವಾಳ ಪ್ರಜಾಸತ್ತೆಯಲ್ಲಿ ಇರುವುದು ನಾಮಾಂಕಿತದ ಪ್ರಜಾಸತ್ತೆ, ಬಂಡವಾಳ ಶಾಹಿ ಪ್ರಜಾಸತ್ತೆ ಸ್ವಾಮ್ಯದ ಮೇಲೆ ನಿಂತಿರುವುದರಿಂದ ವ್ಯಕ್ತಿಗಳ ಸಾಮಾ ಜಿಕ ಮತ್ತು ಆರ್ಥಿಕ ಸ್ಥಾನಮಾನಗಳು ಅಸಮಾನವಾಗಿವೆ. ಸ್ವಾಮ್ಯವನ್ನು ಹೊಂದಿರುವ ವರ್ಗ ರಾಜ್ಯಶಕ್ತಿಯನ್ನು ತನ್ನ ಹಣದ ಬಲದಿಂದ ತನ್ನ ಉಪಯೋಗಕ್ಕೆ ತಿರುಗಿಸಿಕೊಳ್ಳಲು ಅವಕಾಶವಿದೆ, ಸ್ವಾಮ್ಯವನ್ನು ಹೊಂದಿ ರದ ವ್ಯಕ್ತಿಗಳು ಗಣನೆಗೆ ಬರುವುದಿಲ್ಲ. ಅವರು ರಾಜಕೀಯ ಹಕ್ಕುಗಳನ್ನು ಅನುಭವಿಸಲು ಹಣದ ಚೈತನ್ಯ ಸಾಲದೆ ಇರುತ್ತಾರೆ. ಪ್ರಜಾಸತ್ತೆ ಹಣ ವಿದ್ದವರಿಗೆ ಮಾತ್ರ ಮೀಸಲಾದ ಸ್ವತ್ತಾಗಿದೆ. ಪ್ರಜಾಸತ್ತೆಯ ಸೋಗಿನಲ್ಲಿ ಬಂಡವಾಳವರ್ಗ ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡುತ್ತಿದೆ. ಸತ್ವ ವುಳ್ಳ ಪ್ರಜಾಸತ್ತೆಯನ್ನು ತರುವ ದೃಷ್ಟಿಯಿಂದಲೇ ರಷ್ಯಾದ ಕಾರ್ಮಿಕರ ಕ್ರಾಂತಿ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರ್ಮೂಲಮಾಡಿದೆ. ಮೂಲೋ ತ್ಪಾಟನೆಯಾದ ದೇಶೀಯ ಬಂಡವಾಳವರ್ಗದಿಂದ ಮತ್ತು ಹೊರ ಬಂಡ ವಾಳಶಾಹಿ ರಾಷ್ಟ್ರಗಳಿಂದ ಬರುವ ಪ್ರತಿಭಟನೆಯನ್ನೂ ಮತ್ತು ಕ್ರಾಂತಿಗೆ ವಿರುದ್ಧ ನಡೆಸುವ ವಿನಾಶಕಾರ್ಯಗಳನ್ನೂ ತಡೆಗಟ್ಟುವ ದೃಷ್ಟಿಯಿಂದ ನಿರೋಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಾಮ್ಯ ವರ್ಗದಮೇಲೆ ಕಾರ್ಮಿಕ ವರ್ಗದ ಏಕೈಕ ಪ್ರಭುತ್ವವನ್ನು ಘೋಷಿಸಲಾಗಿದೆ. ಸ್ವಾಮ್ಯ ವರ್ಗದ ರಾಜ ಕೀಯ ಸ್ವಾತಂತ್ರದ ಮೇಲೆ ಮುಟ್ಟಗೋಲು ಹಾಕಲಾಗಿದೆ. ಆದುದರಿಂದ ಕಾರ್ಮಿಕವರ್ಗದ ಶತ್ರುವಾದ ಬಂಡವಾಳವರ್ಗದ ಮೇಲೆ ಸರ್ವಾಧಿಕಾರ, ಕಾರ್ಮಿಕವರ್ಗಕ್ಕೆ ಮಾತ್ರ ಅನ್ವಯಿಸುವ ಹಾಗೆ ಪ್ರಜಾಸತ್ತೆ ಇದೆ. ಇದೇ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿರುವ ಕಾರ್ಮಿಕ ಪ್ರಜಾಸತ್ತೆ ಕ ಸೋವಿಯಟ್ ರಾಷ್ಟ್ರದ ಇತಿಹಾಸದಲ್ಲಿ 1936 ಬಹಳ ಮುಖ್ಯವಾದ ವರ್ಷ. 1917 ರಿಂದ 1936 ರ ವರಗೆ ಅನೇಕ ಸಮಸ್ಯೆಗಳು ಬಗೆಹರಿ ದಿದ್ದವು ಮತ್ತು ಅನೇಕ ಪರಿಹಾರಕ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದಿತು. ಮೊದಲನೆಯದಾಗಿ, ಸಮಾಜವಾದಿ ವ್ಯವಸ್ಥೆ ಬೇರೂರಿ ಯೋಜನೆಗಳಿಂದ ಸಂಸತ್ತು ವರ್ಷ ವರ್ಷ ಸಾಂಗವಾಗಿ ಕ್ರಮ ವಾಗಿ ವೃದ್ಧಿ ಹೊಂದಿದ್ದಿತು, ಸಾಧಿಸಲು ಅಸಾಧ್ಯವೆಂದು ಬಗೆದ ಆರ್ಥಿಕ
ಪುಟ:ಕಮ್ಯೂನಿಸಂ.djvu/೧೧೯
ಗೋಚರ