ಪುಟ:ಕಮ್ಯೂನಿಸಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವೈಜ್ಞಾನಿಕ ಸಮಾಜ ವಾದ

ಕೈಗಾರಿಕೆಗಳ ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ನಡೆದು ಶೋಷಣೆ ಕೈಗಾ
ರಿಕ ಮತ್ತು ವಾಣಿಜ್ಯ ಕ್ಷೇತ್ರಗಳಿಗೂ ಹಬ್ಬಿ, ಕೂಲಿಗಾಗಿ, ವೇತನಕ್ಕಾಗಿ
ದುಡಿಯುವ ದುಡಿಮೆಗಾರರನ್ನೆಲ್ಲ ಬಾಚಿ ಅಪ್ಪಿಕೊಂಡಿತು. ವ್ಯವಸಾಯವೇ
ಮುಖ್ಯ ಕಸಬಾಗುಳ್ಳ ಸಮಾಜಗಳಲ್ಲಿ ಭೂಸ್ವಾಮ್ಯವುಳ್ಳವರು ಐಶ್ವರ್ಯ
ವಂತರಾಗಿದ್ದರೆ, ಅವರಿಗೆ ಸರಿಸಮಾನ ರೀತಿಯಲ್ಲಿ ಅವರಿಗಿಂತಲೂ ಮಿಗಿ
ಲಾಗಿ, ವ್ಯಾಪಾರ ಮತ್ತು ಕೈಗಾರಿಕೆ ಉದ್ಯಮಗಳನ್ನು ಕೈಕೊಂಡವರು
ಐಶ್ವರ್ಯವಂತರಾಗಿದ್ದಾರೆ. ಶೋಷಣೆ ಜನಸಮುದಾಯವನ್ನು ಎಲ್ಲ ಕಡೆ
ಯಿಂದಲೂ ಆವರಿಸಿದೆ.
ಶೋಷಣೆಗೆ ಒಳಪಟ್ಟ ಜನರು ತಮ್ಮ ಪಾಡನ್ನು ಮೂಕ ಜಂತು
ಗಳಂತೆ ಸಹಿಸಿಕೊಂಡೂ ಇಲ್ಲ. ನೊಂದಿರುವ, ಬೇಸತ್ತಿರುವ ನಿರ್ಗತಿಕ
ಜನರ ಪ್ರತಿಭಟನೆಯೂ ಸಹ ಆದಿಯಿಂದಲೂ ನಡೆದಿದೆ. ಮನುಷ್ಯ ಸಾಮಾ
ನ್ಯವಾಗಿ ಶಾಂತಿಪ್ರಿಯ, ಜೀವಿಸುವುದಕ್ಕೆ ಯಾವುದೋ ಒಂದು ಮಾರ್ಗ
ವನ್ನು ಅನುಸರಿಸಿರುತ್ತಾನೆ. ಎಷ್ಟೇ ಕಷ್ಟ ಬರಲಿ ಅದನ್ನೆ ಅಪ್ಪಿಕೊಂಡು,
ಒದಗುವ ಕಷ್ಟನಷ್ಟಗಳನ್ನು ಸಹಿಸಿಕೊಂಡು, ತಾಳ್ಮೆಯಿಂದ ಜೀವನ
ಸಾಗಿಸುತ್ತಾನೆ. ಜಾಡುಬಿದ್ದ ಜೀವನಕ್ರಮವನ್ನು ಬಿಡಲಿಚ್ಚಿಸುವುದಿಲ್ಲ.
ದಿನಂಪ್ರತಿ ಬದಲಾವಣೆಗೆ ಅವನ ಮನಸ್ಸು ಒಪ್ಪುವುದಿಲ್ಲ. ತೊಂದರೆಗಳು
ಎಷ್ಟೇ ಇದ್ದರೂ ಒಂದು ಜೀವನಕ್ರಮಕ್ಕೆ ಒಗ್ಗಿಕೊಂಡಿರುವಾಗ ಸ್ವಸ್ಥಾನ
ಪ್ರೀತಿ, ಸ್ವಜನ ಪ್ರೇಮ ಇವುಗಳನ್ನು ಬಿಟ್ಟು ಬೇರೆ ಕಡೆಗೆ ಹೋಗುವುದ
ಕ್ಕಾಗಲಿ ಅಥವಾ ವಿರೋಧಿಸುವುದಕ್ಕಾಗಲಿ ಸಾಮಾನ್ಯವಾಗಿ ಇಚ್ಚಿಸುವು
ದಿಲ್ಲ. ಕಷ್ಟ ಸಹಿಷ್ಣುತೆ ಮಾನವನ ದೊಡ್ಡ ಗುಣವಾಗಿದೆ, ಸಹನೆ ಇಲ್ಲದಿ
ದ್ದರೆ ವಿಜ್ಞಾನವಾಗಲಿ ನಾಗರಿಕತೆಯಾಗಲಿ ಬೆಳೆಯುತ್ತಲೇ ಇರಲಿಲ್ಲ.
ಆದರೆ ಯಾವುದಕ್ಕೂ ಮಿತಿಯುಂಟು.
ಪ್ರಾರಂಭದಲ್ಲಿ ಪ್ರಕೃತಿ ಒಡ್ಡಿದ ಆಸರೆ ಅತ್ಯಲ್ಪವಾಗಿತ್ತು. ಆಸರೆ
ಯನ್ನು ಪಡೆದಿದ್ದ ಒಂದು ಗುಂಪಿನ ಜನರಿಂದ ಇನ್ನೊಂದು ಗುಂಪಿನ ಜನರು
ಕಸಿದುಕೊಳ್ಳಲು ಯುದ್ಧ ಹೂಡುತ್ತಿದ್ದರು, ಪ್ರಕೃತಿ ನೀಡಿದ ಈ ಅಲ್ಪಾ
ಶ್ರಯ ಗೆದ್ದವರ ಕೈಸೇರಿ, ಸೋತ ಗುಂಪಿನ ಸಮಾಜ ಕ್ಷೀಣಿಸಿತು. ಸೋತ
ಗುಂಪಿನ ಹೆಂಗಸರು ಗೆದ್ದವರಿಗೆ ಉಪ ಪತ್ನಿಯರಾಗಿಯೂ, ದಾಸಿಯ
ರಾಗಿಯೂ ಗಂಡಸರು ಗುಲಾಮರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ