ಪುಟ:ಕಮ್ಯೂನಿಸಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸಮಾಜ ವಾದದ ಜನನ

ರಹಸ್ಯ ಅಡಗಿರುವುದೇ ಇಲ್ಲಿ. ಉತ್ಪಾದನಾ ವಸ್ತುಗಳನ್ನು ಖಾಸಗಿಯಾಗಿ
ಹೊಂದಿರುವವರು ದುಡಿಯದೆಯೇ ಇನ್ನೊಬ್ಬರಿಂದ ದುಡಿಸಿಕೊಂಡು ಜೀವಿ
ಸುತ್ತಾರೆ. ಹೆಚ್ಚು ಹೆಚ್ಚು ಸ್ವಾಮ್ಯಹೊಂದಿದಷ್ಟೂ ಆದಾಯ ಹೆಚ್ಚುತ್ತದೆ.
ಖಾಸಗೀ ಸಂಪತ್ತು ವೃದ್ಧಿಯಾಗುತ್ತದೆ. ದುಡಿಮೆಗಾರರು ಎಷ್ಟು ಹೆಚ್ಚಾಗಿ
ದುಡಿದರೂ ಅವರ ಸಂಪತ್ತು ಮಾತ್ರ ಹೆಚ್ಚುವುದಿಲ್ಲ. ಹೊಟ್ಟೆಗಿದ್ದರೆ ಬಟ್ಟೆಗೆ
ಎಟುಕದು ; ಬಟ್ಟೆಗಿದ್ದರೆ ಹೊಟ್ಟೆಗೆ ಎಟುಕದು. ದುಡಿಮೆಗಾರರು ತಮ್ಮ
ದುಡಿಮೆಯಿಂದಲೇ ಜೀವನ ಸಾಗಿಸಬೇಕು. ಅವರು ಸದಾ ತಮ್ಮ ಮತ್ತು
ತಮ್ಮ ಮಾಲೀಕರ ಎರಡು ಸಂಸಾರಗಳನ್ನೂ ಬದುಕಿಸುವುದಕ್ಕೆ ಕೆಲಸ
ಮಾಡುತ್ತಿರಬೇಕು. ಮಾಲೀಕನ ಅಭಿವೃದ್ಧಿಗಾಗಿ ಅವನ ಕಣಜವನ್ನು
ಭರ್ತಿಮಾಡುವುದಕ್ಕಾಗಿ ಬೆವರು ಸುರಿಸಿ, ರಕ್ತಬಸಿಯಬೇಕು. ಬೇಸಾಯ
ರಂಗದಲ್ಲಿ ದುಡಿಮೆಗಾರರ ಪಾಡು ಹೇಳತೀರದು, ಮಳೆ ಬಾರದಿರಲಿ ಫಸಲಿಗೆ
ರೋಗ ತಗುಲಿ ನಷ್ಟ ಹೊಂದಲಿ ಅಥವಾ ಇನ್ನಾವ ಕಾರಣವೇ ಆಗಲಿ ನಿಗದಿ
ಯಾದ ಮೊತ್ತವನ್ನು ಹಣದ ರೂಪದಲ್ಲೋ ಅಥವಾ ಧಾನ್ಯದ ರೂಪದಲ್ಲೋ
ಸಲ್ಲಿಸಬೇಕು. ಹೆಚ್ಚು ಸ್ವಾಮ್ಯವಿರುವವರಿಗೆ ನಷ್ಟ ಅಷ್ಟು ಪರಿಣಾಮಕಾರಿ
ಯಾದದ್ದಲ್ಲ. ಹಲವೆಡೆಗಳಿಂದ ಆದಾಯ ಬರುತ್ತಿರುವಾಗ ಮಾಲೀಕರು
ಜೀವಿಸುವುದು ಅಷ್ಟು ಕಷ್ಟವಾಗುವುದಿಲ್ಲ. ಆದರೆ ದುಡಿಮೆಗಾರರ ಪರಿ
ಸ್ಥಿತಿಯೇ ಬೇರೆ. ಉಣ ಹೊರಟರೆ ಸಾಲತೀರುವುದಿಲ್ಲ; ಸಾಲ ತೀರಿಸಲು
ಹೊರಟರೆ ಹೊಟ್ಟೆಯಮೇಲೆ ಒದ್ದೆಯ ಬಟ್ಟೆ.

ವ್ಯವಸಾಯವೇ ಮುಖ್ಯ ಕಸಬಾಗುಳ್ಳ ಎಲ್ಲ ಸಮಾಜಗಳ ಜೀವನ
ಕ್ರಮ ಇದೇ ಅಗಿದೆ. - ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಭಾರತೀಯ
ಇತಿಹಾಸದಲ್ಲಿ ಕಾಣುವ ಚಿತ್ರವೂ ಇದೇ. ಆದರೆ ಪ್ರಪಂಚದ ನಾನಾ
ಭಾಗದ ನಾನಾ ಸಮಾಜಗಳಲ್ಲಿ ಖಾಸಗೀ ಸ್ವಾಮ್ಯ, ಶೋಷಣೆ ಮತ್ತು
ದುಡಿಮೆ ವಿವಿಧ ರೂಪದಲ್ಲಿವೆ. ಹಿಂದಿನಿಂದ ಇಂದಿನವರೆಗೆ ಇವುಗಳಲ್ಲಿ
ಅನೇಕ ಮಾರ್ಪಾಡುಗಳು ಕ್ರಮವಾಗಿ ಉದ್ಭವಿಸಿವೆ.

ಆದಿಕಾಲದಲ್ಲಿ ಸೂರೆ, ಗುಲಾಮಗಿರಿಗಳಿಂದ ಪ್ರಾರಂಭವಾದ
ಶೋಷಣೆ, ವ್ಯವಸಾಯವೇ ಮುಖ್ಯ ಕಸಬಾದನಂತರ ಜೀತ ಕೂಲಿಕಂಬಳ,
ವಾರ ಮತ್ತು ಗುತ್ತಿಗೆ ರೂಪಗಳಲ್ಲಿ ಎಲ್ಲ ದೇಶಗಳಲ್ಲೂ ನಡೆದಿದೆ. ಹದಿನಾರು
ಮತ್ತು ಹದಿನೇಳನೇ ಶತಮಾನಗಳಲ್ಲಿ ವಾಣಿಜ್ಯ ವ್ಯಾಪಾರ ಮತ್ತು