ಪುಟ:ಕಮ್ಯೂನಿಸಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೈಜ್ಞಾನಿಕ ಸಮಾಜ ವಾದ



ಮಾಡಿವೆ. ಹಸಿವು, ಬಡತನ, ಆಕ್ರಮಣ, ಶೋಷಣೆ, ದಬ್ಬಾಳಿಕೆ, ಭೇದ
ಭಾವ-ಇವು ಈವರೆಗೆ ಮಾನವ ಸಮಾಜಗಳನ್ನು ಕಾಡಿವೆ. ಪ್ರಕೃತಿಯ
ಮೇಲಣ ಜಯಲಾಭಕ್ಕಾಗಿ ನಿರ್ದೇಶಗೊಂಡ ಮಾನವ ಪ್ರಯತ್ನ ಪರಂಪರೆ
ಗಳೇ ಒಂದು ಇತಿಹಾಸ, ಮನುಷ್ಯ ಮನುಷ್ಯರಲ್ಲೇ ಯಾದವೀ ಕಲಹ,
ಯುದ್ಧ, ಉಪಟಳ ; ಇದರಿಂದ ನುಚ್ಚು ನುರಿಯಾದ ಜೀವನ; ಅದನ್ನು
ಎದುರಿಸಲು ಕೈಕೊಂಡ ಕ್ರಮಗಳು ಹೊಸ ಕಟ್ಟು ಪಾಡುಗಳು, ಆರ್ಥಿಕ
ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಗಳು ಇವುಗಳೇ ಮಾನವ
ಸಮಾಜದ ಮತ್ತೊಂದು ಇತಿಹಾಸ.

ಶೋಷಣೆ, ದಬ್ಬಾಳಿಕೆ ಮುಂತಾದವುಗಳು ಪ್ರಾಚೀನ ಸಮಾಜಗಳಲ್ಲಿ
ಬಲಪ್ರಯೋಗದಿಂದ ಹಲವುವೇಳೆ ನಡೆದಿದ್ದುವು. ಆದರೆ, ಸಾಮಾನ್ಯವಾಗಿ
ಅಂದಿನಿಂದ ಈವರೆಗೆ ಶೋಷಣೆ ಮುಂತಾದವು ಅವ್ಯಕ್ತವಾಗಿ ಪರೋಕ್ಷವಾಗಿ
ನಡೆಯುತ್ತಿವೆ; ಸಮಾಜ ಅದಕ್ಕೆ ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ.
ಪ್ರಾಚೀನಕಾಲದಲ್ಲಿ ಸ್ವಾಮ್ಯವರ್ಗ ಗುಲಾಮರಿಂದ ದುಡಿಸಿಕೊಳ್ಳುತ್ತಿದ್ದುದ
ರಿಂದ, ಮಾನವ ಮಾನವನಮೇಲೆ ಮಾಡುತ್ತಿದ್ದ ಅತ್ಯಾಚಾರ ಎದ್ದು
ಕಾಣುತ್ತಿತ್ತು. ಆದರೆ ಗುಲಾಮಗಿರಿ ವ್ಯಕ್ತರೂಪದಲ್ಲಿಲ್ಲದಿದ್ದಾಗಲೂ
ಆರ್ಥಿಕ ವ್ಯವಸ್ಥೆ ಪರೋಕ್ಷವಾಗಿ ಗುಲಾಮಗಿರಿ ಮತ್ತು ಶೋಷಣೆಗೆ ಅವ
ಕಾಶವಿತ್ತಿದೆ. ಅತ್ಯಂತ ಅನಾಗರಿಕ ಸಮಾಜಗಳನ್ನು ಬಿಟ್ಟರೆ ಪ್ರಾಚೀನ
ಕಾಲದಿಂದಲೂ ಉತ್ಪಾದನಾಸಾಧನಗಳಾದ ಭೂಮಿ, ಗಣಿ ಇತ್ಯಾದಿಗಳು
ಖಾಸಗೀ ಸ್ವಾಮ್ಯಕ್ಕೆ ಸೇರಿವೆ. ಸ್ವಾಮ್ಯವಿಲ್ಲದವರು ದುಡಿಮೆಯನ್ನೆ ಅವ
ಲಂಬಿಸಿ ಸ್ವಾಮ್ಯವನ್ನು ಹೊಂದಿರುವವರ ಅಧೀನದಲ್ಲೇ ದುಡಿದು ದುಡಿದು
ಜೀವಶವಗಳಂತೆ ಬದುಕಿದ್ದಾರೆ.
ಖಾಸಗೀ ಸ್ವಾಮ್ಯವಿರುವ ವ್ಯವಸ್ಥೆಯಲ್ಲಿ ಯಾವ ಶೋಷಣೆಯೂ
ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಉತ್ಪಾದನಾ ವಸ್ತುಗಳಿವೆ, ಉತ್ಪಾ
ದನಾ ವಸ್ತುಗಳನ್ನು ಖಾಸಗಿಯಾಗಿ ಹೊಂದಿರುವ ವರ್ಗವಿದೆ. ದುಡಿಮೆ
ಮಾಡುವವರು ಪ್ರತಿಫಲವಾಗಿ ಕೂಲಿ ಅಥವ ವೇತನವನ್ನು ಪಡೆಯುತ್ತಿರು
ವಂತೆಯೂ, ಬೇಸಾಯಗಾರರು ಗುತ್ತಿಗೆ ಅಥವ ವಾರಕ್ಕೋ ದುಡಿಯುತ್ತಿರು
ವಂತೆಯೂ ಕಂಡುಬರುತ್ತದೆ. ಆದರೆ ಈ ಪ್ರತಿಫಲವಾದ ಕೂಲಿ ಮತ್ತು
ಗುತ್ತಿಗೆಗಳನ್ನು ನಿರ್ಧರಿಸುವವರೆಲ್ಲರೂ ಸ್ವಾಮ್ಯವರ್ಗದವರು, ಶೋಷಣೆಯ