ಸಮಾಜ ವಾದದ ಜನನ
ಅಧ್ಯಾಯ-1.
ಮಾನವ ಸಮಾಜ ಜನಿಸಿದಾರಂಭದಿಂದ ಎಷ್ಟೇ ಕಷ್ಟಪರಂಪರೆಗಳು
ಬಂದರೂ ತಾನು ಬದುಕುವುದೇ ಮಾನವನ ಪ್ರಥಮ ಪ್ರಯತ್ನ
ವಾಗಿದೆ. ಹಾಗೆ ಬಾಳಿ ಬದುಕಲು ಯತ್ನಿಸಿದ ಮಾನವನನ್ನು ಎರಡು
ವಿಧವಾದ ಪ್ರತಿಬಂಧಕ ಬಾಧಿಸಿವೆ. ಒಂದು ಭೌತಿಕ ಮತ್ತೊಂದು
ಸಾಮಾಜಿಕ, ಭೌತಿಕವಾಗಿ ಪ್ರಕೃತಿ ತಂದೊಡ್ಡಿದ ತೊಡರುಗಳನ್ನು
ಎದುರಿಸಿ ನಾಗರಿಕತೆಯನ್ನು ಸ್ಥಾಪಿಸಿದ ಮಹತ್ಕಾರ್ಯದ ಗೌರವ
ಮಾನವನಿಗೆ ಸಲ್ಲತಕ್ಕದ್ದಾಗಿದೆ ; ಮಾನವವರ್ಗವನ್ನು ಮೃಗ
ವರ್ಗದಿಂದ ಬೇರ್ಪಡಿಸುವ ವೈಶಿಷ್ಟ್ಯವೂ ಇದೇ ಆಗಿದೆ. ಮಾನವ
ತನ್ನ ಬುದ್ದಿ ವಿಶೇಷದಿಂದ ಪ್ರಕೃತಿಯ ಚಲನವಲನಗಳ ಮೇಲೆ ಹತೋಟ
ಯನ್ನು ಹೊಂದಿದ್ದಾನೆ. ಇದೇ ವಿಜ್ಞಾನದ ಸಾಧನೆ. ವಿಜ್ಞಾನವನ್ನು
ಬೆಳೆಸುವುದರ ಮೂಲಕ ಮಾನವನು ಪ್ರಾಕೃತಿಕ ಪ್ರತಿಬಂಧಕಗಳನ್ನು ಪರಿ
ಹರಿಸಿಕೊಂಡಿದ್ದಾನೆ ; ಪರಿಹರಿಸುತ್ತಿದ್ದಾನೆ ; ಮತ್ತು ಉಳಿದಿರುವ ಸಮಸ್ಯೆ
ಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾನೆ.
ಪ್ರಕೃತಿಯಿಂದ ಉದ್ಭವವಾದ ಮಾನವರು ತಮ್ಮ ಬದುಕನ್ನು ಸಾಗಿ
ಸಲು ಸಮಾಜ ಜೀವಿಗಳಾದರು. ಆದರೆ ಪ್ರಕೃತಿಯಮೇಲೆ ಹೋರಾಡಿ
ಸಾಧಿಸಿದಷ್ಟು ವಿಜಯವನ್ನು ತಮ್ಮ ಸಮಾಜಜೀವನದಲ್ಲಿ ಗಳಿಸಿಲ್ಲ.
ಪ್ರಕೃತಿಯಿಂದುಂಟಾದ ಸಂಕಟಗಳನ್ನು ಅನುಭವಿಸುವುದರ ಜೊತೆಗೆ
ಮಾನವ ತಾನು ಬಾಳಲು ನಿರ್ಮಿಸಿಕೊಂಡ ಸಮಾಜದಿಂದಲೂ ಬೇರೊಂದು
ವಿಧವಾದ ಕಷ್ಟಗಳನ್ನು ಅನುಭವಿಸಿದ್ದಾನೆ. ಆದಿ ಮಾನವನ ಮತ್ತು
ಅನಾಗರಿಕಕಾಲದ ಸಮಾಜಗಳ ಇತಿಹಾಸವನ್ನು ಬಿಟ್ಟರೆ (ಆದಿಯುಗ :
Primitive Period), ಈ ವರೆಗೆ ಮಾನವ ಸಮಾಜಗಳಲ್ಲಿ ಬದುಕು
ಸಾಗಿಸುತ್ತಿರುವ ಮಾನವ ಜೀವಿಗಳು ಮಾನವ ನಿರ್ಮಿತ ಉಪಟಳಗಳಿಗೇ
ಹೆಚ್ಚು ತುತ್ತಾಗಿದ್ದಾರೆ. ಮಾನವ ಸಮಾಜಗಳ ವ್ಯವಸ್ಥೆ, ನಿಯಮಗಳು,
ಕಟ್ಟುಪಾಡುಗಳೇ ಮೊದಲಾದುವು ಚೆನ್ನಾಗಿ ಬದುಕಲು, ಸುಖಸಂಪತ್ತು
ಗಳನ್ನನುಭವಿಸಲು ಹಾತೊರೆದ ಮಾನವ ಜೀವಿಗಳ ಸ್ವಪ್ನವನ್ನು ಭಗ್ನ