ರಷ್ಯಾದಲ್ಲಿ ಸಮಾಜವಾದ ೧೦೯ ನಾಲ್ಕನೆಯದಾಗಿ, ಜನಸಮುದಾಯದಲ್ಲಿ ರಾಜಕೀಯ ಜಾಗೃತಿಯನ್ನು ತರಲೂ ಮತ್ತು ಸಮಾಜ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಸ್ಥಾನಮಾನ ಹಕ್ಕು ಗಳು ಮತ್ತು ಕರ್ತವ್ಯಗಳನ್ನು ತಿಳಿಸಲೂ ಮಾಕ್ಸ್ ಏಂಗೆಲ್ಲರ ಸಮಾಜಿ ವಾದೀ ತತ್ತ್ವವನ್ನು ಪ್ರಚಾರ ಮಾಡಲಾಗಿತ್ತು. ಮನುಷ್ಯ ಸ್ವಭಾವ ಆವರ ಣದ ಪ್ರಭಾವದಿಂದ ಹೇಗೆ ಬಹುಮಟ್ಟಿಗೆ ನಿರ್ಧಾರವಾಗುತ್ತದೆ ಮತ್ತು ಹೊಸ ಸಮಾಜವಾದೀ ವ್ಯವಸ್ಥೆಯ ಆವರಣದಲ್ಲಿ ಮನುಷ್ಯ ಸ್ವಭಾವ ಹೇಗೆ ಪರಿ ವರ್ತನೆ ಹೊಂದಿದೆ ಮತ್ತು ಹೊಂದುತ್ತಿದೆ ಎಂಬುದು ಜನಸಮುದಾಯಕ್ಕೆ ಸ್ವಂತ ಅನುಭವದ ಮಾತಾಗಿತ್ತು. ಈ ಮೇಲ್ಕಂಡ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಾಜ ವಾದೀ ವ್ಯವಸ್ಥೆಯ ಮುಂದೋಟವನ್ನು ನಿರ್ದೇಶಿಸುವ ರೀತಿಯಲ್ಲಿ ಸ್ಟಾಲಿ ನನ ಮುಂದಾಳತ್ವದಲ್ಲಿ ಒಂದು ಸಂವಿಧಾನವು 1936 ರಲ್ಲಿ ರಚಿತ ವಾಯಿತು. ಈ ಸಂವಿಧಾನವನ್ನು ಸೋವಿಯಟ್ ಜನರು 1917 ರಿಂದ 1936 ರ ವರೆಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಾಧಿಸಿರುವ ಮುಂದೋಟದ ಕ್ರೋಢೀಕರಣೆ ಎಂಬಂತೆ, ಮತ್ತು ಇನ್ನೂ ಮುಂದುವರೆಯುವುದಕ್ಕೆ ನಿರ್ಮಿಸಿಕೊಂಡ ಸಾಧನವೆಂಬಂತೆ ಆಚರಣೆಗೆ ತರಲಾಯಿತು 1936 ರ ಸಂವಿಧಾನದ ಬಗ್ಗೆ ಸ್ಟಾಲಿನ್ ವಿವರಣೆ ಇತ್ತು ಸೋವಿಯಟ್ ಜನರು ಸಮಾಜವಾದೀ ವ್ಯವಸ್ಥೆಯನ್ನು ದಾಟಿ ಕಮ್ಯೂನಿಸ್ಟ್ ವ್ಯವಸ್ಥೆಗೆ ಹೋಗುವುದಕ್ಕೆ ನಿರ್ಮಿಸಿಕೊಂಡ ಗುರುತಿನಂತಿದೆ ಎಂದನು. త ಸೋವಿಯಟ್ ಕ್ರಾಂತಿ ಮತ್ತು ರಷ್ಯಾದ ಸಮಾಜವಾದೀ ವ್ಯವಸ್ಥೆಯ ಮುಂದೋಟ ಪ್ರಪಂಚದ ಇತಿಹಾಸದಲ್ಲಿ ಒಂದು ಘಟನಾತ್ಮಕ ವಿಷಯವಾ ಗಿದೆ, ಇತರ ದೇಶಗಳ ಮೇಲೆ ಇದು ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ದಿಕ್ಕೆಟ್ಟ ರುವ ಜನಸಮುದಾಯಕ್ಕೆ, ಆರ್ಥಿಕ ದುಃಸ್ಥಿತಿ, ಶೋಷಣೆ ಮತ್ತು ದಬ್ಬಾ ಳಿಕೆಗೆ ಸಿಕ್ಕಿ ನರಳುತ್ತಿರುವ ಕಾರ್ಮಿಕವರ್ಗಕ್ಕೆ ಸೋವಿಯಟ್ ರಷ್ಯಾ ವಿಮೋ ಚನೆಯ ಹೆಗ್ಗು ರುತಾಗಿದೆ. ಈ ಕ್ರಾಂತಿಯ ಪ್ರಭಾವ ದಿನದಿನಕ್ಕೆ ಪ್ರಪಂಚದ ಮೂಲೆಮೂಲೆಗೂ ಹಬ್ಬುತ್ತಿದೆ. ವೈಜ್ಞಾನಿಕ ಸಮಾಜವಾದದ ಮುನ್ನಡೆ ಯಲ್ಲಿ ರಷ್ಯಾದ ಮಹಾ ಕ್ರಾಂತಿ ಮತ್ತು ಪ್ರಥಮಬಾರಿಗೆ ಅಲ್ಲಿ ವ್ಯವಸ್ಥೆ ಹೊಂದಿದ ಸಮಾಜವಾದೀ ವ್ಯವಸ್ಥೆ ಮಾರ್ಕ್ಸ್ ತತ್ತ್ವ ಸಾಧಿಸಿರುವ ಒಂದು ದೊಡ್ಡ ದಿಗ್ವಿಜಯವಾಗಿದೆ. ಈ ದಿಗ್ವಿಜಯ ರಷ್ಯಾಕ್ಕೆ ಕೊನೆಯಾಗದೆ, ಪ್ರಪಂಚವನ್ನೇ ಸುತ್ತುವರಿಯಲು ಮುಂದೆ ಸಾಗಿದೆ. వ
ಪುಟ:ಕಮ್ಯೂನಿಸಂ.djvu/೧೨೩
ಗೋಚರ