ಸಮಾಜವಾದವೇ ಅಥವಾ ಬಂಡವಾಳವಾದವೇ ? ೧೧೫ ಫೇಬಿಯನ್ ಸಮಾಜವಾದಿಗಳು 1 ತಮ್ಮ ವಾದವನ್ನು ಮಂಡಿಸಿ, ಕಾರ್ಮಿಕರು ತಮ್ಮ ವಿಮೋಚನೆಗಾಗಿ ಕ್ರಾಂತಿಕಾರ ಚಳವಳಿಯನ್ನು ಮೊದಲು ಬಿಡಬೇಕೆಂದರು. ವರ್ಗಗಳಾಗಲೀ ಮತ್ತು ವರ್ಗವಿರಸವಾಗಲೀ ಇಲ್ಲವೆಂದರು. ಕಾರ್ಮಿಕರು ತಮ್ಮ ಧೈಯ ಸಾಧನೆಗಾಗಿ ಕ್ರಾಂತಿಯ ಮೂಲಕ ಏಕೈಕ ಕಾರ್ಮಿಕರ ಪ್ರಭುತ್ವವನ್ನು ರಚಿಸುವುದೂ ಒಪ್ಪದವರನ್ನು ಒಪ್ಪುವ ಹಾಗೆ ಬಲಾತ್ಕಾರಪಡಿಸುವುದೂ ಪ್ರಜಾಪ್ರಭುತ್ವದ ತತ್ತ್ವಕ್ಕೆ ವಿರುದ್ಧವಾಗಿದೆ ಎಂದರು, ಮೊದಲು ಮಾಡಬೇಕಾಗಿರುವ ಕೆಲಸವೆಂದರೆ ಎಲ್ಲರಿಗೂ ಬೇಕಾಗಿರುವ ಸೌಲಭ್ಯಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸಾರ್ವ ಜಸಿಕರೇ ಒಟ್ಟಿನಲ್ಲಿ ನಡೆಸಬೇಕು. ಈ ರೀತಿಯ ಸಾಲ್ವ ಜನಿಕ ಉದ್ಯಮ ಗಳಿಂದ (Public Utilies) ಆಗುವ ಪ್ರಯೋಜನಗಳನ್ನು ಜನರಿಗೆ ತಿಳಿಸಬೇಕು. ಉದಾಹರಣೆಗೆ ಒಂದು ಊರಿಗೆ ದೀಪ, ನೀರು, ಹಾಲು, ಇತ್ಯಾದಿ ಎಲ್ಲರಿಗೂ ಬೇಕಾದ್ದರಿಂದ ಇವುಗಳನ್ನು ಖಾಸಗೀ ಉದ್ಯಮಕ್ಕೆ ಬಿಡದೆ ಮುನಿಸಿಪಾಲಿಟಿ ಅಥವಾ ಗ್ರಾಮಪಂಚಾಯಿತಿ ವಹಿಸಿಕೊಂಡು ನಡೆಸಬೇಕು. ಇಷ್ಟು ಮಾಡಿದರೆ, ಸಾರಜನಿಕ ಉದ್ಯಮಗಳಿಂದ ಆಗುವ ಪ್ರಯೋಜನಗಳಿಂದ ಜನರು ಪರಿವರ್ತನೆ ಹೊಂದುವರು, ಅವ್ಯವಸ್ಥೆಗೆ ವ (1) ಜಾರ್ಜ್ ಬನಾರ್ಡ್ ಫ್ರಾ, ಸಿಡ್ನಿ ವೆಬ್ ಮತ್ತು ಇತರರಿಂದ ಪ್ರತಿಪಾದಿತವಾದ ವಾದ, ಮಾರ್ಕ್ಸ್ ಎಂಗೆರು ಬಂಡವಾಳ ಆರ್ಥಿಕವ್ಯವಸ್ಥೆಯ ಬಗ್ಗೆ ಮಾಡಿದ ವಿಮರ್ಶೆಯನ್ನು ಅಂಗೀಕರಿಸಲು ನಿರಾಕರಿಸಿದರು, ಬಂಡವಾಳಶಾಹಿ ಅರ್ಥಶಾಸ್ತ್ರ ಜ್ಞರ ತತ್ತ್ವ ಮತ್ತು ಸಂಪ್ರದಾಯಕ್ಕೆ ಮನ್ನಣೆಕೊಡಲಾಯಿತು, ಜಾನ್ ಸ್ಟವರ್ಟ್ ಮಿಲ್ ಮತ್ತು ಜನನ್ಸ್ರ ಅರ್ಥಶಾಸ್ತ್ರಗಳಿಂದ ಸ್ಫೂರ್ತಿ ಪಡೆದು ಹೊಸಬಗೆಯ ಸಮಾಜವಾದೀ ತತ್ತ್ವದ ಪ್ರತಿಪಾದನೆಗೆ ಮಾರ್ಗದರ್ಶನವನ್ನು ಅವರು ಕಂಡರು. ಬಹಳ ಕಾಲದವರೆಗೆ ಫೇಬಿಯನ್ನರು ಒಂದು ಸಣ್ಣ ಗುಂಪಾಗಿಯೇ ಉಳಿದಿದ್ದರು. ಕ್ರಮೇಣ 1918 ರಲ್ಲಿ ಫೇ ಬಿಯನ್ ತತ್ತ್ವಗಳನ್ನು ಬ್ರಿಟಷ್ ಲೇಬರ್ ಪಕ್ಷ ಅಂಗೀಕರಸಿ ಸಮಾಜವಾದೀ ಕಾರ್ಯಕ್ರಮವನ್ನು ಮಂಡಿಸಿತು, ಬ್ರಿಟಿಷ್ ಸಮಾಜವಾದದ ಹುಟ್ಟು ಮತ್ತು ಹಿನ್ನೆಲೆ ಬೇರೆಯಾಯಿತು, ಇದರಿಂದಾಗಿ ರೋಮ್ ದೇಶದ ಫೇಬಿಯಸ್ ಎಂಬ ಯೋಧನು ಶತ್ರುಗಳನ್ನು ಸದೆಬಡಿ ಯಲು ಅನುಸರಿಸಿದ ಚಾಕಚಕ್ಯತೆಗಳಿಗೆ ಮೆಚ್ಚಿಗೆ ಸೂಚಿಸಿ ಸಂಘಕ್ಕೆ ಫೇಬಿಯನ್ ಸಂಘವೆಂದು ಹೆಸರು ಕೊಡಲಾಯಿತು.
ಪುಟ:ಕಮ್ಯೂನಿಸಂ.djvu/೧೨೯
ಗೋಚರ