ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವೈಜ್ಞಾನಿಕ ಸಮಾಜ ವಾದ

ಮಾಲೀಕರಿಂದ ಒದಗಿದ ಉಪಟಳ, ಶೋಷಣೆ ಮುಂತಾದವುಗಳನ್ನು ಮತ್ತು
ನಿರಂಕುಶ ಪ್ರಭುವಾದ ರಾಜ ವಿಧಿಸುವ ಕಂದಾಯ, ತೆರಿಗೆ ಮತ್ತು ಸುಲಿಗೆ
ಗಳನ್ನು ತಡೆಯಲಾರದೆ ಸಾಮಾನ್ಯ ಜನರು ದಂಗೆ ಎದ್ದಿರುವ ನಿದರ್ಶನ
ಗಳಿವೆ. 1347 ರಲ್ಲಿ ರೋಮ್ ನಲ್ಲಿ, 1357 ರಲ್ಲಿ ಫ್ರಾನ್ಸ್‌ನಲ್ಲಿ 1381
ರಲ್ಲಿ ಇಂಗ್ಲೆಂಡ್‌ನಲ್ಲಿ ರೈತರು ಕಿರುಕುಳ ಮತ್ತು ಶೋಷಣೆಯನ್ನು ತಡೆಯ
ಲಾರದೆ ದಂಗೆ ಎದ್ದರು. 1520 ರಲ್ಲಿ ಜರ್ಮನಿ ದೇಶದಲ್ಲಿ ರೈತರು ದಂಗೆ
ಎದ್ದರು, ಇವು ಆಗ ನಡೆದ ಹಲವು ದಂಗೆಗಳಲ್ಲಿ ಮುಖ್ಯವಾದವು.
ಎಷ್ಟೇ ಕಷ್ಟ ಬಂದರೂ ಮೌನವಾಗಿ ಸಹಿಸಬಹುದು. ಆದರೆ ಸಹಿ
ಸಲಾಗುವುದಿಲ್ಲವೆಂದು ಹೇಳಿ ಪ್ರತಿಭಟನೆ ಸೂಚಿಸಿ ಅದರಲ್ಲಿ ಅಪಜಯ
ಹೊಂದಿದರೆ ಉಂಟಾಗುವ ಪರಿಣಾಮಗಳು ಅಷ್ಟಿಷ್ಟಲ್ಲ. ಮೂಕ ಜಂತು
ಗಳಂತಿದ್ದ ಮಾನವರಿಂದ ಅನುಕೂಲಗಳನ್ನು ಪಡೆಯುತ್ತಿದ್ದ ಸ್ವಾಮ್ಯ
ವರ್ಗ ಕೋಪಗೊಂಡು ಸೇಡು ತೀರಿಸಿಕೊಳ್ಳುತ್ತದೆ, ಹೀಗೆ ಅನೇಕ ದಂಗೆ
ಗಳನ್ನು ಸ್ವಾಮ್ಯವರ್ಗ ತನ್ನ ಕ್ರೂರತನದಿಂದ ಅಡಗಿಸಿದೆ. ನಿರ್ದಯವಾಗಿ
ಪಾಠಕಲಿಸುವ ರೀತಿಯಲ್ಲಿ ದಂಗೆ ಎದ್ದವರನ್ನು ದಂಡಿಸಿದೆ. ಇದರಿಂದ
ಅನೇಕವೇಳೆ ದಂಗೆಯ ಪ್ರಕರಣಗಳು ಕಂಡು ಬರದಿದ್ದರೆ ದಂಗೆ ಇರಲಿಲ್ಲ
ವೆಂದಲ್ಲ. ಸ್ವಾಮ್ಯವರ್ಗದ ಕ್ರೂರ ವರ್ತನೆಯನ್ನು ನೋಡಿ ಜನರು ಹೆದರು
ತಿದ್ದರು ; ಹತಾಶರಾಗಿ ತಮ್ಮ ಹಣೆಯ ಬರಹವನ್ನು ಹಳಿದುಕೊಂಡರು.
ವಿಧಿವಿಲಾಸವೆಂದೂ, ದೇವರ ನಿಯಾಮಕವೆಂದೂ ದೇವರಲ್ಲಿ ಮರೆ
ಹೊಕ್ಕರು, ತಮ್ಮ ಬಾಳೇ ದುಡಿಮೆಯ ಬಾಳು, ದೇವರು ಬಹುಶಃ
ಹಾಗೆಯೇ ನಿಯಾಮಕವಾಡಿದ್ದರೂ ಇರಬಹುದು ಅಥವಾ ಇಹದ ಕಾರ್ಪ
ಣ್ಯದ ಬಾಳು ಪೂರ್ವಜನ್ಮದ ತಪ್ಪಿಗಾಗಿ ಅನುಭವಿಸುವ ದಡ ಎಂಬ
ಭಾವನೆ ಮೂಡಿತು. ಇಹ ಲೋಕದಲ್ಲಿ ಸುಖವನ್ನು ಕಾಣದೆ ಪರಲೋಕದ
ಕಲ್ಪನೆ ಬೆಳೆಯಿತು. ಸ್ವಾಮ್ಯವರ್ಗ ಮತ್ತು ಸ್ವಾಮ್ಯವರ್ಗದ ಮುಖಂಡ
ನಾದ ರಾಜನಿಂದ ಪೋಷಿತರಾದ ಸಾಮಂತರು, ಪುರೋಹಿತರು, ಪಂಡಿತರು
ಪೂಜಾರಿಗಳು ಮತ್ತು ಊಳಿಗವರ್ಗದವರು ಪ್ರತಿಭಟನೆ ತಪ್ಪೆಂದು ಬೋಧೆ
ಮಾಡಿದರು.
ಶೋಷಣೆ, ದುಸ್ಥಿತಿ, ದಾರಿದ್ರ, ಮೇಲುವರ್ಗದವರಿಂದ ಕೀಳು
ವರ್ಗದವರು ಅನುಭವಿಸಿದ ತಾತ್ಸಾರ, ತಾರತಮ್ಯ, ನಿರ್ಲಕ್ಷತೆಗಳು ಸಮಾಜ