ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ವೈಜ್ಞಾನಿಕ ಸಮಾಜವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಸಂರಕ್ಷಿಸುವ, ಹಾಗೆಯೆ ಶೋಷಣೆ ಯನ್ನು ಮುಂದುವರಿಸುವ ವ್ಯವಸ್ಥೆಗಳಾಗುತ್ತವೆ. ಸಮಾಜವಾದೀ ವ್ಯವಸ್ಥೆಯ ಆವಶ್ಯಕತೆ ಮತ್ತು ಅದರ ಅನಿವಾರ್ಯತೆ ಬಗ್ಗೆ ವಿವರಣೆ ಇದೆ. ಲಾಭ, ಪೈಪೋಟಿ, ಶೋಷಣೆ, ನಿರುದ್ಯೋಗ, ಆರ್ಥಿಕ ಏರಿಳಿತಗಳು, ಆರ್ಥಿಕದುಃಸ್ಥಿತಿ ಮತ್ತು ಯುದ್ಧಗಳು ಇವುಗಳಿಲ್ಲದೆ ಬಂಡವಾಳ ಆರ್ಥಿಕವ್ಯವಸ್ಥೆ ಬದುಕಲು ಸಾಧ್ಯವಿಲ್ಲ. ಈ ರೀತಿ ಬಂಡವಾಳ ವ್ಯವಸ್ಥೆ ಇರಲು ಬಂಡವಾಳಶಾಹಿ ಉತ್ಪಾದನಾಕ್ರಮವೇ ಕಾರಣವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನಾಕಾರ್ಯ ಸಾಮೂಹಿಕವಾಗಿ ಕಾರ್ಮಿಕವರ್ಗದಿಂದ ನಡೆಯುತ್ತಿದೆ. ಆದರೆ, ಉತ್ಪಾದನೆಯಾದ ಸರಕುಗಳು ಮಾತ್ರ ಉತ್ಪಾದನೆ ಮಾಡಿರುವ ಕಾರ್ಮಿಕರ ಸ್ವತ್ತಾಗದೆ ಉತ್ಪಾದನಾ ಸಾಧನಗಳ ಮೇಲೆ ಸ್ವಾಮ್ಯವಿರುವವರಿಗೆ ಸೇರಿದ್ದಾಗಿವೆ. ಇದು ಆರ್ಥಿಕ ಶೋಷಣೆಗೆ, ಅವ್ಯವಸ್ಥೆಗೆ ಮತ್ತು ವರ್ಗವಿರಸಕ್ಕೆ ಕಾರಣವಾಗಿದೆ. ಲಾಭದಾಹ ಮತ್ತು ಶೋಷಣೆಯಿಂದ ಬಹು ಸಂಖ್ಯಾತ ಕಾರ್ಮಿಕವರ್ಗಕ್ಕೆ ಕಡಿಮೆ ಕೂಲಿ ಸಿಗುವಂತಾಗಿ ತಯಾರಾದ ಸರಕುಗಳನ್ನು ಕೊಳ್ಳುವವರಿಲ್ಲ ವಾಗಿದೆ. ಉತ್ಪನ್ನವಾದ ಸರಕುಗಳನ್ನು ನಾಶಮಾಡಬೇಕು, ಇಲ್ಲವೇ ಮಾರುಕಟ್ಟೆಗಳನ್ನು ಹುಡುಕಿ ಪೈಪೋಟಿಯಿಂದ ಮಾರಾಟಮಾಡಬೇಕು, ಇಲ್ಲವೇ ಉತ್ಪಾದನೆಯನ್ನು ಕಡಿಮೆ ಮಾಡಬೇಕು. ಯುದ್ಧ ಹತ್ತಿರದ ಬಂಧುವಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉತ್ಪಾದನೆ ಸಾಮೂಹಿಕವಾಗಿ ನಡೆ ಯಲು ಆಧುನಿಕ ಉತ್ಪಾದನಾಶಕ್ತಿಗಳು ಕಾರಣವಾಗಿವೆ. ಅವುಗಳನ್ನು ಉತ್ಪಾ ದನೆಯಲ್ಲಿ ಬಳಸುವುದಕ್ಕೆ ನೂರಾರು ಜನ ಕಾತ್ಮಕರು ಒಂದೆಡೆ ಸೇರಬೇಕು. ಆದರೆ ಈ ಉತ್ಪಾದನಾಶಕ್ತಿಗಳು ಆರ್ಥಿಕ ದುಃಸ್ಥಿತಿಗೆ ಕಾರಣಗಳಲ್ಲ; ಇವು ಗಳನ್ನು ಬಳಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ, ಬಂಡವಾಳಶಾಹಿ ಉತ್ಸಾ ದನಾಕ್ರಮ ಕಾರಣವಾಗಿವೆ. ಉತ್ಪಾದನಾಶಕ್ತಿಗಳು ಹೆಚ್ಚಿದಷ್ಟೂ ಅಧಿಕ ಉತ್ಪಾದನೆಗೆ ಸಹಕಾರಿಯಾಗಿವೆ. ಇವುಗಳು ವಿಜ್ಞಾನದ ಬೆಳವಣಿಗೆಯ ಫಲ, ವಿಜ್ಞಾನವನ್ನು ದೂರವಿಡಲು ಸಾಧ್ಯವೇ ಇಲ್ಲ. ಈಗ ಉತ್ಪನ್ನವಾಗು ತಿರುವುದಕ್ಕೆ ಸಹಸ್ರಪಾಲು ಹೆಚ್ಚು ಉತ್ಪನ್ನವಾದರೂ ಪ್ರಪಂಚದ ತುಂಬಾ ಅನ್ನ, ಬಟ್ಟೆ, ವಸತಿಯಿಲ್ಲದ ವ್ಯಕ್ತಿಗಳು ಉಳಿದೇ ಉಳಿಯುತ್ತಾರೆ.