- ೧೭೦ ವೈಜ್ಞಾನಿಕ ಸಮಾಜವಾದ ಬೆಳೆಯುವ ವಾತಾವರಣ, ಜೀವಿಸುತ್ತಿರುವ ಸಮಾಜ ವ್ಯವಸ್ಥೆ, ಪಡೆಯುವ ವಿದ್ಯಾಭ್ಯಾಸ, ಸಹವಾಸ, ಸಂಬಂಧಗಳು, ಇತ್ಯಾದಿ ಶಕ್ತಿಗಳು ನಿರ್ಧರಿಸು ಇವೆ. ಆತನಿಗೆ ಜನ್ಮತಃ ಶಾಶ್ವತವೆನ್ನುವ ಗುಣಗಳಿಲ್ಲ; ಕ್ರಮೇಣ ಬೆಳೆವಣಿಗೆಯಲ್ಲಿ ಆತನು ಸ್ವಭಾವಗಳನ್ನು ಹೊಂದುತ್ತಾನೆ. ಬಾಲ್ಯದಲ್ಲಿ ಶಿಕ್ಷಣ ಪಡೆದ ವ್ಯಕ್ತಿ ಒಂದು ರೀತಿಯಾಗುತ್ತಾನೆ, ಇಲ್ಲದವನು ಒಂದು ರೀತಿಯಾಗುತ್ತಾನೆ. ಬಡತನದಲ್ಲಿ ಸಿಕ್ಕಿರುವವನ ಸ್ವಭಾವ ಒಂದು ರೀತಿ ಯಾಗುತ್ತದೆ; ಶ್ರೀಮಂತ ಮನೆತನದಲ್ಲಿ ಜನಿಸಿದವನ ವರ್ತನೆಯೇ ಒಂದು ವಿಧವಾಗುತ್ತದೆ. ತನ್ನ ಕಷ್ಟ ಪರಂಪರೆಗಳನ್ನು ಪರಿಹರಿಸಿಕೊಳ್ಳಲು ಹಣ ಸಂಪಾದನೆಮಾಡಲು ಹೊರಟು ಸೋತ ವ್ಯಕ್ತಿಯ ವರ್ತನೆ ಒಂದು ಬಗೆ ಯಾಗುತ್ತದೆ ; ಗೆದ್ದಿರುವವನ ವರ್ತನೆ ಒಂದು ಬಗೆ ಇರುತ್ತದೆ. ಬಂಡವಾಳ ಶಾಹಿ ವ್ಯವಸ್ಥೆಯಲ್ಲಿರುವ ಆರ್ಥಿಕ ಏರಿಳಿತಗಳಿಗೆ, ಅನಿಶ್ಚಿತ ವಾತಾವರಣಕ್ಕೆ, ಅಭದ್ರತೆಗೆ ಸಿಕ್ಕಿರುವ ವ್ಯಾಪಾರಿ, ಉದ್ಯಮದಾರ, ದಳ್ಳಾಳಿ, ಕೂಲಿಗಾರ, ಇವರುಗಳ ಜೀವನ ನಿತ್ಯದೃಷ್ಟಾಂತಗಳಾಗಿವೆ. ಅನಿಶ್ಚಿತೆ ಮತ್ತು ಅಭದ್ರತೆ ಗಳಿಂದ ಪಾರಾಗಿ ಬದುಕಬೇಕು ಎಂಬ ಆರ್ಥಿಕ ಒತ್ತಾಯ ಮನುಷ್ಯ ಸ್ವಭಾವ ಮತ್ತು ವರ್ತನೆಯಮೇಲೆ ಪ್ರಭಾವ ಬೀರಿವೆ; ವ್ಯಕ್ತಿಯನ್ನು ಆವರಣದ ಕೈಗೊಂಬೆಯನ್ನಾಗಿ ಮಾಡಿವೆ. ಆದುದರಿಂದ ಮಾನವ ವ್ಯಕ್ತಿ ಗಳಲ್ಲಿ ಶಾಶ್ವತವಾದ ಸ್ವಭಾವ ಅಥವಾ ಗುಣಗಳಿಲ್ಲ. ಹೊಸ ಆವರಣದಲ್ಲಿ ಹೊಸ ಗುಣಗಳು ಬರುವುವು. ಸಮಾಜದ ಕುಂದುಕೊರತೆಗಳಿಗೆ ಮನುಷ್ಯ ಸ್ವಭಾವವಾಗಲೀ ಅಥವಾ ನೈತಿಕಚ್ಯುತಿಯಾಗಲೀ ಕಾರಣವಾಗಿಲ್ಲ. ಒಂದು ಪಕ್ಷ ನೈತಿಕ ಚ್ಯುತಿ d ಯಿಂದ ಮಾನವನ ಅಧೋಗತಿಯು ಟಾಗಿದೆ ಎಂದು ಭಾವಿಸುವುದಾದರೂ, ಇಷ್ಟೊಂದು ನೀತಿಗಳ ಉಪದೇಶ ನಡೆದಿದ್ದರೂ ನೈತಿಕ ಸಮಸ್ಯೆ ಏಕೆ ಪರಿಹಾರ ಹೊಂದಿಲ್ಲ ಎಂಬ ಸಮಸ್ಯೆಗೆ ಉತ್ತರ ದೊರೆಯುವುದಿಲ್ಲ. ಜನರು ನೀತಿ ಮಾರ್ಗವನ್ನು ಬೇಡವೆಂದು ನಿರಾಕರಿಸುತ್ತಿದ್ದಾರೆಯೇ ಅಥವಾ ಮನಸ್ಸು ಮಾಡಿದರೂ ಜೀವನದಲ್ಲಿ ಅವುಗಳಿಗೆ ಅವಕಾಶವಿಲ್ಲವೇ ಎಂಬ ಸಮಸ್ಯೆ ತಲೆಹಾಕುತ್ತದೆ. ಮುಖ್ಯವಾಗಿ, ಸುಗುಣಗಳು ಜೀವನದಲ್ಲಿ ಪ್ರಕಾ ಶಿತವಾಗಲು ಸಮಾಜ ವ್ಯವಸ್ಥೆಯಲ್ಲಿರುವ ಪೈಪೋಟಿ, ನೂಕುನುಗ್ಗಲು, ಅಭದ್ರತೆ, ದಾರಿದ್ರ, ನಾಳೆ ಏನೆಂಬ ಚಿಂತನೆ ಮತ್ತು ಡಾಂಬಿಕ ಬದುಕು
ಪುಟ:ಕಮ್ಯೂನಿಸಂ.djvu/೧೮೪
ಗೋಚರ