ಸಮಾಜವಾದದ ಸಮಸ್ಯೆಗಳು ವ್ಯಾಸಂಗಮಾಡಿಯೇ ತೀರಬೇಕು. ಪ್ರತಿ ಸಮಾಜ ದಾಟಿಬಂದಿರುವ ಆರ್ಥಿಕ ಘಟ್ಟವನ್ನೂ ಮತ್ತು ಅದು ಇರುವ ಪ್ರಸ್ತುತ ಆರ್ಥಿಕ ಘಟ್ಟವನ್ನೂ ಪತ್ತೆ ಹಚ್ಚಬೇಕು, ತರುವಾಯ ಆಯಾ ಮಟ್ಟಕ್ಕೆ ಹೊಂದಿಕೊಂಡಿರುವ ರಾಜಕೀಯ ಮತ್ತು ಶಾಸನಗಳನ್ನು, ಮತೀಯ ಮತ್ತು ದಾರ್ಶನಿಕ ತತ್ತ್ವ ಗಳನ್ನು, ಭಾವನೆಗಳನ್ನು ತರ್ಕಿಸಲು ಆರಂಭಿಸಬೇಕು. ಕೂಲಂಕಷವಾದ ಪರೀಕ್ಷೆ ಬಹು ಸ್ವಲ್ಪಮಟ್ಟಿಗೆ ಆಗಿದೆ. ಆದರೆ ಇಂತಹ ಮೂರನೆಯದಾಗಿ, ಐತಿಹಾಸಿಕ ಭೌತವಾದದ ಪ್ರಕಾರ ಕಟ್ಟ ಕಡೆಯ ದಾಗಿ ಇತಿಹಾಸವನ್ನು ನಿರ್ಧರಿಸುವ ಅಂಶವೆಂದರೆ (the deter- mining element in history) ವಾಸ್ತವಿಕ ಜೀವನದಲ್ಲಿ ನಡೆಯು ತಿರುವ ಉತ್ಪಾದನೆ ಮತ್ತು ಮರು ಉತ್ಪಾದನೆಯಾಗಿದೆ (is ultimately the production and reproduction in real life). ಇಷ್ಟು ಮಾತ್ರವೇ ಹೊರತು ಐತಿಹಾಸಿಕ ಭೌತವಾದ ಇನ್ನೇನನ್ನೂ ಹೇಳಿಲ್ಲ. ಆದುದರಿಂದ ಯಾರಾದರೂ ಅಪಾರ್ಥಮಾಡಲು ಯತ್ನಿಸಿ ಆರ್ಥಿ ಕಾಂಶವೇ ಎಲ್ಲವನ್ನೂ ನಿರ್ಧರಿಸುವ ಸಂಗತಿ ಎಂದು ತಿಳಿಸುವುದಾದರೆ ಅವರುಗಳು ಐತಿಹಾಸಿಕ ಭೌತವಾದವನ್ನು ಅರ್ಥವಿಲ್ಲದ ಅಸಂಬದ್ಧ ಪ್ರಲಾಪಕ್ಕೆ ಇಳಿಸುತ್ತಿದ್ದಾರೆ ಎಂದು ಹೇಳಬಹುದು. ನಾಲ್ಕನೆಯದಾಗಿ, ಆರ್ಥಿಕ ಪರಿಸ್ಥಿತಿ ಆಧಾರ ಸ್ವರೂಪವಾಗಿದೆ. ಹೊದಿಕೆಯ ರೂಪದಲ್ಲಿರುವ ಅನೇಕ ಅಂಶಗಳಾದ (the various elements of the superstructure) ವರ್ಗ ಹೋರಾಟದ ರಾಜಕೀಯ ರೂಪಗಳು ಮತ್ತು ಅದರಿಂದಾದ ಪರಿಣಾಮಗಳು, ಹೋರಾಟ ದಲ್ಲಿ ವಿಜಯವನ್ನು ಗಳಿಸಿ ವರ್ಗಗಳು ಜಾರಿಗೆ ತಂದ ಸಂವಿಧಾನಗಳು, ಮತ್ತು ವಿವಿಧ ಶಾಸನಗಳು, ಮತ್ತು ಹೋರಾಟದಲ್ಲಿ ಭಾಗವಹಿಸಿರುವ ವರ್ಗಗಳ ಮನಸ್ಸಿನಲ್ಲಿ ಉಂಟಾದ ಪ್ರತಿಕ್ರಿಯಗಳು, ರಾಜಕೀಯ ನ್ಯಾಯ ಮತ್ತು ದಾರ್ಶನಿಕ ತತ್ತ್ವಗಳು, ಮತೀಯ ಭಾವನೆಗಳು ಮತ್ತು ಇವುಗಳು ಬೆಳೆವಣಿಗೆ ಹೊಂದಿ ಆದ ಒಂದು ಪಂಥ ಅಥವಾ ಸಿದ್ಧಾಂತ - ಇವುಗಳೂ ಸಹ ಇತಿಹಾಸದ ಮುಂದೋಟದ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ ಮತ್ತು ಅನೇಕ ಸಂಧರ್ಭಗಳಲ್ಲಿ ಇತಿಹಾಸದ ರೂಪ ವನ್ನು (form) ನಿರ್ಧರಿಸುವುದರಲ್ಲೂ ಹೆಚ್ಚು ಪಾತ್ರ ತಾಳಿವೆ. ಈ ಅಂಶ
ಪುಟ:ಕಮ್ಯೂನಿಸಂ.djvu/೧೮೭
ಗೋಚರ