ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದ ಮತ್ತು ಭಾರತ ೧೬೭ ವಾದದ ಆಗಮನ ಅನಿವಾರ್ಯವೆಂದು ಹೇಳಿದ್ದು ನಿಜ. ಹಾಗೆಯೇ ಬಂಡ ವಾಳಶಾಹಿ ವ್ಯವಸ್ಥೆ ಹೇಗೆ ಪತನ ಹೊಂದುತ್ತದೆ ಎಂಬುದರ ಬಗ್ಗೆ ವಿವರಣೆ ಯಿತ್ತು, ಅದು ಕಾರ್ಮಿಕವರ್ಗದ ಸಂಘಟನೆ, ರಾಜಕೀಯ ಜಾಗೃತಿ, ಐಕ್ಯ ಮತ್ಯ, ಅವರು ಹೂಡುವ ಕ್ರಾಂತಿಕಾರಿ ಚಳವಳಿ ಇವುಗಳಿಂದ ಸಮಾಜ ವಾದೀ ವ್ಯವಸ್ಥೆ ಬರುತ್ತದೆಂದು ತಿಳಿಸಿದ್ದಾರೆ.. ಸಮಾಜವಾದೀ ವ್ಯವಸ್ಥೆ ಕಳಿತಫಲ ಜಾರಿ ಬೀಳುವಂತೆ ತಟ್ಟನೆ ಒಂದು ದಿವಸ ಉದ್ಭವಿಸುವುದಿಲ್ಲ. ಕಾರ್ಮಿಕವರ್ಗದ ಸಂಘಟಿತ ಹೋರಾಟವಿಲ್ಲದೆ ಬಂಡವಾಳವರ್ಗ ಉರುಳು ವುದಿಲ್ಲ; ಹೋರಾಟ ಅಗತ್ಯವಾಗಿದೆ. ಆದರೆ ಅನೇಕವೇಳೆ ಕಾರ್ಮಿಕವರ್ಗ ಹೂಡುವ ಚಳವಳಿ ಸಫಲವಾಗದೇ ಇರಬಹುದು. ಬಂಡವಾಳವರ್ಗದಿಂದ ಬರುವ ಬಲವಾದ ಪ್ರತಿಭಟನೆಯನ್ನು ಎದುರಿಸಲು ಅಶಕ್ತವಾಗಿ ಕಾರ್ಮಿ ಕವರ್ಗ ಅನೇಕವೇಳೆ ಸೋತಿದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲಿರುವ ವಾಸ್ತವಿಕ ಆರ್ಥಿಕ ಪರಿಸ್ಥಿತಿ ಕಾರ್ಮಿಕವರ್ಗದ ಚಳವಳಿಯನ್ನು ನಿರ್ಧರಿಸುತ್ತದೆ. ಜೊತೆಗೆ, ಬಂಡವಾಳ ಶಾಹಿ ರಾಷ್ಟ್ರಗಳು ಹೊಂದಿರುವ ವಸಾಹತುಗಳು, ಲಾಭದಾಯಕ ಉದ್ಯಮ, ಗಳಿಸಿರುವ ಸಂಪತ್ತು ಇವುಗಳು ಬಂಡವಾಳಶಾಹಿ ವ್ಯವಸ್ಥೆಗೆ ಕಾರ್ಮಿಕವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲು ಸಹಾಯಕ್ಕೆ ಬರುತ್ತವೆ. ಸ್ವಲ್ಪ ಹೆಚ್ಚು ಕೂಲಿ ಮತ್ತು ಇತರ ಸುಧಾರಣೆಗಳು ಕಾರ್ಮಿಕ ವರ್ಗದಲ್ಲಿ ತೃಪ್ತಿ ಮನೋಭಾವವನ್ನು ತರುತ್ತವೆ; ವರ್ಗ ವೈಷಮ್ಯದ ತೀಕ್ಷಣತೆಯನ್ನು ಕಡಿಮೆ ಮಾಡುತ್ತವೆ. ಕಾರ್ಮಿಕವರ್ಗ ಸುಧಾರಕ ತತ್ರಕ್ಕೆ ಮನಸೋಲುತ್ತದೆ ಮತ್ತು ಕ್ರಾಂತಿಕಾರಿ ಚಳವಳಿಯ ಪಥದಿಂದ ದೂರ ಸರಿಯುತ್ತದೆ. ಇದರಿಂದಾಗಿ ಬಂಡವಾಳಶಾಹಿ ವ್ಯವಸ್ಥೆಯ ಪತನ ಸ್ವಲ್ಪ ಕಾಲದವರೆಗೆ ಮುಂದಕ್ಕೆ ತಳ್ಳುತ್ತದೆ. ಆದರೆ ಬಂಡವಾಳ ಶಾಹಿ ವ್ಯವಸ್ಥೆ ಜನ್ಮವಿತ್ತಿರುವ ವಿರಸಗಳು ಬಂಡವಾಳಶಾಹಿ ವ್ಯವಸ್ಥೆಯನ್ನು ಬಿಕ್ಕಟ್ಟಿಗೆ ಸಿಕ್ಕಿಸುತ್ತಲೇ ಇರುತ್ತವೆ. ಎಲ್ಲೆಲ್ಲಿ ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲು ಅಸಮರ್ಥವಾಗಿದೆಯೋ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಎದ್ದಿರುವ ಕಾರ್ಮಿಕರ ಚಳವಳಿ 1 (1) ಪುಟ ೧೪೮ ನೋಡಿ, 12