ಸಮಾಜವಾದ ಮತ್ತು ಭಾರತ ೧೭೯ ಆರಂಭದಿಂದ ಕೈಗಾರಿಕಾರಾಷ್ಟ್ರವಾಗಿರಲಿಲ್ಲ; ಕ್ರಮೇಣ ಕೈಗಾರಿಕಾ ಮುಂ ದೋಟ ಮತ್ತು ಕೈಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಕೆಲವು ದೇಶಗಳಲ್ಲಿ ಬಂದಿತು. ಕೆಲವು ಋತಮಾನಗಳ ಹಿಂದೆ ಪ್ರಪಂಚದ ಎಲ್ಲಾ ರಾಷ್ಟ್ರಗಳ ಮುಖ್ಯ ಕಸಬು ವ್ಯವಸಾಯವೇ ಆಗಿ ಉಳಿದಿತ್ತು. ಈಗ ನೋಡುವುದಾ ದರೆ ವ್ಯವಸಾಯವೇ ಪ್ರಧಾನ್ಯವಾಗಿರುವ ಮತ್ತು ಹಿಂದುಳಿದ ರಾಷ್ಟ್ರಗಳಲ್ಲೂ ಸಹ ಕೈಗಾರಿಕೆ ಮುಂದುವರಿದು ಕೈಗಾರಿಕಾ ಬಂಡವಾಳಶಾಹಿ ವ್ಯವಸ್ಥೆ ಆಚರಣೆಗೆ ಬಂದಿದೆ. ಬೆಸೆದಿವೆ. ಅಲ್ಲದೆ, ಮಾರಾಟದ ದೃಷ್ಟಿಯಿಂದ ಸರಕುಗಳ ತಯಾರಿಕೆ, ಪೈಪೋ ಟಿಯ ವ್ಯಾಪಾರ, ಲಾಭದಾಹ, ವಸಾಹತು ಮತ್ತು ಮಾರುಕಟ್ಟೆಗಾಗಿ ಬೇಟೆ, ಲಾಭದ ದೃಷ್ಟಿಯಿಂದ ಬಂಡವಾಳದ ರಫ್ತು ಎಲ್ಲಾರಾಷ್ಟ್ರಗಳನ್ನೂ ಒಂದೇ ಬಂಡವಾಳ ಆರ್ಥಿಕ ವ್ಯವಸ್ಥೆಯ ಸರಪಣಿಗೆ ಕೊಂಡಿಗಳಂತೆ ಆರ್ಥಿಕವ್ಯವಸ್ಥೆಯ ಕೆಲವು ಶತಮಾನಗಳ ಹಿಂದೆ ರಾಷ್ಟ್ರಗಳ ಆರ್ಥಿಕವ್ಯವಸ್ಥೆಯಲ್ಲಿ ಇದ್ದ ಸ್ವಯಂಪೂರ್ಣತೆ ಮತ್ತು ಇತರ ರಾಷ್ಟ್ರಗಳೊಡನೆ ಇದ್ದ ಅಲ್ಪ ಸ್ವಲ್ಪದ ವ್ಯಾಪಾರ ಸಂಬಂಧ ಇವುಗಳು ನಶಿಸಿವೆ. ಬಂಡವಾಳಶಾಹಿ ವ್ಯವಸ್ಥೆ ತನ್ನ ಚಲನವಲನಗಳಿಂದ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನೂ ಒಂದಾಗಿ ಮಾಡಿದೆ. ಒಂದು ಬಂಡವಾಳಶಾಹಿ ರಾಷ್ಟ್ರದಲ್ಲಿ ಬಂಡವಾಳಶಾಹಿ ಉತ್ಪಾ ದನಾಕ್ರಮದಲ್ಲಿ ಉಂಟಾಗುವ ಏರಿಳಿತಗಳು ಎಲ್ಲಾ ರಾಷ್ಟ್ರಗಳಿಗೂ ತಟ್ಟು ಇವೆ. ಒಂದು ಬಂಡವಾಳಶಾಹಿ ರಾಷ್ಟ್ರ ಮುಳುಗುವ ಸ್ಥಿತಿಗೆ ಬಂದರೆ, ಅದು ಮುಳುಗುವುದರ ಜೊತೆಗೆ ಇತರ ಬಂಡವಾಳಶಾಹಿ ರಾಷ್ಟ್ರಗಳನ್ನೂ ಸಹ ಎಳೆದುಕೊಂಡು ಮುಳುಗುತ್ತದೆ. ಮಾರ್ಕ್ಸ್-ಏಂಗರು ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ತಮ್ಮ ವಿಮರ್ಶೆಯನ್ನು ಪ್ರಕಟಿಸಿದಾಗ ಕೈಗಾರಿಕಾ ಬಂಡವಾಳಶಾಹಿ ವ್ಯವಸ್ಥೆ (Industrial Capitalisim) ಅಷ್ಟಾಗಿ ಪ್ರಪಂಚದ ಎಲ್ಲ ಕಡೆಯಲ್ಲೂ ಪ್ರಸರಿಸಿರಲಿಲ್ಲ. ಮೊಟ್ಟ ಮೊದಲನೆಯ ಬಾರಿಗೆ ಇಂಗ್ಲೆಂಡಿನಲ್ಲಿ ಅವತರ ಣಿಕೆ ಹೊಂದಿದ್ದ ಕೈಗಾರಿಕಾ ಬಂಡವಾಳಶಾಹಿ ವ್ಯವಸ್ಥೆಯ ವಿಮರ್ಶೆ ಅವರ ಕರ್ತವ್ಯವಾಯಿತು. ತಮ್ಮ ವಿಮರ್ಶೆಯ ಮೂಲಕ ಬಂಡವಾಳಶಾಹಿ ವ್ಯವಸ್ಥೆಯ ಚಲನಾನಿಯಮವನ್ನು ಪತ್ತೆ ಹಚ್ಚಿದರು. ಕೈಗಾರಿಕಾ ಬಂಡ ವಾಳಶಾಹಿ ವ್ಯವಸ್ಥೆ ವಿರಸಪೂರಿತವಾದದ್ದೆಂದೂ ಕಾರ್ಮಿಕವರ್ಗದ ಶೋಷ
ಪುಟ:ಕಮ್ಯೂನಿಸಂ.djvu/೧೯೩
ಗೋಚರ