ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ವೈಜ್ಞಾನಿಕ ಸಮಾಜವಾದ ಭಾರತದಲ್ಲಿ ಆಧುನಿಕ ಅಥವಾ ವೈಜ್ಞಾನಿಕ ಸಮಾಜವಾದ ಮೂಡಲು ಪ್ರಬು ದ್ಧಾವಸ್ಥೆಗೆ ಬಂದಿದ್ದ ಬಂಡವಾಳಶಾಹಿ ವ್ಯವಸ್ಥೆಯಾಗಲೀ ಅಥವಾ ಅದರ ಆವಶ್ಯಕತೆಯಾಗಲೀ ಇರಲಿಲ್ಲ. ಆದರೆ ಈಗ ಬಂಡವಾಳಶಾಹಿ ಉತ್ಪಾ ದನಾಕ್ರಮದ ಮುಂದೋಟದೊಡನೆ ದೇಶ ವಿದೇಶಗಳ ಬಂಡವಾಳಶಾಹಿ ವ್ಯವಸ್ಥೆ ವಿಶ್ವ ಬಂಡವಾಳಶಾಹಿ ವ್ಯವಸ್ಥೆಯ ಒಂದು ಭಾಗವಾಗಿದೆ; ಆಧುನಿಕ ಸಮಾಜವಾದ ಅದರ ಪಾಶ್ಚಾತ್ಯತೆಯನ್ನು ಕಳೆದುಕೊಂಡು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ತಾಳಿದೆ ; ಮಾರ್ಕ್ಸ್-ಏಂಗಲ್ಬರ ವಾದ ಎಲ್ಲಾ ದೇಶಗಳಿಗೂ ಅನ್ವಯವಾಗುತ್ತದೆ. ಕಮ್ಯೂನಿಸ್ಟ್ ಚಳವಳಿಯು ದೇಶೀಯ ಚಳವಳಿ ಮತ್ತು ಅಂತರರಾಷ್ಟ್ರೀಯ ಚಳವಳಿ ಎರಡೂ ಆಗುತ್ತದೆ. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿ ರಾಷ್ಟ್ರೀಯ ಗಾರರಾದರು, ಈ ಹಲವು ಮಾರ್ಪಾಡುಗಳಿಂದ ಕೂಡಿದ್ದಾಗಿ ಉತ್ಪಾದನಾ ಕ್ರಮ ಮತ್ತು ವ್ಯವಸ್ಥೆ ಮೊದಲಿನಂತೆಯೇ ಹತ್ತೊಂಭತ್ತನೇ ಶತಮಾನದ ಅಂತ್ಯದ ವರೆಗೂ ಮುಂದುವರೆಯಿತು, ಈಗಲೂ ಸಹ ಪೂರ್ಣವಾಗಿ ನಶಿಸಿಲ್ಲ. ಐತಿಹಾಸಿಕ ಭೌತವಾದದ ದೃಷ್ಟಿಯಲ್ಲಿ ಭಾರತದ ಆರ್ಥಿಕ ಇತಿಹಾಸ ಆಸಮಬೆಳವಣಿಗೆ ಯ ನಿಯಮಕ್ಕೆ ಒಳಪಟ್ಟಿದ್ದಾಗಿಯ, ವ್ಯವಸಾಯವೇ ಪ್ರಾಧಾನ್ಯವಾ ಗುಳ್ಳ ದೇಶವಾಗಿಯೂ, ಉತ್ಪಾದನಾ ರೀತಿ ಅತಿ ಹಿಂದುಳಿದ ಉತ್ಪಾದನಾ ಸಾಧನೋಪಾಯಗಳಿಂದ (The Technique of production) ನಡೆಯುತ್ತಿರುವ ದೇಶವಾಗಿಯೂ ಇದೆ. ಮಾರ್ಕ್ಸ್-ಏಂಗೆಲ್ಸ ರು ಭಾರತದ ಆರ್ಥಿಕ ವ್ಯವಸ್ಥೆಯನ್ನು ಬಹಳ ಕಾಲ ನಿಂತೆಡೆಯಲ್ಲಿ ನಿಂತಿರುವ ($tagnatory and vegetative life) ವ್ಯವಸ್ಥೆ ಎಂದು ತಿಳಿಸಿದ್ದಾರೆ. (ಮಾರ್ಕ್ಸ್ -ಏ-ಗೆಲ್ಲರ ಆರಿಸಲ್ಪಟ್ಟ ಬರಹಗಳು, ಪುಟ 517). ಇಂತಹ ವ್ಯವಸ್ಥೆಯಲ್ಲಿ ಸಾಮಾಜಿಕ ಕ್ರಾಂತಿಯು ಬ್ರಿಟಿಷ್ ವ್ಯಾಪಾರಿಗಳು ತಮ್ಮ ಲಾಭದಾಹ ದೃಷ್ಟಿಯಿಂದ ತಂದ ಹಬೆಯಂತ್ರ ಮತ್ತು ಅನಿರ್ಬಂಧಿತವ್ಯಾಪಾರ (Free Trade) ಗಳಿಂದ ಉಂಟಾ ಗಿದೆ ಎಂದು ತಿಳಿಸಿದ್ದಾರೆ (ಪುಟ 517).

  • 20 ನೇ ಶತಮಾನಾನಂತರ ಭಾರತದ ಅತಿ ಹಿಂದುಳಿದ ಉತ್ಪಾದನಾ ರೀತಿ

ಬದಲಾವಣೆಗೆ ಒಳಗಾಗಿದೆ, ಬಂಡವಾಳ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು ವ್ಯವಸಾಯವನ್ನೆ ಪ್ರಾಧಾನ್ಯವಾಗಿ ಹೊಂದಿದ್ದ ದೇಶದ ಆರ್ಥಿಕ ವ್ಯವಸ್ಥೆಯನ್ನು ಆವರಿಸಿವೆ, ಬಂಡವಾಳಶಾಹಿ ಕೈಗಾರಿಕಾ ಕ್ಷೇತ್ರವೂ ಸಹ ಜೊತೆಯಲ್ಲೇ ಬೆಳೆಯುತ್ತಾ ಬಂದಿದೆ.

  • (1) 2 ನೇ ಅಧ್ಯಾಯು ನೋಡಿ.

ಕುಮಾರ