ಪುಟ:ಕಮ್ಯೂನಿಸಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜ ವಾದ ಏಂಗೆಲ್ಸ್ ಸಹ ಬಂದನು. 8, ಸಮಾಜವಾದೀ ತತ್ಯ ನಿರೂಪಣೆಯಲ್ಲಿ ಗೊಂದಲವನ್ನು ಮಾರ್ಕ್-ಏಂಗೆಲ್ಪರು ಕಂಡರು. ಆ ಅಧ್ಯಯನ ಪ್ರಚಾರ ದಲ್ಲಿದ್ದ ಸಮಾಜವಾದೀ ತತ್ತ್ವಗಳ ನಿಷ್ಪ ಯೋಜನೆಯನ್ನು ವ್ಯಕ್ತಪಡಿಸಿತು. ಸಂಪಾದಕನಾದನು, ಆದರೆ ಕೆಲವು ಕಾಲದಲ್ಲೇ ಪತ್ರಿಕೆಯ ಮಾಲೀಕರಿಂದ ಒತ್ತಾಯ ಬಂದು ಸಂಪಾದಕತ್ವಕ್ಕೆ ರಾಜೀನಾಮೆ ಇತ್ತನ್ನು ಫ್ರಾನ್ಸ್ ದೇಶದ ಸಮಾಜ ವಾದೀ ತತ್ಯದಿಂದ ಆಕರ್ಷಿಸಲ್ಪಟ್ಟು, ಅದರ ಅಧ್ಯಯನಕ್ಕಾಗಿ ಪ್ಯಾರಿಸ್ ನಗರಕ್ಕೆ ಬಂದನು, ಅಲ್ಲಿ ಸಮಾಜವಾದಿ ಚಳವಳಿಯಲ್ಲಿ ಭಾಗವಹಿಸಿದನು 1845 ರಲ್ಲಿ ಪ್ಯಾರಿಸ್ ನಗರದಿಂದ ಹೊರದೂಡಲ್ಪಟ್ಟು, ಬ್ರಸಲ್ಸ್ ನಗರಕ್ಕೆ ಬಂದನು, ಅಲ್ಲಿಂದಲೂ ಸಹ 1848 ರಲ್ಲಿ ಹೊರದೂಡಲ್ಪಟ್ಟು ತನ್ನ ಜೀವನದ ಅಂತ್ಯದವರೆಗೂ ಲಂಡನ್ ನಗರದಲ್ಲೇ ನೆಲೆಸಿದನು, ಈ ಪ್ರತಿಭಾನ್ವಿತನ ಜೀವನ ಚರಿತ್ರೆಯನ್ನು ಪ್ರಾನ್ಸ್ ಮಹಡಿಂಗ್ರವರು ಅತ್ಯಂತ ವಿಹಂಗಮವಾಗಿ ಚಿತ್ರಿಸಿದ್ದಾರೆ, ಅಗತ್ಯವಾಗಿ ಓದಲೇಬೇಕು (Karl Marx: Story of His Life: By F. Mehring, Bodley Flead, London.) . (2) ಫ್ರೆಡರಿಕ್ ಏಂಗಲ್ಸ್ (1820-1895)-28 ನೇ ನವಂಬರ್ 1820 ರಲ್ಲಿ ಜರ್ಮನೀದೇಶದ ಬಾರ್‌ಮನ್ ಎಂಬ ಊರಿನಲ್ಲಿ ಜನಿಸಿದನು. ಈತನ ತಂದೆ ಹತ್ತಿ ಕಾರ್ಖಾನೆಯ ಮಾಲೀಕರು, ಮಾರ್ಕ್ಸ್ ಮತ್ತು ಏಂಗೆಲ್ಸ್ರ ಸಮಾಗಮ ನಡದು ಈರ್ವರೂ ಏಕಾಭಿಪ್ರಾಯದಿಂದಿರುವುದನ್ನು ಕಂಡರು. 1848 ರಲ್ಲಿ ಮಾರ್ಕ್ಸ್ ಪ್ರಕಟಿಸಿದ ಕಾನಿಸ್ಟ್ ರ ಪ್ರಣಾಳಿಕೆಯಬರೆವಣಿಗೆಗೆ ನೆರವಾದನು ಇಂಗ್ಲೆಂಡಿನಲ್ಲಿ ತನ್ನ ತಂದೆಯ ಹತ್ತಿಬಟ್ಟೆಯ ಗಿರಣಿಯೊಂದರಲ್ಲಿದ್ದುಕೊಂಡು ಮಾರ್ಕ್ಸ್‌ಗೆ ನೆರ ವಾಗಿ ನಿಂತನು, ಮಾರ್ಕ್ಸ್-ಏಂಗೆಲ್ಸ್ರ ಸ್ನೇಹ ವರ್ಣಿಸಲಸಾಧ್ಯವಾದದ್ದು. ಅದೊಂದು ಚರಿತ್ರಾರ್ಹ ಅಮರಗೆಳೆತನ ಮಾರ್ಕ್ಸ್ ಅತ್ಯಂತ ಬಡತನಕ್ಕೆ ಸಿಕ್ಕಿ ನರಳುತ್ತಿರುವಾಗ ಏಂಗೆಲ್ಸ್ ಆತನ ಸಹಾಯಕ್ಕೆ ಬಂದನು, ಏಂಗೆಲ್ಸ್‌ನ ಸಹಾಯ ವಿಲ್ಲದಿದ್ದರೆ ಮಾರ್ಕ್ಸ್ ತನ್ನ ಅತಿ ಮುಖ್ಯ ಗ್ರಂಥವಾದ ' ಕ್ಯಾಪಿಟಲ್ ' ಎಂಬ ಗ್ರಂಥವನ್ನು ಬರೆದು ಮುಗಿಸುತ್ತಿದ್ದನೋ ಇಲ್ಲವೋ ತಿಳಿಯದು, ವೈಜ್ಞಾನಿಕ ಸಮಾಜವಾದ ಮಾರ್ಕ್ಸ್‌ವಾದವೆಂದು ಹೆಸರು ಪಡೆದಿದ್ದರೂ ಏಂಗೆಲ್ಸ್ ಆ ತತ್ರ ಪ್ರತಿಪಾದನೆಯಲ್ಲಿ ಸಮಭಾಗಿ, ಮಾರ್ಕ್ಸ್ ಸ್ಥಾನಮೂರ್ತಿಯ ಹಾಗೆ ಸಂಶೋಧನೆಯಲ್ಲಿ ತೊಡಗಿದ್ದರೆ, ಏಂಗೆಲ್ಸ್ ಆ ಸಂಶೋಧನೆಯ ಜೊತೆಗೆ ತನ್ನ ಶೋಧನೆಯನ್ನೂ ಸೇರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರಸಾರಮಾಡುವ ಉತ್ಸವಮೂರ್ತಿಯಾದನು. 2 ಈತನ ಜೀವನ ಚರಿತ್ರೆಯನ್ನು ಸೆಲ್ಲಾ ಕ ಕೊಟ್ಸ್ ರವರು ಬಹು ಸುಂದರ ವಾಗಿ ಚಿತ್ರಿಸಿದ್ದಾರೆ. (The Life and Teachings of Friedrich Engels: By Zelda K coates : Lawrence and Wishart, Ltd., London )