ಪುಟ:ಕಮ್ಯೂನಿಸಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ವೈಜ್ಞಾನಿಕ ಸಮಾಜವಾದ ಒಂದೇ ತರನಾಗಿರದೆ ಆಯಾ ಕಾಲದಲ್ಲಿ ಆ ಸಮಾಜದಲ್ಲಿರುವ ಉತ್ಪಾದನಾ ಶಕ್ತಿಗಳಿಗೆ (ಉತ್ಪಾದನೆ ಮಾಡುವುದಕ್ಕೆ ಸಹಾಯಕವಾಗಿರುವ ವಸ್ತುಗಳು ನೇಗಿಲು, ಪಿಕಾಶಿ, ಗುದ್ದಲಿ, ಹಾರೆ, ಯಂತ್ರ, ಇತ್ಯಾದಿ) ಹೊಂದಿಕೊಂಡಿ ರುತ್ತದೆ. ಉತ್ಪಾದನಾ ಶಕ್ತಿಗಳು ಉತ್ಪತ್ತಿಮಾಡುವ ವಿಧಾನವನ್ನು ನಿರ್ಧರಿಸುತ್ತವೆ. ಹಾಗೆಯೇ ಉತ್ಪಾದನಾ ಸಂಬಂಧಗಳೂ ನಿರ್ಧರವಾಗು ಇವೆ. ಈ ಉತ್ಪಾದನಾ ಸಂಬಂಧಗಳ ಸಮುದಾಯ ಸಮಾಜದ ಆರ್ಥಿಕ ವ್ಯವಸ್ಥೆ ಯಾಗುತ್ತದೆ. ಇದೇ ಪ್ರತಿಯೊಂದು ಸಮಾಜದ ಮುಖ್ಯವಾದ ಅಸ್ತಿಭಾರ. (2) ಈ ಅಸ್ತಿಭಾರದ ಮೇಲೆ ಪ್ರತಿಯೊಂದು ಸಮಾಜದ ಸಾಮಾ ಜಿಕ, ರಾಜಕೀಯ ನ್ಯಾಯ ವ್ಯವಸ್ಥೆಗಳು ಮತ್ತು ಇವುಗಳನ್ನು ಪ್ರತಿ ಬಿಂಬಿಸುವ ರೀತಿಯಲ್ಲಿ ಮನೋಭಾವಗಳು ಜನ್ಮತಾಳುತ್ತವೆ. ಒಟ್ಟಿನಲ್ಲಿ ಉತ್ಪಾದನಾ ರೀತಿ ಸಾಮಾಜಿಕ, ರಾಜಕೀಯ ಮತ್ತು ಪ್ರಾಜ್ಞ ಜೀವನದ ಮೇಲೆ ಪ್ರಭಾವ ಬೀರುತ್ತದೆ ; ಅವುಗಳ ಸ್ವಭಾವವನ್ನು ನಿರ್ಧರಿಸುತ್ತದೆ. ಸಮಾಜದಲ್ಲಿ ಜನರು ಹೊಂದಿರಬಹುದಾದ ಮನೋಭಾವಕ್ಕೂ, ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನಕ್ಕೂ ಸಂಬಂಧವಿದೆ. ಅವರು ವಾಸ್ತವವಾಗಿ ನಡೆಸುತ್ತಿರುವ ಜೀವನ ಅವರುಗಳ ಮನೋಭಾವವನ್ನು ರೂಪಿಸಿದೆಯೇ ವಿನಹ ಮನೋಭಾವ ಅವರು ನಡೆಸುತ್ತಿರುವ ಜೀವನ ವನ್ನು ರೂಪಿಸಿಲ್ಲ. (3) ಜೀವನ ಹೀಗೆ ಸಾಗುತ್ತಾ ಉತ್ಪಾದನಾ ಶಕ್ತಿಗಳು ವೃದ್ಧಿ ಯಾಗುತ್ತಾ ಇರುತ್ತವೆ. ಒಂದು ಕಾಲದಲ್ಲಿ ಒಂದು ಉತ್ಪಾದನಾ ರೀತಿ ಮತ್ತು ವ್ಯವಸ್ಥೆಗೆ ಒಳಪಟ್ಟು ಕೆಲಸಮಾಡುತ್ತಲಿರುವ ವೃದ್ಧಿ ಹೊಂದು ತಿರುವ ಉತ್ಪಾದನಾ ಶಕ್ತಿಗಳು, ಅವು ಅದುವರೆಗೂ ತಮಗೆ ಆಶ್ರಯ ವಿತ್ತಿದ್ದ ಉತ್ಪಾದನಾ ಕ್ರಮ ಮತ್ತು ಸ್ವಾಮ್ಯ ಸಂಬಂಧಗಳೊಡನೆ ವಿರಸ ತಾಳುತ್ತವೆ. ಈ ಸ್ವಾಮ್ಯ ಸಂಬಂಧಗಳು ಉತ್ಪಾದನಾ ಶಕ್ತಿಗಳ ಬೆಳ ವಣಿಗೆಗೆ ಅಡ್ಡಿ ಬರುತ್ತವೆ. ಈ ರೀತಿ ಆಗುವುದೇ ತಡ ಸಮಾಜದಲ್ಲಿ ಸಾಮಾ ಜಿಕ ಕ್ರಾಂತಿ ಪ್ರಾರಂಭವಾಗುತ್ತದೆ. ಸಮಾಜದಲ್ಲಿ ಬದಲಾವಣೆಗಳು ಆರಂಭವಾಗುತ್ತವೆ. ಪ್ರಥಮವಾಗಿ ಆರ್ಥಿಕ ಆಸ್ತಿಭಾರ ಮಾರ್ಪಾಡು