ಪುಟ:ಕಮ್ಯೂನಿಸಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಂಡವಾಳ ಆರ್ಥಿಕ ವ್ಯವಸ್ಥೆಯ ಸ್ವರೂಪ ೬೧ ಮತ್ತು ಲಾಭ ಇವುಗಳೇ ಬಂಡವಾಳ ಆರ್ಥಿಕವ್ಯವಸ್ಥೆಯ ಆಧಾರ ಸ್ತಂಭ ಗಳು, ಈ ಲಕ್ಷಣಗಳನ್ನು ಒಳಗೊಂಡ ಆರ್ಥಿಕವ್ಯವಸ್ಥೆ ಮೊದಲು ಇಂಗ್ಲೆಂಡ್ ದೇಶದಲ್ಲಿ ಹುಟ್ಟಿ ತು ಬೆಳವಣಿಗೆಗೆ ಅಡ್ಡಿ ಬಂದ ವ್ಯವಸ್ಥೆಗಳನ್ನೆಲ್ಲಾ ಮುರಿದು ದೇಶಾದ್ಯಂತ ಹರಡಿತು, ದೇಶದ ಆರ್ಥಿಕವ್ಯವಸ್ಥೆಯ ಸ್ವರೂಪ ತೀವ್ರವಾಗಿ ಬದಲಾವಣೆ ಹೊಂದಿತು. ಸಂಕುಚಿತವಾದ ಮತ್ತು ಸ್ವಂತ ಉಪಯೋಗ ಕೈಂದು ಸ್ವಯಂ ಸಂಪೂರ್ಣ ಪದ್ಧತಿಯಮೇರೆಗೆ ನಡೆಯುತ್ತಿದ್ದ ತಯಾರಿಕೆ ನಿಂತಿತು, ಊರಿನ ಸಮಾಸದ ಮಾರುಕಟ್ಟೆಯಲ್ಲೋ ಅಥವ ಸಂತೆಯಲ್ಲೋ ಆಗುತ್ತಿದ್ದ ಹೆಚ್ಚಿಗೇ ಪದಾರ್ಥಗಳ ಬದಲು-ಬದಲು ಸಹ ನಿಂತಿತು ; ದೇಶ ವೆಲ್ಲಾ ಒಂದೇ ಮಾರುಕಟ್ಟೆಯಾಯಿತು. ದೇಶವಿದೇಶಗಳ ಮಾರುಕಟ್ಟೆಯ ದೃಷ್ಟಿಯಿಂದ ಸರಕುಗಳ ತಯಾರಿಕೆ, ಹಣಕ್ಕೆ ವಿಕ್ರಯಿಸುವುದು ಆಚರಣೆಗೆ ಬಂದಿತು, ಖಾಸಗಿ ಉದ್ಯಮದಾರರು ಮತ್ತಷ್ಟು ತಯಾರಿಸಲು ಮತ್ತು ದೂರ ದೇಶಗಳಲ್ಲಿ ತಮ್ಮ ಸರಕುಗಳನ್ನು ಅತಿ ಹೆಚ್ಚು ಲಾಭಕ್ಕೆ ಮಾರಲು ಆಧುನಿಕ ಸಂಚಾರ-ಸೌಕರ್ಯಗಳು ಅವಕಾಶ ಕಲ್ಪಿಸಿದವು. ದೇಶವಿದೇಶ ಗಳಲ್ಲಿ ಅತಿ ಸುಲಭವಾಗಿ ಲಾಭಸಿಗುವುದನ್ನು ಖಾಸಗೀ ಉದ್ಯಮಗಾರರು ಕಂಡರು ; ಯಂತ್ರಗಳಿಂದ ಹೆಚ್ಚು ಉತ್ಪಾದನೆ ನಡೆಸಲು ಆರಂಭಿಸಿದರು. ತಾವು ಗಳಿಸಿದ್ದ ಲಾಭವನ್ನೆಲ್ಲಾ ಬಂಡವಾಳದ ರೂಪದಲ್ಲಿ ಹಾಕಿ ಬಂಡವಾಳಗಾರರಾದರು. ಯಂತ್ರಗಳನ್ನು ನಡೆಸಲು ಕೂಲಿಗೆ ದುಡಿಮೆ ಯವರು ಬೇಕಾಗಿದ್ದಿತು. ಭೂಮಿ ಇಲ್ಲದ, ಹೊಟ್ಟೆಗಿಲ್ಲದ ಜೀತ ಮತ್ತು ಗುತ್ತಿಗೆ ಮಾಡುವ ಸಾವಿರಾರು ಜನರು ಕೂಲಿಗೆ ಸಿಕ್ಕಿದರು. ಇವರನ್ನೆಲ್ಲಾ ಒಂದೆಡೆಯಲ್ಲಿ ಸೇರಿಸಿ, ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಪ್ರಾರಂಭ ನಾಯಿತು. ಲಾಭದ ದೃಷ್ಟಿಯಿಂದ ವಿದೇಶೀ ಮಾರುಕಟ್ಟೆಗಳಿಗೆ ಸರಕು ಗಳನ್ನು ಕಳುಹಿಸಲು ಭಾರಿ ವ್ಯಾಪಾರ ಸಂಸ್ಥೆಗಳು ಜನ್ಮತಾಳಿದವು. ವಿದೇಶೀ ಮಾರುಕಟ್ಟೆಗಳನ್ನೆಲ್ಲಾ ಎಲ್ಲೆಲ್ಲಿ ಸುಲಭವಾಗಿ ಆಕ್ರಮಿಸಿಕೊಳ್ಳುವುದಕೆ ಸಾಧ್ಯವೋ, ಅಲ್ಲೆಲ್ಲಾ ತಮ್ಮ ಆರ್ಥಿಕ ಯಜಮಾನಿಕೆಯನ್ನು ಬಂಡವಾಳ ಶಾಹಿ ಉದ್ಯಮಗಳು ಸ್ಥಾಪಿಸಿದವು. ಪ್ರತಿಭಟನೆ ಬಂದೆಡೆಗಳಲ್ಲಿ ಯುದ್ಧದ ಮೂಲಕ ಮಾರುಕಟ್ಟೆಗಳನ್ನು ಕೊಳ್ಳೆ ಹೊಡೆಯಲಾಯಿತು. ಇಂಗ್ಲೆಂಡಿನಲ್ಲಿ ಅಭಿವೃದ್ಧಿಗೆ ಬಂದ ಬಂಡವಾಳಶಾಹಿ ವ್ಯವಸ್ಥೆ ದೇಶ ವಿದೇಶಗಳ ಮೇಲೆ ಅತ್ಯುಗ್ರ ಪರಿಣಾಮಗಳನ್ನುಂಟುಮಾಡಿತು. ಕೂಲಿಯಿಂದ