ಪುಟ:ಕಮ್ಯೂನಿಸಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವೈಜ್ಞಾನಿಕ ಸಮಾಜವಾದ ಜೀವನ ನಡೆಸುವ ಮತ್ತು ಕೂಲಿಗಾಗಿ ದುಡಿಮೆಯನ್ನು ವಿಕ್ರಯಮಾಡುವ ಕಾರ್ಮಿಕವರ್ಗವೊಂದಕ್ಕೆ ಈ ಬಂಡವಾಳಶಾಹಿ ವ್ಯವಸ್ಥೆ ಜನ್ಮ ಕೊಟ್ಟಿತು. ಒಂದುಕಡೆ ಲಾಭಲೋಲುಪರಾಗಿ ಬಂಡವಾಳ ವರ್ಗವೂ, ಇನ್ನೊಂದು ಕಡೆ ಯಾವ ಸ್ವಾಮ್ಯವನ್ನೂ ಹೊಂದಿರದೆ ಬರುವ ಕೂಲಿಯೇ ಜೀವನಾಧಾರ ವಾಗಿರುವ ಕಾರ್ಮಿಕವರ್ಗವೂ ಇದಿರುಬದಿರಾಗಿ ನಿಂತವು. ಬಂಡವಾಳ ಆರ್ಥಿಕವ್ಯವಸ್ಥೆಯ ಬೆಳವಣಿಗೆಯ ಜೊತೆಜೊತೆಯಲ್ಲೇ ಬಡತನ, ನಿರು ದ್ಯೋಗ ಆರ್ಥಿಕ ದುಸ್ಥಿತಿ ಮತ್ತು ಅವ್ಯವಸ್ಥೆ ಜನಸಮುದಾಯವನ್ನು ಆವರಿ ಸಿದವು. ನೋಂದ ಮತ್ತು ಶೋಷಣೆಗೆ ಒಳಗಾದ ದುಡಿಮವರ್ಗದಿಂದ ಪ್ರತಿ ಭಟನೆ ಆರಂಭವಾಯಿತು, ಬಂಡವಾಳಶಾಹಿವ್ಯವಸ್ಥೆ ಒಂದು ಕಡೆ ಸಂಪತ್ತಿನ ಅಭಿವೃದ್ಧಿಗೆ ದಾರಿಮಾಡಿ ಕೊಟ್ಟರೆ, ಇನ್ನೊಂದುಕಡೆ ವೃದ್ಧಿಯಾಗುತ್ತಿರುವ ಸಂಪತ್ತು ಕೇವಲ ಕೆಲವು ಕೈಯಲ್ಲಿ ಕೇಂದ್ರೀಕೃತವಾಗುವಂತೆ ಆಯಿತು, ಬಹು ಸಂಖ್ಯಾತ ಜನರು ಶೋಷಣೆಗೆ ಸಿಲುಕಿ ನಿರ್ಗತಿಕರಾಗುತ್ತಿರುವ ದೃಶ್ಯ ಎಲ್ಲರಿಗೂ ವೇದ್ಯವಾಯಿತು. ಶೋಷಣೆಯೇ ಬಂಡವಾಳ ವೃದ್ಧಿಗೂ ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗುವುದಕ್ಕೂ ಕಾರಣವೆಂದು ತಿಳಿದರು, ಬಂಡ ವಾಳಶಾಹಿ ವ್ಯವಸ್ಥೆ ಮಾನವ ಕಲ್ಯಾಣಕ್ಕೆ ಶತ್ರು ಎಂದು ಸಾರಿದರು. ಇದರ ಜೊತೆಗೆ ಬಂಡವಾಳ ಆರ್ಥಿಕವ್ಯವಸ್ಥೆ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ನುಡಿದಂತೆ ಸುಗಮವಾಗಿ ಕೆಲಸಮಾಡಲು ಅಶಕ್ತವಾಯಿತು, ಆಗಾಗ್ಗೆ ಬೆಲೆಗಳ ಏರಿಳಿತಗಳು, ಆರ್ಥಿಕ ದುಸ್ಥಿತಿ, ಹಣದ ಉಬ್ಬರವಿಳಿತ, ಉತ್ಪಾದನೆಯೇ ನಿಂತು ದುಡಿಮೆಯವರೆಲ್ಲರೂ ನಿರುದ್ಯೋಗಿಗಳಾಗುವ ದೃಶ್ಯ ಕಂಡುಬಂದಿತು. ದುಡಿಮೆಗೆ ಪ್ರತಿಫಲ ಸಿಕ್ಕುವ ಆಸೆ ಹೋಗಿ, ಕೆಲಸ ಸಿಕ್ಕಿದರೆ ಸಾಕೆಂದು ಹಾತೊರೆಯುವ, ಪೈಪೋಟಿಯಿಂದ ತಮ್ಮ ದುಡಿಮೆಯನ್ನು ಅತಿ ಕಡಿಮೆ Tಲಿಗೆ ವಿಕ್ರಯ ಮಾಡಿಕೊಳ್ಳುವ, ಮೃಗಗಳಂತೆ ವಾಸಿಸುವ ಕರುಣಾ ಜನಕ ಪರಿಸ್ಥಿತಿ ಕಾರ್ಮಿಕರಿಗೆ ಒದಗಿತು. ಜನಸಮುದಾಯದ ಸುಖ ಸಂಪತ್ತಿಗಾಗಿ ನಡೆಯಬೇಕಾದ ಉತ್ಪಾದನೆ ಹೋಗಿ, ಲಾಭಕ್ಕಾಗಿ ನಡೆ ಯುವ ಉತ್ಪಾದನೆ ಬಂದಿತು. ಲಾಭ ಮತ್ತು ಲಾಭದ ಮೂಲಕ ಹಣ ಶೇಖರಣೆ ಬಂಡವಾಳವರ್ಗದ ಹೆಣ್ಣು ರಿಯಾಯಿತು. ಲಾಭದ ವೃದ್ಧಿಯ ಸಂಭ್ರಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇವುಗಳನ್ನೂ ಸಹ ಬಂಡವಾಳ ವರ್ಗ ಮರೆತಿರುವ ದೃಶ್ಯ ಗೋಚರವಾಯಿತು. 18