ವೈಜ್ಞಾನಿಕ ಸಮಾಜವಾದ ಬಂಡವಾಳಶಾಹಿ ಉತ್ಪಾದನಾಕ್ರಮವೇ (Capitalist mode of producation) ಕಾರಣವಾಗಿದೆ ಎಂದೂ ಮಾರ್ಕ್ಸ್-ಎಂಗೆಲ್ಪರು ಘೋಷಿಸಿದರು. ಬಂಡವಾಳಶಾಹಿ ಉತ್ಪಾದನೆ ಲಾಭ ದೃಷ್ಟಿಯಿಂದ ಕೈಗೊಳ್ಳುವ ಉತ್ಪಾ ದನೆಯಾಗಿದೆ. ಸಮಾಜದ ಆವಶ್ಯಕತೆಗಳನ್ನು ಉತ್ಪಾದನೆಯ ಮೂಲಕ ನೀಗಿಸುವ ದೃಷ್ಟಿಯಿಂದ ನಡೆಯುವ ಉತ್ಪಾದನೆ ಆಗಿಲ್ಲ. ಲಾಭದಾಯಕ ಉತ್ಪಾದನೆ ಪೈಪೋಟಿಯನ್ನು ತರುತ್ತದೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಉದ್ಯಮದಾರನ ಜೀವನವೂ ನೂಕುನುಗ್ಗಲಿನಲ್ಲಿ ನಡೆಸುವ ಬದುಕಾಗಿದೆ, “ಸಿಗುವ ಲಾಭದ ಮೂಲಕ ಜೀವನ ನಡೆಸಲು ಪ್ರತಿಯೊಬ್ಬನೂ ಯತ್ನಿಸುತ್ತಾನೆ. ಲಾಭ ಸಿಗುವ ಭರವಸೆಯಿಂದ ಉತ್ಪಾದ ನೆಯನ್ನು ಕೈಗೊಳ್ಳುತ್ತಾನೆ ಲಾಭವೇ ಬಂಡವಾಳಶಾಹಿ ವ್ಯವಸ್ಥೆಯ ಸುಗಮ ಸಾಗಾಣಿಕೆಗೆ ಆಧಾರವಾಗಿದೆ ಮತ್ತು ಜೀವಿಸಲೆತ್ನಿಸಿದ ಪ್ರತಿಯೊಬ್ಬ ಜೀವಿಯ ಆರ್ಥಿಕ ಚಟವಟಿಕೆಯನ್ನು ಪ್ರಚೋದನೆಗೊಳಿಸುವ ಶಕ್ತಿಯೂ ಆಗಿದೆ. ಆದರೆ ಲಾಭ ಎಲ್ಲಿಂದ ಬರುತ್ತದೆ ? ಮಾರ್ಕ್ಸ್- ಏಂಗೆಲ್ಸರು ಲಾಭದ ಮೂಲವನ್ನು ಹಲವು ಬಗೆಯಲ್ಲಿ ನಡೆಯುತ್ತಿರುವ ಕಾರ್ಮಿಕವರ್ಗದ ಶೋಷಣೆಯಲ್ಲಿ ಕಂಡರು ಲಾಭದ ಉತ್ಪತ್ತಿ ಸರಕುಗಳ ಅದಲು-ಬದಲು (Exchange) ನಲ್ಲಿ ಆಗದೆ, 1 ಅದರ ಆವಾಸಸ್ಥಾನ ಉತ್ಪಾದನಾ ಕಾರ್ಯರಂಗದಲ್ಲಿ (in the process of production) ಇರುವುದಾಗಿ ತಿಳಿಸಿದರು. ಕಾರ್ಮಿಕರ ನೆರವಿಲ್ಲದೆ ನಡೆಯಲಸಾಧ್ಯವಾಗಿರುವ ಬಂಡವಾಳಶಾಹಿ ಉತ್ಪಾದನೆಯು ಕಾರ್ಮಿಕ ವರ್ಗದ ಶೋಷಣಾ ಕೇಂದ್ರವಾಗಿರುವುದನ್ನು ಹೊರಹಾಕಿದರು, ಕಾರ್ಮಿಕ ವರ್ಗದ ಸ್ಥಾನಮಾನ, ಅದಕ್ಕಿರುವ ಕೃತಕ ಸ್ವಾತಂತ್ರ , ಬಂಡವಾಳವರ್ಗಕ್ಕೆ ಸರಕುಗಳ ಅದಲು-ಬದಲಿನಲ್ಲಿ ಲಾಭ ಕೆಲವರಿಗೆ ಸಿಗುವಹಾಗೆ ಕಂಡರೂ ಒಟ್ಟಿನಲ್ಲಿ ಅದಲು-ಬದಲಿನಿಂದ ಲಾಭ ಬರಲು ಸಾಧ್ಯವಿಲ್ಲ, ಏಕೆಂದರೆ, ಒಬ್ಬನು ಇನ್ನೊಬ್ಬನಿಗೆ ಹೆಚ್ಚಿಗೆಯ ದರಕ್ಕೆ ಮಾರಿ ಹೆಚ್ಚಿಗೇ ಹಣ ಸಂಪಾದಿಸ ಬಹುದು, ಆದರೆ ಎಲ್ಲ ಜನರೂ ಮಾಡಲು ಸಾಧ್ಯವಿಲ್ಲ. ಹೆಚ್ಚಿಗೆ ಉತಾ ನನೆ ಯನ್ನು ದಕ್ಕಿಸಿಕೊಳ್ಳುವುದರ ಮೂಲಕ ಲಾಭ ಸಾಧ್ಯ.
ಪುಟ:ಕಮ್ಯೂನಿಸಂ.djvu/೭೬
ಗೋಚರ