ಪುಟ:ಕಮ್ಯೂನಿಸಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮ ವೈಜ್ಞಾನಿಕ ಸಮಾಜವಾದ ಅಲ್ಲ ಬಂಡವಾಳ ಉತ್ಪಾದನೆ ಸುಗಮವಾಗಿ ಮುಂದುವರಿಯಬೇಕಾದರೆ ಹೆಚ್ಚು ಹೆಚ್ಚು ಲಾಭ ಸಿಗುತ್ತಲೇ ಇರಬೇಕು, ಬಂಡವಾಳವರ್ಗ ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಲು, ಹೆಚ್ಚು ಉತ್ಪಾದನೆಯನ್ನು ಕೈಗೊಳ್ಳಲು ಅಥವ ಆಗುತ್ತಿರುವ ಉತ್ಪಾದನೆಯನ್ನು ಮುಂದುವರಿಸಲು ಇದೇ ಪ್ರಚೋದನಾ ಶಕ್ತಿಯಾಗಿದೆ. ಹೆಚ್ಚು ಹೆಚ್ಚು ಲಾಭ ದೊರೆತು ಬಂಡವಾಳ ಶೇಖರಣೆಯಾದಷ್ಟೂ, ಒಬ್ಬ ಬಂಡವಾಳಉದ್ಯಮಿ ಇನ್ನೊಬ್ಬ ಬಂಡವಾಳ ಉದ್ಯಮಿಯಮೇಲೆ ಪೈಪೋಟಿ ನಡೆಸಿ ಉಳಿಯಲು ಸಾಧ್ಯ. ಬಂಡವಾಳವನ್ನು “ ಕೇಖರಿಸು.” “ಶೇಖರಿಸು' ಇದೇ ಬಂಡವಾಳ ಉದ್ಯಮಿಯ ನಿತ್ಯದ ಕಾರ್ಯಕ್ರಮ, ಆತನ ಜೀವನದ ಉಸಿರು, ಆತನ ಜೀವನದ ಹೆಗ್ಗುರಿ, ಇದರಿಂದಲೇ ಆತನಿಗೆ ಬಂಡವಾಳಶಾಹಿ ಸಮಾಜದಲ್ಲಿ ಸ್ಥಾನಮಾನಗಳು. ಲಾಭ ಬಂಡವಾಳ ಶೇಖರಣೆ, ಶೇಖರಣೆಯಾದ ಬಂಡವಾಳಕೆ ಮತ್ತೆ ತಕ್ಕ ಲಾಭ, ಇವುಗಳೇ ಬಂಡವಾಳ ಆರ್ಥಿಕ ವ್ಯವಸ್ಥೆ ಸುವ್ಯವಸ್ಥೆ ಯಿಂದ ಕೆಲಸಮಾಡಲಿಕ್ಕೆ ಸಹಾಯಕ ಶಕ್ತಿಗಳು, ಆದರೆ ಲಾಭವನ್ನು ಒಂದೇ ಸಮನಾಗಿ ಹೆಚ್ಚು ಹೆಚ್ಚಾಗಿ ಗಳಿಸಲು ಹೇಗೆ ಸಾಧ್ಯ ? ಇದರ ಸಾಧ್ಯತೆ, ಕಡಿಮೆ ಕೂಲಿಗೆ ಸಿಗುವ ದುಡಿಮೆಯವರನ್ನು ಅವಲಂಬಿಸಿದೆ. ಸದಾ ಪೈಪೋಟಿಯಿಂದ ಕಡಿಮೆ ಕೂಲಿಗೆ ಬರುವ ನಿರುದ್ಯೋಗಿಗಳ ತಂಡವಿರ ಬೇಕು, ಇಲ್ಲವೆ, ಬಂಡವಾಳಗಾರನು ಆದಷ್ಟು ಕಡಿಮೆ ಕೂಲಿಯವರನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಂದಲೇ ಹೆಚ್ಚು ಮಂದಿ ಕೂಲಿಗಳು ತಯಾ ರಿಸುವಷ್ಟು ಸರಕುಗಳನ್ನು ತಯಾರಿಸಬೇಕು. ಆದ್ದರಿಂದ ಬಂಡವಾಳ ಗಾರನಿಗೆ ಯಂತ್ರಗಳ ಬಳಕೆ ಅತ್ಯಗತ್ಯವಾಗುತ್ತದೆ ; ಯಂತ್ರಗಳ ಉಪ ಯೋಗದಿಂದ ಉತ್ಪಾದನೆಯನ್ನು ಹೆಚ್ಚಿಸುವುದೊಂದೇ ಉಳಿದಿರುವ ಮಾರ್ಗ. ಯಂತ್ರಗಳನ್ನು ಆಥವಾ ಆಧುನಿಕ ಉತ್ಪಾದನಾ ಶಕ್ತಿಗಳನ್ನು ಹೇರಳವಾಗಿ ಉತ್ಪಾದನೆಯಲ್ಲಿ ಉಪಯೋಗಿಸಿದರೆ ಹೆಚ್ಚು ಮಂದಿ ದುಡಿಮೆ ಯವರು ಬೇಕಾಗುವುದಿಲ್ಲ. ಇದರಿಂದ ದುಡಿಮೆಯ ಜನರಲ್ಲಿ ಮತ್ತಷ್ಟು ನಿರುದ್ಯೋಗ ಬೆಳೆದರೆ ಇನ್ನೂ ಸಂತೋಷ ! ನಿರುದ್ಯೋಗ ಹೆಚ್ಚಿದಷ್ಟೂ ದುಡಿಮೆಯವರು ಇನ್ನೂ ಕಡಿಮೆ ಕೂಲಿಗೆ ದುಡಿಯಲು ಒಪ್ಪಿ ಕೊಳ್ಳುವರು !!