ಪುಟ:ಕಮ್ಯೂನಿಸಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾರ್ಯರಂಗದಲ್ಲಿ ಮಾಕ್ಸ್ವಾದ ಬಾರಿಗೆ ವಿವಿಧ ದೇಶಗಳ ಕಾರ್ಮಿಕರನ್ನು ಒಂದೇ ಚೌಕಟ್ಟಿನಲ್ಲಿ ಒಟ್ಟು ಗೂಡಿಸಿ ಸಮಾಜವಾದಕ್ಕೆ ಹೋರಾಡಿದ ಕಾರ್ಮಿಕರ ಚಳವಳಿ ( ಮೊದಲ ನೆಯ ಅಂತರ ರಾಷ್ಟ್ರೀಯ ” (First International) ಎಂಬ ಹೆಸರಿ ನಿಂದ ಕರೆಯಲ್ಪಟ್ಟಿದೆ. 1876 ರ ವರೆಗೆ ಈ ಅಂತರರಾಷ್ಟ್ರೀಯ ಸಂಘ ಬಹು ಯಶಸ್ವಿಯಾಗಿ ಕಾರ್ಮಿಕರ ಸಂಘಟನಾ ಕಾರ್ಯವನ್ನು ನಿರ್ವಹಿಸಿತು. ವೈಜ್ಞಾನಿಕ ಸಮಾಜವಾದ ತತ್ಯ, ಮಾರ್ಕ್ಸ್-ಏಂಗೆಲ್ಬರ ನೇತೃತ್ವ ಮತ್ತು ಮೊದಲನೇ ಅಂತರರಾಷ್ಟ್ರೀಯದ ವ್ಯವಸ್ಥಾಪನಾ ಶಕ್ತಿ ಕಾರ್ಮಿಕರ ಚಳವಳಿಯ ಸ್ವರೂಪವನ್ನೇ ಬದಲಾಯಿಸಿದವು. ಸಣ್ಣ ಪುಟ್ಟ ಸುಧಾರಣೆ ಗಳಿಗಾಗಿ ಕಾರ್ಮಿಕರ ನಿರತರಾಗುವುದು ನಿಂತಿತು, ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಸಹಿತ ಕಿತ್ತೊಗೆಯುವವರೆಗೂ ಬಂಡವಾಳವರ್ಗದ ನಾಶ ಆಗುವುದಿಲ್ಲವೆಂಬುದನ್ನು ಕಾರ್ಮಿಕರು ಅರಿತರು, ಸಣ್ಣ ಪುಟ್ಟ ಸುಧಾರಣೆ ಗಳು ಬಂಡವಾಳ ಆರ್ಥಿಕಶಾಹಿವ್ಯವಸ್ಥೆಗೆ ಅಪಾಯ ಒದಗದಂತೆ ಬಂಡವಾಳ ವರ್ಗವು ನಿರ್ಮಿಸಿಕೊಳ್ಳುವ ತಂತ್ರವೆಂದು ತಿಳಿಯಿತು, ಕಾರ್ಮಿಕವರ್ಗವು ಬಂಡವಾಳ ರಾಜಕೀಯ ಪಕ್ಷಗಳ ಹಿಂಬಾಲಕನಂತಿರುವುದು ತಪ್ಪಿತು. ಕಾರ್ಮಿಕವರ್ಗದ ಹಿತಗಳನ್ನು ಪ್ರತಿಬಿಂಬಿಸುವ ಮತ್ತು ಸಂರಕ್ಷಿಸುವ ಕಾರ್ಮಿಕರ ರಾಜಕೀಯ ಪಕ್ಷವೊಂದು ಜನಿಸಿತು, ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಕೊನೆಗಾಣಿಸಲು ಕಾರ್ಮಿಕರು ಸಿದ್ದವಾದರು ಸಮಾಜ ವಾದೀ ಸಮಾಜದ ಸ್ಥಾಪನೆಗಾಗಿ ಕಾರ್ಮಿಕವರ್ಗ ಅಧಿಕಾರಕ್ಕೆ ಬರಲು ಯತ್ನಿ ಸಿತು. ಕಾರ್ಮಿಕವರ್ಗದ ಸಂಘಟಿತ ಹೋರಾಟ ಯೂರೋಪುಖಂಡದ ರಾಜಕೀಯದ ಬಣ್ಣವನ್ನೇ ಬದಲಾಯಿಸಿತ್ತು ಇಂಗ್ಲೆಂಡ್ (1648) ಮತ್ತು ಫ್ರಾನ್ಸ್ (1789) ದೇಶಗಳಲ್ಲಿ ನಡೆದ ಕ್ರಾಂತಿಯ ಕಾಲದಲ್ಲಿ ಸ್ವಾಮ್ಯ ಮತ್ತು ವ್ಯಾಪಾರ ವರ್ಗವವು ಕ್ರಾಂತಿಯ ಮುಂದಾಳುಗಳಾಗಿ ಜನಸಮುದಾಯದ ಗಮನವನ್ನೆಲ್ಲಾ ನಿರಂಕುಶ ಪ್ರಭು ತ್ವದ ನಾಶ ಶಾಸನದ ರಚನೆಯಲ್ಲಿ ಪ್ರಾತಿನಿಧ್ಯ ಮತ್ತು ರಾಜಕೀಯ ಮತ್ತು ಪೌರ ಸ್ವಾತಂತ್ರ್ಯ ಇವುಗಳಲ್ಲಿ ಕೇಂದ್ರೀಕರಿಸಿದ್ದರು. ಕೆಲವು ಕ್ರಾಂತಿಕಾರ ವ್ಯಕ್ತಿಗಳು ಮತ್ತು ಭಾವಕ ಸಮಾಜವಾದಿಗಳನ್ನು ಬಿಟ್ಟರೆ ಇತರರು