ಪುಟ:ಕಮ್ಯೂನಿಸಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಜ್ಞಾನಿಕ ಸಮಾಜವಾದ ಕೊಡುತ್ತದೆ. ಕಾರ್ಯವಿಲ್ಲದ ತತ್ಯಕ್ಕಿಂತ ಕಾರ್ಯವೇ ಲೇಸು, ಆದ್ದ ರಿಂದ ಕಾರ್ಮಿಕರು ಮೊದಲು ಕಾರ್ಯಾಚರಣೆಯ ಅಂಗವಾಗಿ ಚಳವಳಿ ಯಲ್ಲಿ ನಿರತರಾಗಬೇಕು. - ಮೂರನೆಯದಾಗಿ, ವಿಶ್ವದ ಕಾರ್ಮಿಕವರ್ಗ ಒಂದಾಗಬೇಕು. ಎಡೆಬಿಡದೆ ಸತತವಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಮತ್ತು ಬಂಡ ವಾಳವರ್ಗದ ವಿರುದ್ಧ ಚಳವಳಿಯನ್ನು ಮುಂದುವರಿಸಬೇಕು. ದೇಶ ವಿದೇಶಗಳಲ್ಲಿರುವ ಕಾರ್ಮಿಕರು ಒಂದೇ ಬಗೆಯ ಶೋಷಣೆಗೆ ಒಳಗಾಗಿರುವುದರಿಂದ ಕಾರ್ಮಿಕರಲ್ಲಿ ಅನ್ಯರು ಸ್ವಜನರು ಎಂಬ ಭೇದ ಭಾವಕ್ಕೆ ಅವಕಾಶವೇ ಇಲ್ಲ. ಒಂದು ದೇಶದ ಕಾರ್ಮಿಕರು ತಮ್ಮ ಆಶೋತ್ತರಗಳನ್ನು ಚಳವಳಿಯ ಮೂಲಕ ಅಲ್ಪ ಸ್ವಲ್ಪ ಗಳಿಸಿಕೊಂಡು ಸಂತೃಪ್ತರಾಗಿರುವುದು ಇತರ ದೇಶಗಳ ಕಾರ್ಮಿಕವರ್ಗವನ್ನು ಮರೆ ತಂತೆಯೂ ಕಾರ್ಮಿಕವರ್ಗಕ್ಕೆ ದ್ರೋಹಬಗೆದಂತೆಯೂ ಆಗುತ್ತದೆ. ಕಾರ್ಮಿಕವರ್ಗ ಎಚ್ಚರಗೊಳ್ಳ ಬೇಕು, ಕಾರ್ಮಿಕವರ್ಗ ಯಾವ ದೇಶದ್ದೆ ಆಗಲಿ, ಅದೂ ಸಹ ದಾಸ್ಯದಿಂದಲೂ ಶೋಷಣೆಯಿಂದಲೂ ಪಾರಾಗುವ ವರೆಗೂ ಕಾರ್ಮಿಕವರ್ಗದ ಹೋರಾಟ ಮುಗಿದಂತಾಗಲಿಲ್ಲವೆಂದು ತಿಳಿಯ ಬೇಕು, ಕಾರ್ಮಿಕರ ಹೋರಾಟ ಯಾವದೇಶದಲ್ಲೇ ನಡೆಯುತ್ತಿರಲಿ ಸಕಲ ಕಾರ್ಮಿಕರೂ ಕಮ್ಮ ತನು ಮನ ಧನಗಳನ್ನು ನೀಡಬೇಕು, ಇದು ಕಾರ್ಮಿಕರ ಪವಿತ್ರ ಕರ್ತವ್ಯ. ಈ ಧೋರಣೆಯನ್ನೊಳಗೊಂಡ (ಮಾರ್ಕ್ಸ್ ವಾದದ) ಕಾರ್ಮಿಕರ ಸಂಸ್ಥೆ ಯೊಂದು 1864 ರಲ್ಲಿ “ ಅಂತರರಾಷ್ಟ್ರೀಯ ಕಾರ್ಮಿಕ ಸಮೂಹ * (International Workmen's Union) ಎಂಬ ಹೆಸರಿನಿಂದ ಲಂಡನ್ನಿನಲ್ಲಿ ಸ್ಥಾಪಿತವಾಯಿತು. ಮಾರ್ಕ್ಸ್ ಈ ಸಂಘದ ಅಧ್ಯಕ್ಷನಾದನು. ವಿವಿಧ ದೇಶಗಳ ಕಾರ್ಮಿಕವರ್ಗವನ್ನು ಒಂದೇ ಸಂಘದ ಆಶ್ರಯದಲ್ಲಿ ಸಂಘಟನೆಮಾಡುವುದು, ಪ್ರತಿಯೊಂದು ದೇಶದ ಕಾರ್ಮಿಕರ ಚಳವಳಿ ಯನ್ನು ನಿರ್ದೇಶನ ಮಾಡುವುದು, ಕಾರ್ಮಿಕರ ಚಳವಳಿಯ ಬಗ್ಗೆ ಧೈಯ ಪ್ರಸಾರಮಾಡು ವುದು ಮತ್ತು ಸಮಾಜವಾದ ಕೂ ಕಾರ್ಮಿಕರ ಚಳವಳಿಗೂ ಇ-ುವ ಸಂಬಂಧದ ಬಗ್ಗೆ ತಿಳಿವಳಿಕೆ ನೀಡುವುದು ಇವು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಮುಖ್ಯ ಕೆಲಸವಾಯಿತು. ಹೀಗೆ ಮೊಟ್ಟ ಮೊದಲನೆಯ