________________
ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ - ಅಧ್ಯಾಯ 5 ಮಾರ್ಕ್ಸ್‌ವಾದ (ಆಧುನಿಕ ಸಮಾಜವಾದ) ಕೇವಲ ತಮ್ಮನಿರೂಪಣೆ (Theory) ಯಲ್ಲ, ಕಾರ್ಯಾಚರಣೆಗೆ (Practice) ಪ್ರಾಧಾನ್ಯತೆ ಇದೆ. ಇದು ಮಾರ್ಕ್ಸ್-ಏಂಗೆಲ್ಪರ ಜೀವನದಲ್ಲ, ಅವರ ತತ್ವದ ಪ್ರತಿಯೊಂದು ಅಂಶದಲ್ಲಿ ಕಂಡು ಬರುತ್ತದೆ. ವಿಮರ್ಶೆ ಮತ್ತು ಟೀಕೆ ಇವುಗಳಿಂದಲೇ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ವಿನಾಶಗೊಳಿಸುವುದು ಅಸಾಧ್ಯವೆಂದು ಸೂಚಿಸಿದರು ; ಕಾರ್ಮಿಕವರ್ಗವನ್ನು ಸಂಘಟಿಸಲು, ಕಾರ್ಯೋನ್ಮುಖರನ್ನಾಗಿ ಮಾಡಲು ಮಾರ್ಕ್ಸ್-ಏಂಗೆಲ್ಸರು ಕಂಕಣ ಬದ್ಧ ರಾದರು, ರಾಜಕೀಯದಲ್ಲಿ ಕಾರ್ಮಿಕರ ಪ್ರವೇಶ, ಕಾರ್ಮಿಕರ ಹಿತಸಂರ ಕಣೆ ಮಾಡಬಲ್ಲ ಕಾರ್ಮಿಕರ ರಾಜಕೀಯ ಪಕ, ಇತರ ಶೋಷಿತವರ್ಗ ಗಳೊಡನೆ ಸಹಕಾರ ಮತ್ತು ಚಳವಳಿ ಅತ್ಯಗತ್ಯವೆಂದರು. ತಮ್ಮ ತತ್ತ್ವದ ಬಗ್ಗೆ, ಕಾರ್ಮಿಕವರ್ಗದ ಕರ್ತವ್ಯಗಳ ಬಗ್ಗೆ ಅವರು ಇತ್ತಿರುವ ವಿವರಣೆ ಗಳು ಅಮರವಾಗಿವೆ. ಒಂದನೆಯದಾಗಿ, ಮಾರ್ಕ್ಸ್ ವಾದ ಕಾರ್ಮಿಕರ ಚಳವಳಿಗೆ ಕೈಗನ್ನಡಿ. ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆವಲನೆಗಳನ್ನು, ಅದರ ಆಗುಹೋ ಗುಗಳನ್ನು ಮತ್ತು ಅದರ ವಿನ್ಯಾಸಗಳನ್ನು ಕಾರ್ಮಿಕರಿಗೆ ತಿಳಿಸಲು ನಿರ್ಮಿತ ವಾಗಿರುವ ಒಂದು ವಿಮರ್ಶಾಸಾಧನ : ರಚಿತವಾಗಿರುವ ತಮ್ಮ ಕಾರ್ಮಿಕರ ಕಾರ್ಯಾಚರಣೆಗೆ ಸಹಕಾರಿ ಮತ್ತು ದಿಕ್ಸೂಚಿ. ಆದುದರಿಂದ ಪರಿಸ್ಥಿತಿ ಗಳು ರೂಪಗೊಂಡಂತೆ ಆಗಿರುವ ಬದಲಾವಣೆಗಳನ್ನು ಮನನಮಾಡುವುದು ಅಗತ್ಯ, ತಮ್ಮ ಹೊಸ ಸನ್ನಿವೇಶಗಳನ್ನು ಪ್ರತಿಬಿಂಬಿಸುವ ಹಾಗೆ ರಚನೆ ಯಾಗಬೇಕು ಒಂದೇ ಬಾರಿಗೆ ಮುಂದೆ ಆಗುವುದೆಲ್ಲವನ್ನೂ ತಮ್ಮ ಪ್ರತಿಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಕಾರ್ಮಿಕವರ್ಗ ತತ್ಯದಿಂದ ಸ್ಫೂರ್ತಿ ಪಡೆದು ಸನ್ನಿ ವೇಶಗಳಿಗನುಸಾರವಾಗಿ ಕಾರ್ಯೋನ್ಮುಖರಾಗ ಬೇಕು, ಎರಡನೆಯದಾಗಿ, ಕಾರ್ಯಾಚರಣೆ ಇಲ್ಲದಿರುವ ತತ್ತ್ವ ಬರಡುತ. ಮೊದಲು ಕಾರ್ಯ, ತರುವಾಯ ತತ್ಯ, ಕಾರ್ಯ ತತ್ತ್ವಕ್ಕೆ ಸ್ಪುಟ