ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಕರ್ಣಾಟಕ ಕವಿಚರಿತೆ. [16 ನೆಯ ನಗರದ 101 ವಿರಕ್ತರಲ್ಲಿ ಒಬ್ಬನು; ಜಕ್ಕಣಾಕ್ಯ', ಚಾಮರಸ ಇವರ ಸಮಕಾಲದವನು. ಇವನ ಗ್ರಂಥಗಳಲ್ಲಿ 1 ಲಿಂಗಲೀಲಾವಿಲಾಸಚಾರಿತ್ರ ಇದು ಪಟ್ಟಿ ಲವನ್ನು ಬೋಧಿಸುವ ವಚನಗ್ರಂಥ, ಸ್ಥಲ 16, ವಚನ 720. ಇದರ ವಿಷಯವಾಗಿ ಗ್ರಂಥಾರಂಭದಲ್ಲಿ ಹೀಗೆ ಹೇಳಿದೆ ಭಕ್ತಿಕಾಂಡವೆ ಷಟ್ಟಲಮಾರ್ಗ. ಈ ಮಾರ್ಗವೆ ಲಿಂಗಲೀಲಾವಿಲಾಸಚಾ ರಿತ್ರ. ಇದನು ವಿದ್ಯಾನಗರದ ಕಲ್ಲಮರದಪ್ರಭುದೇವಾರನು ಪುರಾತನರ ವಚನಂಗ ಇಲ್ಲಿ ಸಾರವಾದ ವಚನಂಗಳಂ ತೆಗೆದುಕೊಂಡು ಸೋಡಶಸ್ಪಲಪರಿಕ್ರಮದಿಂದ ಸೇರಿಸಿ ಅರ್ಥೈಸಿದ ವಚನಾಗಮವಿದು. ಇದು ಷಟ್ಟಲಲಿಂಗಾಂಗಸಂಬಂಧಜ್ಞಾನಕ್ರಿಯಾ ಯುಕ್ತವಾದ ಶರಣಮಾರ್ಗ, ಪ್ರಭುದೇವ, ಬಸವ, ಚೆನ್ನ ಬಸವ, ಮಹಾದೇವಿಯಕ್ಕ ಮುಂತಾದ ಪುರಾತ ನರ ವಚನಂಗಳಲ್ಲಿ 720ನು ತೆಗೆದುಕೊಂಡು ಹೊಡಶಸ್ಟಲಪರಿಕ್ರಮದಿಂದ ಸೇರಿಸಿ ವ್ಯಾಖ್ಯಾನವಂ ಮಾಡಿದನು ವಿದ್ಯಾನಗರದ ಕಲ್ಲಮರದಪ್ರಭುದೇವಾರನು. ಸ್ಥಳಗಳ ಆದಿಯಲ್ಲಿ ಕೆಲವು ಸಂಸ್ಕೃತಶ್ಲೋಕಗಳೂ ಅವುಗಳ ವ್ಯಾಖ್ಯಾನವೂ ಇವೆ. ಒಂದೆರಡು ವಚನಗಳನ್ನು ಟೀಕೆಯೊಡನೆ ಉದಾ ಹರಿಸುತ್ತೇವೆ ನೆನೆಯಲಯ ನಿರ್ಧರಿಸಲಾಯೆ ಮನವಿಲ್ಲಾಗಿ, ಭಾವಿಸಲwಯೆ ಬೆರಸ ಲmಯೆ ಭಾವ ನಿರ್ಭಾವವಾಯಿತ್ತಾಗಿ, ಧ್ಯಾನಮೌನವನಯೆ ಧ್ಯಾನಮೌನಾ ತೀತ ತಾನೆಯಾಯಿತ್ತಾಗಿ, ಜ್ಞಾತೃಜ್ಞಾನಜ್ಞೆಯಂಗಳೆಲ್ಲವ ಮಾ66 ಅಭಿನವಮಲ್ಲಿ ಕಾರ್ಜುನನಲ್ಲಿ ಪರಮಸುಖಿಯಾಗಿರ್ದೆ. ಟೀಕೆ|| ಜ್ಞಾತೃವೆ ಆತ್ಮನು, ಜ್ಞಾನವೆ ಅವು, ೯ಯವೆ ಅmಹಿಸಿಕೊಂ ಬ ಲಿಂಗ; ಅಂತು ಆತ್ಮಾನುಜ್ಞಾನದಿಂದ ತನ್ನ ನಿಜವೆ ಲಿಂಗವೆಂದರಿದು ಲಿಂಗಾಂಗಸಂ ಯೋಗಿಯಾದಲ್ಲಿ ಅಂಗಮನಭಾವಜ್ಞಾನಂಗಳೆಲ್ಲಾ ಲಿಂಗದೊಳ್ಳೆಕ್ಯವಾಗಿ ಲಿಂಗವಾದ ಶರಣನ ಸುಖಕ್ಕೆ ಪ್ರತಿಯಿಲ್ಲವೆಂಬುದೀವಚನದ ತಾತ್ಪಯ್ಯಾರ್ಧ. I, 57ನೆಯ ಪುಟವನ್ನು ನೋಡಿ,