ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ) ಕಣ್ಣಮಠದ ಪ್ರಭುದೇವ. ಸತ್ತವರ ಕಥೆಯಲ್ಲ ಜನನದ | ಕುತ್ತದಲಿ ಬಲುಕುದಿದು ಕರ್ಮದ | ಕತ್ತರಿಗೆ ಸಿಕ್ಕು ವರ ಸೀಮೆಯ ಮಾತು ತಾನಲ್ಲ || ಹೊತ್ತು ಹೋಗದೆ ಪುಂಡರಾಲಿಪ | ಮತ್ತ ಮತಿಗಳ ಗೋಷ್ಠಿ ಯಲ್ಲಿದು | ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು || ಬಾಯ ನುಡಿಗಳ ಕೇಳಿ ಕಿವಿಯೊಳ | ಗಾಯೆನುತ ಪರಿಣಮಿಸಿ ಹೋಹ ಎ | ಡಾಯವಲ್ಲಿದು ತಮ್ಮ ತನುಮನಧನವನೆಲ್ಲವನು || ಬೀಯಮಾಡಿಯೆ ಲಿಂಗದಲಿ ನಿಜ | ಕಯ ನಿಲುವಡೆ ನಿತ್ಯರಪ್ಪಡೆ | ದಾಯಿಗರು ಲಾಲಿಸುವುದೀ ಪ್ರಭುಲಿಂಗಲೀಲೆಯನು || ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಬನವಸಿ ಅದಳವನೀಕಾಂತೆಗೊಪ್ಪುವ | ವದನವೋ ಶೃಂಗಾರಸಾರದ | ಸದನವೋ ಸೊಬಗಿನ ಸುಮಾನದ ಸುಖದ ನೆಲೆವೀಡೋ || ಸುದತಿರತ್ನ ಗಳೊಗೆವ ಚೆಲುವಂ | ಬುಧಿಯೊ ಪೇಟನೆ ಸಕಲಸೌರಂ | ಭದಲಿ ಸೊಗಸಿಹುದಲ್ಲಿ ಬನವಸಿಯೆಂಬ ಪಟ್ಟಣವು || ಮಾಯೆ ಬೀತಿರ್ದಳು ಮುದ್ದು ತನವನು | ಹೇರುತಿರ್ದಳು ಸಕಲಚೆಲುವನು | ತೋಲಿತಿರ್ದಳು ಜಗದ ಜಂಗುಳಿಗಾಡುವೊಲನಾಗಿ || ಸಾಯುತಿರ್ದಳು ಸಕಲಸೊಬಗನು | ಮಿಾಟುತಿರ್ದಳು ದಿನದಿನಕೆ ಕಳೆ | ಯೇತಿದಳು ಮಾಯೆ ವಿವಿಧವಿಲಾಸವೃತ್ತಿಯಲಿ || - ಭಕ್ತಿ ಕೋಪದುರಿಯಲಿ ಕೊಂಗಿ ದರ್ಪದ | ತಾಪದಲಿ ಲಯವಾಗಿ ಮತ್ಸರ | ಕೂಪದಲಿ ಕುಕ್ಕಿರಿಸಿ ಡಂಬಿನ ಸೀಮೆಯಲ್ಲಿ ಸಿಕ್ಕಿ || ಲೋಪಬುದ್ದಿಗೆ ಲೋಲನಾಗಿ ಮ | ಹಾಪರಾಧದಲುಕ್ಕೆ ಸೊಕ್ಕುವ | ಪಾಪಿಗಹುದೇ ಭಕ್ತಿಯೆಂಬುದು ಬಸವ ಕೇಳೆಂದ || ಕಲ್ಲಮಠದ ಪ್ರಭುದೇವ ಸು, 1430 ಈತನು ಲಿಂಗಲೀಲಾವಿಲಾಸಚಾರಿತ್ರ, ಪ್ರಭುದೇವರ ಮಂತ್ರಗೊ ವ್ಯದ ಟೀಕೆ ಇವುಗಳನ್ನು ಬರೆದಿದಾ ನೆ. ಇವನು ವೀರಶೈವಕವಿ; ವಿಜ್ಞಾ