ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



  ಶತಮಾನ]            ಬೊಮ್ಮರಸ.                   89
 
  ನೆಂದು ಆ ಗ್ರಂಥದಿಂದಲೂ ಮಲ್ಲಣಾರ್ಯನ ವೀರಶೈವಾಮೃತಪುರಾಣದಿಂದ 
  ಲೂ' ಊಹಿಸಲು ಅವಕಾಶವಿರುವುದರಿಂದ ಅವನ ಮಗ ಚಿಕ್ಕ ವೀರಣಾ 
  ರ್ಯನ ಕಾಲವು ಸುಮಾರು 1450 ಆಗಬಹುದು.ಕವಿಯ ಕಾಲವೂ ಇದೇ. 
  ಕವಿಯ ಸಮಕಾಲದವನಾದ ವಿಶ್ವನಾಧಾಚಾರ್ಯನು ಶಿವಲೆಂಕಮಂಚಣ್ಣನಿಂ 
  ದ(ಸು. 1160) 12 ನೆಯ ತಲೆಯವನಾಗುತ್ತಾನೆ. ತಲೆಗೆ 25 ವರ್ಷಗಳ 
  ಪ್ರಕಾರ ಲೆಕ್ಕಮಾಡಿದರೆ ಕವಿಗೆ ನಾವು ಕೊಟ್ಟ ಕಾಲವು ದೃಢೀಕೃತವಾಗು 
  ತ್ತದೆ.ಅಲ್ಲದೆ ಈ ವಿಶ್ವನಾಧಾಚಾರ್ಯನ ಮಗನಾದ ನೀಲಕಂಠಾಚಾರ್ಯ 
  ನು2 ಬರೆದಿರುವ ಆರಾಧ್ಯಚಾರಿತ್ರದಿಂದ ಇವನ ಕಾಲವು ಸುಮಾರು 1485 
  ಎಂದು ಹೊರಪಡುತ್ತದೆ. ಈ ವಿಷಯವೂ ಬೊಮ್ಮರಸನಿಗೆ ನಾವು ಹೇಳಿ 
  ರುವ ಕಾಲವನ್ನು ದೃಢಪಡಿಸುತ್ತದೆ.
       ಪೂರ್ವಕವಿಗಳಲ್ಲಿ ಭಾರವಿ, ಬಾಣ, ಉದ್ಭಟದೇವ, ಕಾಳಿದಾಸ 
  ಮಲುಹಣ, ಭೋಜ ಈ ಸಂಸ್ಕೃತಕವಿಗಳನ್ನೂ, ಹರೀಶ್ವರ, ಸೋಮ 
  ನಾಥ ಈ ಕನ್ನಡಕವಿಗಳನ್ನೂ ಸ್ಮರಿಸಿದ್ದಾನೆ.
        ಇವನ ಗ್ರಂಥ
                   ಸೌಂದರವುರಾಣ 
  ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಸಂಧಿ 19, ಪದ್ಯ 1205 
  ಇದರಲ್ಲಿ 63 ಶಿವಭಕ್ತರಲ್ಲಿ ಒಬ್ಬನಾದ ಸೌಂದರೇಶ ಆಥವಾ ನಂಬಿಯಣ್ಣ 
  ಎಂಬವನ ಚರಿತ್ರವು ವರ್ಣಿತವಾಗಿದೆ. “ಹರಿಹರೇಶ್ವರ ಸೋಮನಾಧ 
  ಮೊದಲಾದ ಕವಿವರರು ವಿಸ್ತರಿಸಿದೀ  ನಂಬ್ಯಣಾ೦ಕನ  ಪುಣ್ಯಚರಿತೆ 
  ಯನು ವರ್ಣಕದೊಳಾನು ಪೇಳಿಪೆ೦” ಎಂದು ಕವಿ ಹೇಳುತ್ತಾನೆ.ಕಥಾ 
  ಸಾರವು ಈ ಪದ್ಯದಲ್ಲಿ ಸೂಚಿತವಾಗಿದೆ:- 
   ಬಲವಂದು ಮತ್ತಗಜ ವಂದಿಸಿದುದಾವಂಗೆ | 
   ನೆಲೆಮೊಲೆಯೊಳಿರ್ದು ಶಂಕರನುಸಿರ್ದನಾವನೊಳು | 
  ಬಲುಹಿಂದೆ ಮೊಸಳೆ ನುಂಗಿದ ಶಿಶುವದಾವವನದೆಸೆಯಿಂದ ಮಗುಳುದಿಳೆಗೆ||  
  ಸುಲಭನಾವವನಾನತಗ್ಗಾವನಿ೦ದಿಷ್ಟ | 
  ಫಲ ಚೇರಮಂಗಾದುದಾವವನ ಭಜಿಸಿ ನಿ | 
 ರ್ಮಳಶೆವನಭವಪುರಿಯಂ ಸಾರ್ದನಾ ಸೌಂದರೇಂದ್ರನಂ ಪೊಗಖೇನೊಲಿದು|| 

       1, ಕಾಂಡ 8, ಸಂಧಿ 8, 2 ಇವನ ಚರಿತೆಯನ್ನು ನೋಡಿ
       12