ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತ ಮಾನ] ನಿಜಗುಣದೇವ. ವಚನ ನೆನೆವ ಮನಕ್ಕೆ ಮಣ್ಣನೆ ತೋಈಿದೆ, ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ; ಪೂಜಿಸುವ ಕೈಗೆ ಹೊನ್ನನೆ ತೋ0ದೆ. ಈ ತ್ರಿವಿಧವನೆ ತೋಡಿಕೊಟ್ಟು ಮದಿಹನಿ ಕ್ಕಿದೆಯಯ್ಯಾ, ಅಮರಗುಂಡದ ಮಲ್ಲಿಕಾರ್ಜುನ, ನೀ ಮಾಡಿದ ಬಿನ್ನಾಣಕ್ಕಾನು ಬೆಳಿ ಗಾದೆನು, 13 ಅಮುಗಿದೇವಯ್ಯ ಕೆಲವು ವಚನಗಳಲ್ಲಿ ಅವುಗೇಶ್ವರಲಿಂಗ ಎಂಬ ಅಂಕಿತವಿದೆ. ಆ ವುಗಳನ್ನು ಈತನು ರಚಿಸಿರಬಹುದು. ವಚನ ವಿಶ್ವ ಮಯರೂಪಾಗಿ ಬಂದೆಯಯ್ಯಾ, ಭಕ್ತಿಗೆ ಎನ್ನ ಮನಕ್ಕೆ ಸಲೆ ಸಂದ ನಿಲವು ಅಮುಗೇಶ್ವರಲಿಂಗಕ್ಕೆ ಮಾಟವಾಯಿತ್ತು. 14 ಗಣೇಶಮಸಣಯ್ಯ ಮಸಣಯ್ಯ ಪ್ರಿಯಗಜೇಶ್ವರ ಎಂಬ ಅಂಕಿತವುಳ್ಳ ಕೆಲವು ವಚನ ಗಳು ದೊರೆಯುತ್ತವೆ ಇವುಗಳನ್ನು ಈತನು ಬರೆದಿರಬಹುದು ವಚನ ಶಿವನೆ ನೀನು ಗುರುವಾದೆ, ಲಿಂಗವಾದೆ, ಜಂಗಮವಾದೆ, ಭಕ್ಯನಾದೆ, ಗುರು ವಾಗಿದ್ದು ಭಕ್ತನೊಳಡಗಿದೆ, ಲಿಂಗವಾಗಿದ್ದು ಭಕ್ತನೊಳಡಗಿದೆ; ಜಂಗಮವಾಗಿದ್ದು ಭಕ್ತ ನೊಳಡಗಿದೆ, ಇಂತಡಗುವರೇ ಹಿರಿಯರು, ಇಂತಡಗುವರೇ ಗರುವರು, ಇಂತಡಗು ವರೇ ಮಹಿಮರು; ಇವರಿಗೆ ಭಾಜನವೊಂದೆ, ಭೋಜನವೊಂದೆ. ಈ ನಾಲ್ಕು ಒಂ ದಾದ ಘನಕ್ಕೆ ಪರಿವಾಣ ಬೇಅಂಬ ಶಾಸ್ತ್ರದ ಸೂತ್ರಗಳನೆನಗೆ ತೋಅದಿರಾ ಮಸ ಣಯ್ಯಪ್ರಿಯಗಜೇಶ್ವರ. 15 ನಿಜಗುಣದೇವ, ಈತನ ವಚನಗಳಲ್ಲಿ ಇವನ ಹೆಸರು ವ್ಯಕ್ತವಾಗಿ ಹೇಳಿದೆ. ವಚನ ಅನುಳ್ಳನಕ ನೀನುಂಟೆಲೆಮಾಯೆ, ಆನಿಲ್ಲದಿರ್ದಡೆ ನೀನಿಲ್ಲ ಆ೯ ನೀನೆಂಬು ಭಯವಜಯಲು ಆನಂದನಿಜಗುಣಯೋಗ,