ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131 ಶತಮಾನ ತೆರಕಣಾಂಬಿ ಬೊಮ್ಮರಸನೆವ ಸವಿಯುತಾ ತಾಳಿದಂಗಳ | ತೆಲುನ ಸಾಧಿಸುತಲಾನೆಲ | ದೆಯರೂಟವ ಮಾಡುತಿರ್ದರು ಜಿಸ್ವೆ ದಣಿದಂತೆ || - ೩, ಜೀವಂಧರಸಾಂಗತ್ಯ ಇದರಲ್ಲಿ 20 ಸಂಧಿಗಳೂ 1449 ಪದ್ಯಗಳೂ ಇವೆ. ರಾಜಪುರಿಯ ಸತ್ಯಂಧರರಾಜನ ಮಗನಾದ ಜೀವಂಧರರಾಜನ ಕಥೆ ಇದರಲ್ಲಿ ಹೇಳಿದೆ. ಕಥಾಗರ್ಭವನ್ನು ಕವಿ ಈ ಪದ್ಯಭಾಗದಲ್ಲಿ ಸೂಚಿಸಿದ್ದಾನೆ ಸ್ಥಿರವಲ್ಲ ಸಂಸಾರಸುಖವೆಂದು ಜಿನದೀಕ್ಷ | ವೆರಸಿ ಸಕಲಕರ್ಮಗಳ | ಭಾರದಿಂದ ಹೇಸಿ ಮುಕ್ತಿಯನೆಯ್ದಿದ ಜೀವಂಧರನ ಕೃತಿ. - ಈ ಗ್ರಂಥದ ಉತ್ಕೃಷ್ಟತೆಯನ್ನು ಹೀಗೆ ಹೇಳಿದ್ದಾನೆ. ಬುಧಜನಮುಕುಠ ರಸಿಕರ್ಣಭೂಷಣ | ಮೃದುನುಡಿಗಳ ನೆಲೆವನೆಯು | ಸಾರಹೃದಯರ ಸೌಭಾಗ್ಯದ ಸದನವು | ವೀರರ ವಿಜಯದ ನೆಲೆಯು | ಸುಗುಣರ ಕರ್ಣಾಮೃತ ರಸಿಕರ ಹೊಸ | ಬಗೆ ಜಾಣರ ಮನದಟ್ಟು | ನಮಗೆ ದೊರೆತ ಪ್ರತಿಯಲ್ಲಿ ಆದಿಭಾಗವು ಹೋಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಚಂದ್ರಾಸಗಿರಿಯ ನಡರಿತಪವಿದ್ದಲ್ಲದೆ ಮುನ್ನ ನೆರಪಿಕೊಂಡಿರ್ದ ಕಲಂಕು | ಪರಿಹರಿಸದು ಎಂದು ಹೋಹಂತೆ ಪಡುವ | ಖರಿಗೆಯ್ದಿದ ಶಶಧರನು | ಮಿತ್ರನ ಹಗೆಯಾದನು ರೋಹಿಣಿಯೆಂ | ಬುತ್ತಮಸತಿಯಗಲಿದೆನು | ಮತ್ತೆ ಕಲಂಕುದಳೆದೆನೆಂದು ಸಸಿ ಒಜ್ಜೆ | ವೆತ್ತು ಬಿದ್ದನು ಶರಧಿಯಲಿ || ಸೂಕ್ಯಾಸ್ತ್ರ ಮಡದಿಗಂಗನೆಯಷರದಿಗೈಣ್ಣಿಗೆ | ನೋಡಿ ಕಳುಹಿದ ಮಾಣಿಕದ | ಗಾಡಿವಡೆದ ಕೈಪಿಡಿಯೆನೆಯತಿಗೆಂಪು | ಗೂಡಿ ನೇಸರಿಬಟ್ಟೆಸೆಯಿತು || ನರ್ತನ ಚಲಿಸುವ ಹೇಮಲತೆಯೊ ಕುಣಿದಾಡುವ | ಪೊಳೆವ ಮಿಸುನಿಯ ಪುತ್ತಳಿಯೋ | ಸುರಿದು ಸುಳಿದು ತೋಹವ ಬಳ್ಳಿ ಮಿಂಚಿನ | ಬೆಳವಣ್ಣ ನಟಿಸಿದಳದಸದು || ಮಾಲೆಗಾರ್ತಿ ಭಾವಕಿಯೊರ್ವಳು ಪೂಮಾಲೆಯನಾಂತ | ಭಾವಮೊಪ್ಪಿದುದು ನೋಬ್ಬರಿಗೆ | ಕಾವದೇವನ ಜಾನಿಪ ಯೋಗಿಣಿಯ ಕೈಯ | ಪಾವಜಪಸರದಂತೆ ||