ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

133 ಶತಮಾನ] ನೀಲಕಂಠಾಚಾರ, ನೀಲಕಂಠಾಚಾರ್ ಸು 1485 ಈತನು ಆರಾಧ್ಯಚಾರಿತ್ರವನ್ನು ಬರೆದಿದ್ದಾನೆ. ಇವನು ವೀರಶೈವ ಕು, ತನ್ನ ವಂಶಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ ಸೋಮಶಂಭುದೇಶಿಕ, ಇವನ ಮಗ ಕಾಮಿಕಾದ್ಯಖಿಳಶಿವಕಧಿತ ತಂತ್ರಾವ ಳಿಗೆ ಪ್ರೇಮದಿಂ ವೃತ್ತಿ ದೀಪಿಕೆಗಳಂ ಬಿತ್ತರಿಸಿ ಸೋಮಧರಸಮಯಮಂ ಧರಣಿಯೊಳ ನಿಸಿದ' ಸಕಲಾಗಮಾಚಾರ; ಮಗ :ವಿಶ್ವನಾಧಂಗೆ ಲೆಂಕತ್ವದಿಂದೆಸೆವ' ಶಿವಲೆಂ ಕಮಂಚಣ್ಣ ಪಂಡಿತ; ಮಗ ಉರಿಲಿಂಗದೇವದೇಶಿಕ; ಮಗ ಉರಿಲಿಂಗಪೆದ್ದಿ; ಮಕ ವಿಶ್ವೇಶ್ವರಪೆದ್ದಣಾಗ್ಯ; ಮಗ 'ವಿಭೂತಿಯ ಮಹಿಮೆಯಂ ಲೋಕದೊಳಗೆ ಪಸರಿಸಿದ' ವಿಭೂತಿಸಿದ್ದಾಚಾರ್; ಮಗ ಸೋಮನಾಧಾರ; ಮಗ ಅನಂತಪೆದ್ದಣ್ಣದೇಶಿಕ; ಮಗ ವಾರಾಣಸಿಯ ಬಲ್ಲಾರ್; ಮಗ ನಾಗನಾಧಾರಿ; (ಮಗ) ನೀಲಕಂಠಾಚಾರ; ಮಗ ವಿಶ್ವನಾಧಾರ, ಇವನ ಸಂತತಿಯಲ್ಲಿ ಹುಟ್ಟಿದವನು ಮಧುವೇಶ್ವರ; ಮಗ ನೀಲಕಂಠಾಚಾರ, ಮತ್ಯ ತಿಯಂತರಾಯಮಂ ತವಿಸುಗೆ' ಎಂದು ಕವಿ ಈತನನ್ನು ಪ್ರಾರ್ಧಿಸುತ್ತಾನೆ, ಮಗ “ಶಿವೋಕ್ತ ತಂತ್ರೆ ಕಕರ್ತಾರ' ನಾದ ವಿಶ್ವನಾಧದೇಶಿಕ; ಮಗ ಕವಿ ನೀಲಕಂರಾಚಾರ, - ಇವನ ಗುರು ಕರ್ಣಾಟಸಂಸ್ಕೃತಭಾಷೆಗಳಲ್ಲಿ ಪ್ರವೀಣನಾಗಿ ಶಿವಾಗಮಗಳನ್ನು ಭಕ್ತರ್ಗೆ ಬೋಧಿಸಿದ ಗಂಗಾಧರಾಚಾರ್, ಕವಿ ತಾನು ಈಶ್ವರಭಕ್ತನಾದ ಗಜವೇಂಟೆಕಾರ ವೀರನಂಜೇಂದ್ರನಿಂದ ಪೂಜಿತನಾಗಿ ದ್ದಂತೆ ಈ ಪದ್ಯದಲ್ಲಿ ಹೇಳಿದ್ದಾನೆ-- ಅದಿರಾಯಗರ್ವಪರ್ವತದಳನಬಿರುದನುರು { ತರವಿಪಕ್ಷಪ್ರಬಲಸೇನಾಬ್ಲಿ ಬಾಡಿಬಂ। ಪರಭೂಮಿಪಾಲದೇವಪ್ರಬಂಜನಭೋಗಿ ಯಾಚಕಾಮರಭಜನು || ಕರಮೆಸೆವಗಜವೇಂಟೆಕಾಲಿನೀಶ್ವರವಾದ | ಸರಸಿರುಹಸೇವಕಂ ವೀರನಂಜೇಂದ್ರನಿಂ। ಪರಿಪೂಜಿತಂ ನೀಲಕಂಠದೇಶಿಕನುಸಿರ್ದವೀಕೃತಿಯನಟಿಯಿಂದ || ಈ ವೀರನಂಜೇಂದ್ರನು 1482 ರಿಂದ 1494 ರವರೆಗೆ ಆಳಿದ ಉ ಮೃತ್ತೂರು ದೊರೆಯಾದ ಮಹಾಮಂಡಳೇಶ್ವರ ಗಜಬೇಟೆಕಾರ ಇಮ್ಮಡಿ ಕಾಯಒಡೆಯರ ಕುಮಾರ ವೀರನಂಜರಾಯಒಡೆಯರಾಗಿರಬೇಕು, ಇಷ ನ ಆಳಿಕೆಯಲ್ಲಿ ಗುಂಡಲುಪೇಟೆ 9ನೆಯ ಶಾಸನ (1489), ನಂಜನಗೂಡು 102 (1492), 118 (1491); ತಿರುಮಕೂಡಲುನರಸೀಪುರ 67 (1494)