ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

146

                           ಕರ್ಣಾಟಕ ಕವಿಚರಿತೆ.
                                                                    ೧೫ ನೆಯ
     ಈಕವಿ ಹಿಂದಣ ಕವಿಗಳಲ್ಲಿ ಜನ್ನ, ನೇಮಿಚಂದ್ರ, ಹೊನ್ನ, ಹಂಪರಸ, 
  ಅಗ್ಗಳ, ರನ್ನ, ಗುಣವರ್ಮ, ನಾಗವರ್ಮ ಇವರುಗಳನ್ನು ಸ್ಮರಿ ಸುತ್ತಾನೆ.
       ಇವನ ಗ್ರಂಥ
                           ಜೀವಂಧರಷಟ್ಟದಿ
     ಇದು ಭಾಮಿನಿಪಟ್ಟದಿಯಲ್ಲಿ ಬರೆದಿದೆ, ನಮಗೆ ದೊರೆತ ಅಸಮಗ್ರ 
  ಪ್ರತಿಯಲ್ಲಿ 9 ಸಂಧಿಗಳೂ 10ನೆಯ ಸಂಧಿಯಲ್ಲಿ 118 ಪದ್ಯಗಳೂ ಇವೆ.
  ಈ ಗ್ರಂಥದಲ್ಲಿ ಜೀವಂಧರನ ಕಥೆ ಹೇಳಿದೆ. ಗ್ರಂಧಾವತಾರದಲ್ಲಿ ಜಿನಸ್ತುತಿ ಇದೆ.
  ಬಳಿಕ ಕವಿ ಸಿದ್ದಾದಿಗಳು, ರತ್ನತ್ರಯ, ಸರಸ್ವತಿ, ಯಕ್ಷಯ 
  ಕಿಯರು ಇವರುಗಳನ್ನು ಸ್ಮರಿಸಿ, ಅನಂತರ ಕೊಂಡಕುಂದ, ಸಮಂತ ಭದ್ರ,
  ಪಂಡಿತಮುನಿ, ಧರ್ಮಭೂಷಣ, ಭಟ್ಟಾಕಳಂಕ, ದೇವಕೀರ್ತಿ, 
  ಮುನಿಭದ್ರ, ಲಲಿತಕೀರ್ತಿ, ವಿಜಯಕೀರ್ತಿ, ಶ್ರುತಕೀರ್ತಿ ಈ ಗುರುಗಳನ್ನು ಹೊಗಳಿದ್ದಾನೆ. 
  ಈ ಗ್ರಂಧದಿಂದ ಕವಿಗೆ ಸಂಬಂಧಿಸಿದ ಒಂದು ಪದ್ಯ ವನ್ನು ಉದ್ಧರಿಸಿ ಬರೆಯುತ್ತೇವೆ.
     ತುಳುವುಹಾವೇಶದೊಳು ಬಯಿದೂ | ರೊಳಗೆ ಸೇನಾಪತಿಯ ದಾನಿಯ |
     ಇಳೆಗೆ ಸೇವನೆನಿಪ್ಪ ತಮ್ಮಣಸೆಟ್ಟಿ ಯಂಗನೆಯು ||
     ಜಳಜಮುಜಿರಾಮಕ್ಕಗಾದರೆ | ಕುಳತಿಳಕಸೋಮೇಶ ಕವಿಜನ |
     ನಿಳಯಕೋಟೀಶ್ವರನು ಸದ್ದು ಣದುಗರ್ನೆಬನವನು ||
                ಆನಂದಬಸವಲಿಂಗಶಿವಯೋಗಿ. ಸು. 1500 
       ಈತನು ಮಾಚಿದೇವಮನೋವಿಲಾಸವನ್ನು ಬರೆದಿದ್ದಾನೆ, ಇವನು ವೀರಶೈವಕವಿ.
   ತೋಂಟದಸಿದ್ದಲಿಂಗನನ್ನೂ (ಸು 1470) ಅವನ ಶಿಷ್ಯ 
   ಬೋಳಬಸವನನ್ನೂ ಸ್ತುತಿಸಿ ಗ್ರಂಥವನ್ನು ಆರಂಭಿಸಿರುವುದರಿಂದ ಕವಿ 
   ಬೋಳಬಸವನ ಶಿಷ್ಯನಾಗಿರಬಹುದೆಂದು ತೋರುತ್ತದೆ. ಹಾಗಿದ್ದಪಕ್ಷ
   ದಲ್ಲಿ ಕವಿಯ ಕಾಲವು ಸುಮಾರು 1500 ಆಗಬಹುದು.
   ಇವನ ಗ್ರಂಥ
                    ಮಾಚಿದೇವವ ನೋವಿಲಾಸ
       ಇದು ಗದ್ಯರೂಪವಾಗಿದೆ; ಪ್ರಕರಣ 34. ಇದರಲ್ಲಿ ಮಡಿವಳಮಾ 
   ಚಿದೇವನ ಮನೋಭಾವವನ್ನು ಅನುಸರಿಸಿ ವೀರಶೈವಸಿದ್ಧಾಂತವು ನಿರೂಪಿ