ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ ಈಶ್ವರಕವಿ. 151

ಎಂಬ ಪದ್ಯಗಳಿಂದಲೂ, “ ಇತಿ ಬಾಣಕವಿವಿನಿರ್ಮಿತಮಪ್ಪ ಛಂದೋಂ ಬುರಾಶಿ ಪ್ರಥಮ ಪರಿಚ್ಛೇದಸ್ಸಮಾಪ್ತಃ ” ಎಂಬ ಗದ್ಯದಿಂದಲೂ ಕವಿಗೆ ಬಾಣ, ಫಣಿವರ್ಮ ಎಂಬ ನಾಮಾಂತರಗಳೂ ಅಷ್ಟಭಾಷಾಕವಿವರ

ಎಂಬ ಬಿರುದೂ ಗ್ರಂಧಕ್ಕೆ ಛಂದೋಂಬುಧಿ ಎಂಬ ಹೆಸರೂ ಇದ್ದಂತೆ ತಿಳಿ 

ಯುತ್ತದೆ. ಈಯಂಶಗಳನ್ನು ಮೆ.|| ಕಿಟ್ಟಲ್ ಹೇಳಿಲ್ಲ. ಅಭಿನವಕೇಶಿ

ರಾಜ ಎಂದು ಹೇಳಿಕೊಂಡಿರುವುದರಿಂದ ಈತನು ಕೇಶಿರಾಜನಿಗಿಂತ (ಸು. 

126೦) ಈಚೆಯವನೆಂಬುದಂತೂ ಸ್ಪಸ್ಟವಾಗಿಯೇ ಇದೆ. ಆಂಧ್ರಕವಿ ಗಳು ಉಪಯೋಗಿಸುವ ವಡಿಗಳನ್ನು ವಿವರಿಸುವುದರಿಂದ ಅಪ್ಪಕವಿಯು

(ಸು.1450) ಕಾಲಕ್ಕೆ ಈಚೆಯವನೆಂದು ತೋರುತ್ತದೆ. ಸುಮಾರು 1500
ರಲ್ಲಿ ಇದ್ದಿರಬಹುದು, ಕನಕದಾಸನು (ಸು. 1550) ಪ್ರಸುವಡಿಗಳನ್ನು ಉ
ಪಯೊಗಿಸಿ ತನ್ನ ಮೋಹನತರಂಗಿಣಿಯನ್ನು ಬರೆವಂತೆ ಹೇಳುತ್ತಾನೆ.

ಇವನ ಗ್ರಂಥ.

                            ಕವಿಜಿಹ್ವಾ ಬಂಧನ 

ಇದು ಮುಖ್ಯವಾಗಿ ಛಂದಸ್ಸನ್ನು ಬೋಧಿಸುವ ಗ್ರಂಥ ; ಕಂದವೃ

ತ್ರಗಳಲ್ಲಿ ಬರೆದಿದೆ : ಪರಿಚ್ಛೇದ 4.

1ನೆಯ ಪರಿಚ್ಛೇದದಲ್ಲಿ ಗಣಗಳೂ ಅವುಗಳ ವರ್ಣವಾಹನಮೈತ್ರಿವೈರಕುಲ ದೇವತಾಫಲಾದಿಗಳೂ ಹೇಳಿವೆ. 2ನೆಯದರಲ್ಲಿ ಪ್ರಾಸುವಡಿಗಳು ನಿರೂಪಿಸಲ್ಪಟ್ಟಿವೆ.

ಪ್ರಾಸುಗಳಲ್ಲಿ ಸಿಂಹ, ಗಬ, ವೃಷಭ, ಶರಭ, ವಾಸವಾಕ್ಷಿ, ಮಿತ್ರ, ಮಹಾಪ್ರಾಣ 

ಮೊದಲಾದ 28 ಭೇದಗಳನ್ನು ಹೇಳುತ್ತಾನೆ. ವಡಿಗಳಲ್ಲಿ ಪದ್ಮ, ಗರುಡ, ಸಾರಂಗ,

ಹಂಸ, ಪರಮಾರ್ದ, ಕಾಕ ಎಂಬ 6 ಭೇದಗಳನ್ನೂ ಮತ್ತು ಸ್ವರ, ಸರಸ, ಏಕ 

ವರ್ಣ, ಸಂಯುಕ್ತಾಕ್ಷರ, ವರ್ಗ ಎಂಬ 5 ಭೇದಗಳನ್ನೂ ಹೇಳುತ್ತಾನೆ, 3ನೆಯದ

ರಲ್ಲಿ ಅಕ್ಷರಗಳೂ, ಅವಗಳ ಕುಲ, ಅಧಿದೇವತೆ ಮೊದಲಾದ ವಿಷಯಗಳೂ ಹೇಳಿವೆ.
4ನೆಯದರ, ಭಾವ, ಅಲ೦ಕಾರ, ಕಂದಷಟ್ಪದಿಗಳ ಲಕ್ಷಣ ಮುಂತಾದ ಅಂಶಗಳು
ಹೇಳಿವೆ.

ಹೆಂಡತಿಯನ್ನು ಸಂಬೋಧಿಸಿ ಕವಿ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತೇವೆ:

ಉಸರಿದ ತನುವವೋಲ್ ಭಾ|ವಿಸಲುಂ ಪ್ರಾಸಿಲ್ಲದಿರ್ಪ ಪದಪದ್ಯಂಗಳ್ |
ಒಸೆದದನು ಹೇರಿ ಕೇಳಿದ 1 ರಸಿಕರ್ಗಾಯುಷ್ಯಮಾನಹಾನಿಗಳಕ್ಕುಂ ||