ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಕರ್ಣಾಟಕ ಕವಿಚರಿತೆ. [16 ನೆಯ ಕ್ರಾಂತನಿರಸ್ತನಿಖಿಲಸಂಸಾರಶ್ರಮವಿಸ್ಸಾರಿತನಿಜಾನಂದಾಸ್ವಾದನಾಸಕ್ತಚಿತ್ತೋಪೇತ ನಿಜಗುಣಾಹ್ವಯೇನ ಶಿವಯೋಗಿನಾ ವಿರಚಿತಮಪ್ಪ ಪರವಾರ್ಧಗೀತನಾಮಪ್ರಕರಣಂ, ಈ ಪದಲಕ್ಷಣವಿಲ್ಲದಿದ್ದರೂ ಈ ಗ್ರಂಥವು ವಿಶೇಷವಾದ ಅರ್ಥವನ್ನು ಒಳಕೊಂಡಿರುವುದರಿಂದ ಸೇವ್ಯವೆಂದು ಕವಿ ಈ ಪದ್ಯದಲ್ಲಿ ಹೇಳುತ್ತಾನೆ. ಪದಲಕ್ಷಣವಿಲ್ಲದೊಡಿಂ | ತಿದು ಸೇವ್ಯಂ ಜಗದೊಳರ್ಧ ಮುಳ್ಳು ದಕಂದಂ || ವಿದಿತಂ ಪೊನ್ನುಳ್ಳಂ ಗುಣ | ದೊದವಾವುದುಮಿಲ್ಲದಿರ್ದೊಡಂ ಗುಣಿಯಲ್ಲೇ | - ಈ ಗ್ರಂಥದಿಂದ ಒಂದೆರಡು ಗೀತಗಳನ್ನು ತೆಗೆದು ಬರೆಯುತ್ತೇವೆ ವರತನುಜನೆ ವಾಕ್ಕದು ನಾಲ್ಕು | ಪರೆಪಠ್ಯ೦ತ್ಯಾದಿಗಳೆನಿಸಿಕ್ಕು | ನುಡಿವಾತನ ತನುವ ಧ್ಯದೊಳೆಂದು | ಬಿಡದಿಹ ನಾದವೆ ತಿಳಿ ಪರೆಯೆಂದು | ನಾಭಿಯೊಳದು ನಿಷ್ಕಲವರ್ಣತೆಯ | ಶೋಭೆವಡೆಯೆ ಪಶ್ಯಂತಿಯೆ ತಿಳಿಯ | ಹೃದಯದೊಳದು ನುಡಿವಿಚ್ಚೆಯೊಳೊಂದೆ | ಒದವಿದ ಮಧ್ಯಮೆಯಪ್ಪದು ಮುಂದೆ! ಅದು ಕೇಳಸುವಿಂದುರ ಮೊದಲಾಗಿ | ಪದವೆಂಟಳಕ್ಷರರೂಪಾಗಿ | ಪುಟ್ಟುವ ವಚನವೆ ವೈಖರಿಯನ್ನು ! ನೆಟ್ಟನೆ ಸಂಸ್ಕೃತಿಗದು ಮೊದಲಕ್ಕು || ಬಕಿಂತೀವಿಷಯಂಗಳು ನೋಡೆ | ಘಲನೆ ಮೋಹಿಸಿ ಕೆಡುವುವು ಕೂಡೆ | ಮುಗಿಲೊಡ್ಡಣೆ ಮಿಂಚಿನ ಕಳೆಯಂತೆ | ಮೃಗತೃಷ್ಠೆಯ ಕನಸಿನ ಸಿರಿಯಂತೆ | ಸುರಧನುಬೊಬ್ಬುಳಿಕೆಯ ಬಗೆಯಂತೆ | ತೆರೆದೀಪಜ್ವಾಲೆಯ ತೆಲಿನಂತೆ || ಸುಗಾಳಿಯ ಮಂಜಿನ ಪರಿಯಂತೆ | ಮಣಿಗಲ್ಲಿನ ನೆವಿಪಿಂಚೆಗಳಂತೆ || ಯುವತಿಯ ಚಿತ್ರದ ಕಾಹುರದಂತೆ | ವಿವಿಧವಿಷಯವೆಲ್ಲವು ತಾವಿಂತೆ | ಅದಂ ದೃಢಮತಿಯವಳು ಸಲ್ಲ | ಮುದವಣುಮಾತ್ರದನಿತುಮಲ್ಲಿಲ್ಲ || 4 ಪರವಾನುಭವಬೋಧೆ. ಇದು ಸಾಂಗತ್ಯದಲ್ಲಿ ಬರೆದಿರುವಂತೆ ತೋರುತ್ತದೆ ; ಸಂಧಿ 6, ಸೂತ್ರ 122, ಪದ 985, ಇದರಲ್ಲಿ ಅದ್ದೆ ತತತ್ವವನು ಪ್ರಕಟಿಸುವೆನು ಬೋಧಗತಿಯಿಂದ” ಎಂದು ಕವಿ ಹೇಳುತ್ತಾನೆ, ಗ್ರಂಥವು ಯಾಜ್ಞವಲ್ಯ ಮೈತ್ರೇಯಿಗಳ ಸಂವಾದರೂಪವಾಗಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ-- ಇದು ವೇದವೇದಾಂತದೊಳು ಗೋಪ್ಯವಾದರ್ಧವಿದು ಪುರಾಣಾಗಮಸ್ಕೃತಿಸಾರ) ಇದು ಪರಮಾರ್ಥದ ತಿರುಳು ತತ್ವರಹಸ್ಯ (ವಿದು ಪ್ರಾಕೃತವೆ ಎಲ್ಲರಯಿ ||