ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ವ್ಯಾಸರಾಯ. 287 ಕಾಮಕ್ರೋಧವ ತಾ ಬಿಡಬೇಕು | ಮಮತಾಹಂಕಾರವ ಕಳೆಯಲಿಬೇಕು |

ಸೌಮ್ಯರಾ ಸಂಗದೊಳಿರಬೇಕು ||3||
ವೇದಶಾಸ್ತ್ರವನೋದಲಿಬೇಕು |ಬೋಧತತ್ವವ ತಿಳಿಯಲಿಬೇಕು | 

ಮಾಧವನ ಸ್ಮರಣೆಯ ಮಾಡಲಿಬೇಕು ||4|| ತಂದೆಕೃಷ್ಣನ ದಯವಿರಬೇಕು | ಬಂದುದುಂಡು ಸುಖಬಡಬೇಕು|

ಚೆಂದಾಗಿ ಜಗದೊಳಗಿರಬೇಕು ||5||
             ______
             ಓದುವಗಿರಿಯ ಸು.  1525 

ಈತನು ಸಾನಂದಗಣೇಶಸಾಂಗತ್ಯ ,ಹರಿಶ್ಚಂದ್ರಸಾಂಗತ್ಯ ಇವುಗಳನ್ನು ಬರೆದಿದ್ದಾನೆ ಇವನು ವೀರಶೈವಕವಿ ; “ಪುರಾಣದ ವಿರೂಪಾಕ್ಷನ ವರಗರ್ಭಶರಥಿಚಂದ್ರಮನ ಪರಮಪಾವನಮೂರ್ತಿ ಕಂತೆಯದೇ ವರ ಚರಣವ ನಾ ಬಲಗೊಂಬೆ ” ಎಂಬುದರಿಂದ ಈ ಕಂತೆಯದೇವನು ಇವನ ಗುರುವಾಗಿರಬಹುದು. ಇವನ ತಂದೆ ಕರಿಯಸೋಮಪ್ಪ, ಶ್ರೀಗಿರಿಯಮಲ್ಲೇಶನ ಚರಣಕಮಲಮಧುಕರನು, ವರಕವಿಶರಥಿಚಂದ್ರಮನ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಹರಿಣಪುರಸಿಂಹಾಸನಾಧೀಶ್ವರ ಗುರುಕೆಂಪನಂಜೇಶ್ವರನುದರಜಾತ ನಂಜಯ್ಯನು ಈ ಎರಡುಗ್ರಂಥಗಳನ್ನೂ ತನ್ನಿಂದ ಬರಸಿದಂತೆ ಹೇಳುತ್ತಾನೆ. ಛಂದವಲಂಕಾರವೋಂದಿದ ನಡಿ ಪ್ರಾಸು ಬಿಂದುವೆಂಬೀಗಣನೆಯನೊಂದುವನಂತವನಲ್ಲ ಎನ್ನುತ್ತಾನೆ. ಇವನ ಹರಿಶ್ಚಂದ್ರಸಾಂಗತ್ಯವು ಶಕ 1498 ಈಶ್ವರವರ್ಷದಲ್ಲಿಎಂದರೆ 1577 ರಲ್ಲಿ-ಪ್ರತಿಮಾಡಲ್ಪಟ್ಟಂತೆ ತಿಳಿವುದರಿಂದ ಇವನ ಕಾಲವು ಸುಮಾರು 1525 ಆಗಿರಬಹುದು.

    ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ.
ಬಾಣಮಯೂರನುದ್ಭಟಕಾಳಿದಾಸಸು| ಜಾಣಹಂಪೆಯಹರೀಶ್ವರನ |
ಮಾಣದೆ ಮಲುಹಣೇಶ್ವರರಾಘವಾಂಕನ | ಕೇಣವಿಲ್ಲದೆ ಬಲಗೊಂಬೆ |
   ಇವನ ಗ್ರಂಥಗಳಲ್ಲಿ
          1. ಸಾನಂದಗಣೇಶಸಾಂಗತ್ಯ               
 ಸಂಧಿ 6, ಪದ್ಯ 440. ಇದರ ಕಥಾಗರ್ಭವನ್ನು ಕವಿ “ ನಿರ 

‌______________________________________________

    1 ಇನ್ನೊಂದು ಪ್ರತಿಯಲ್ಲಿ 478 ಎಂದಿದೆ