ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

226 ಕರ್ಣಾಟಕ ಕವಿಚರಿತೆ. [18 ನೆಯ

                    ಗರುಡನ ಯುದ್ಧ

ಕೈದುವಿನ ಮಳೆಗಳನು ಪಕ್ಷದೊ | ಳೈದೆ ಹೂರಬೀಸಿದನು ಸಖದಲಿ | ಕೊಯ್ದು ಬೀಸಾಡಿದನು ಗಜರಧತುರಗಪಜ್ತಿಗಳ || ಭೇದಿಸಿದನತಿಬಲರ ತುಂಡದೊ | ಳೂದಿದನು ಕೆಲಬಲದ ಸುಭಟರ | ಹಾದಿಯಲಿ ಹರಹಿದನು ನೆರಹಿದನಂತಕನಪುರದಿ ||

 ನಿತ್ಯಾತ್ಮ ಎಂಬ ಅಂಕಿತವುಳ್ಳ ಕೆಲವು ಹಾಡುಗಳಿವೆ.  ಇವು ಏತ

ಕ್ಕವಿಕೃತವಾಗಿರಬಹುದೋ ಏನೋ ತಿಳಿಯದು.

                       ___________
               ಇಮ್ಮಡಿ ತೋಂಟದಯ್ಯ.  ಸು. 1530 
 ಈತನು ವಜ್ರಬಾಹುಚರಿತೆಯನ್ನು ಬರೆದಿದ್ದಾನೆ.  ಇವನು ವೀರ ಶೈವಕವಿ, ಇವನ ತಂದೆ ತೋಂಟದ ಸಿದ್ದಲಿಂಗಯತಿಯ ಭಕ್ತನಾದ ತೋಂಟಭೂಪಾಲನು, ತಾಯಿ ಸಂಗಮಾಂಬೆ."ತಾನು ಚಿಟ್ಟನಪುರಿಗೆ ಪ್ರಭು ಎಂದು ಹೇಳಿಕೊಂಡಿದ್ದಾನೆ. ತನ್ನ ತಂದೆ ತೋಂಟದಸಿದ್ದಲಿಂಗಯತಿಯ (ಸು. 1470) ಭಕ್ತನೆಂದು ಹೇಳುವುದರಿಂದ ಅವನು ಆ ಯತಿಯ ಶಿಷ್ಯನಾ ಗಿದ್ದಿರಬಹುದೆಂದು ತೋರುತ್ತದೆ. ಹಾಗಿದ್ದಪಕ್ಷದಲ್ಲಿ ಕವಿಯ ಕಾಲವು ಸುಮಾರು 1530 ಆಗಬಹುದು.
   ಪೂರ್ವಕವಿಗಳಲ್ಲಿ ಮಲ್ಲಣ, ಹರಿಹರ, ಪದ್ಮ ಪುರಾಣಕರ್ತೃವಾದ ಕೆರೆ ಯಪದ್ಮರಸ, 'ಭಸಿತರುದ್ರಾಕ್ಷೆಗಳ ಮಹಾಮಹಿಮೆಯಂ ವಿರಚಿಸಿದ' ಸಿದ್ಧ ಲಿಂಗೇಶ್ವರ, “ವೀರಶೈವಾಗಮರಹಸ್ಯಮಂ ವಿರಚಿಸಿದ” ಮುತ್ತಿನ ಕಂತೆ ಯಾರ್ಯ ಇವರುಗಳನ್ನು ಸ್ತುತಿಸಿದ್ದಾನೆ.
 ಇವನ ಗ್ರಂಧ
                         ವಜ್ರಬಾಹುಚರಿತೆ 

ಇದಕ್ಕೆ ತೋಂಟದಯ್ಯನ ಕಾವ್ಯ ಎಂಬ ಹೆಸರೂ ಇರುವಂತೆ ತೋರುತ್ತದೆ ಇದು ವಾರ್ಧಕಷಟ್ಪದಿಯಲ್ಲಿ ಬರೆದಿದೆ; ನಮಗೆ ದೊರೆತ ಅಸಮಗ್ರಪ್ರತಿಯಲ್ಲಿ 5 ಸಂಧಿಗಳಿವೆ. ಈ ಗ್ರಂಥವು ವೀರಶೈವಸಂಸ್ಥಾ ಪನಾಚಾರ್ಯನೆನಿಸಿದ ಚಂದ್ರಸೇನಸುತ ವಜ್ರಬಾಹುವಿನ ಸದಮಲಾನಂದ ಸಚ್ಚಾರಿತ್ರಂ' ಎಂದು ಕವಿ ಹೇಳುತ್ತಾನೆ. ಈ ಕಾವ್ಯದ ಉತ್ಕೃಷ್ಟತೆ ಯನ್ನು ಈರೀತಿಯಾಗಿ ಹೇಳಿಕೊಂಡಿದ್ದಾನೆ----