ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶತಮಾನ] ಸಾಳ್ವೆ, 245

ಎಂಬ ಹೆಸರೂ ಉಂಟು. ಇದರಲ್ಲಿ ಹರಿವಂಶ, ಕುರುವಂಶ ಇವುಗಳ ಚರಿತ್ರವು ಹೇಳಿದೆ. ದೋಷಯುಕ್ತವಾದ ಇತರಭಾರತಕಥೆಯನ್ನು ಕೇಳದೆ ಈ ಜಿನಪಾವನಚರಿತ್ರವನ್ನು ಕೇಳಬೇಕೆಂದು ಕವಿ ಈ ಪದ್ಯದಲ್ಲಿ ಹೇಳುತ್ತಾನೆ. ಕೊಲಿಸಿದಾತನೆ ದೇವ ಕೊಂದಗ್ಗಳಿಕೆಯಿಂದವೆ ಪುಣ್ಯಪುರುಷರು | ಪಲವು ಮಾತೇನೈವರೊಡಹುಟ್ಟಿದರು ಸನ್ನು ತರು || ಲಲನೆಯೊರ್ವಳನಾಳ್ದರೆಂಬೀಫೊಲೆನುಡಿಗೆ ಕಿಂಗುಡದೆ ಸಜ್ಜನ | ರೊಲಿದು ಚಿತ್ತೈಸುವುದು ಜಿನಪಾವನಚರಿತ್ರವನು ||

 ಈ ಗ್ರಂಥದ ಉತ್ಕೃಷ್ಟತೆಯನ್ನು-- 

ನವರಸದ ನೆಲೆ ಮಧುರಭಾವದ | ತವದಲಂಕಾರಂಗಳಿಂದೊ | ಫ್ಟವ ಎಮಲಲಲಿತಾಂಗಮೃದುಪದರಚನೆ ನೆಱೆವೆಱೆವೆ|| ವಿವಿಧಗುಣಗಣನಿಯೆ ಸೊಬಗಿನ | ಸವಿಯ, ಸೈವೞೆಗೞೆವ ಮತ್ಕೃತಿ | ಯುವತಿ ಚದುರರ ಮನವನಿರ್ಕುೞುಗೊಳ್ವುದಚ್ಚರಿನೇ|| ಎಂಬ ಪದ್ಯದಲ್ಲಿ ಹೇಳಿ, ಇದು 'ಪಾಡುಗವಿತೆ' ಯಾದುದರಿಂದ ಇದರಲ್ಲಿ ಱೞಕುಲಳಪ್ರಾಸ, ಶಿಧಿಲತ್ವ ಮುಂತಾದ ಕೊರತೆಯನ್ನು ದೊಷವಾಗಿ ಭಾವಿಸಕೂಡದೆಂದು ಈ ಪದ್ಯದಲ್ಲಿ ಹೇಳಿದ್ದಾನೆ_ ಱೞಕುಳಕ್ಷಳಲತ್ವರೇಫೋ | ಜ್ವಲಱಕಾರಪ್ರಾಸಭೇದಂ| ಗಳ ಸ್ವರವ್ಯಂಜನವಿಭಕ್ತಿಸಮಾಸಶಿಥಿಲಗಳ || ಪೞುಯನೇನುಂ ಪಾಡುಗವಿತೆಗೆ / ಳೊಳು ವಿಚಾರಿಸಸಲ್ಲದೆಂಬ | ಗ್ಗಳದ ಪೞಗಬ್ಬಿಗರ ಪೇೞ್ಕೆಯತೆಱದಿ ಎರಚಿಸಿದೆ || ಗ್ರಂಥಾವತಾರದಲ್ಲಿ ನೇಮಿನಾಥಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿ ಗಳು, ಗಣಧರರು, ಜಿನಧರ್ಮ, ಕೂಷ್ಮಾಂಡಿನಿ, ಸರ್ವಾಹ್ಣಯಕ್ಷ, ಸರ ಸ್ವತಿ, ಕೇವಲಿಗಳು ಅನುಬದ್ಧಕೇವಲಿಗಳು, ಶ್ರುತಕೇವಲಿಗಳು, ದಶಪೂ ರ್ವಧಾರಿಗಳು, ಏಕಾದಶಾಂಗಧಾರಿಗಳಾ, ಪ್ರಥಮಾಂಗಧಾರಿಗಳು ಇವರು ಗಳನ್ನು ಸ್ಮರಿಸಿ ಅನಂತರ ಗೃಧ್ರಪಿಂಛನು ಮೊದಲುಗೊಂಡು ಸಾಲಕೀರ್ತಿ