ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಕರ್ಣಾಟಕ ಕವಿಚರಿತೆ. [16 ನಯ ಕಾರ ಮಿಂಚುಮನವರ ಕಣ್ಣೊಳು | ಸೇರಿಸಿದನೆನೆ ಗಾಡಿಯರು ಕಾಂ | ತಾರಚರಿಯರು ಮೆಱೆದರಲ್ಲಿ ಪುಳಿಂದರೊಗ್ಗಿನಲಿ | ದೇಹಾನಿತ್ಯತೆ ಎನಿತು ಘನವಾದಡೆಯು ತನುಗಪ | ಘನವೆಸರನಿಟ್ಟಜನೆ ಸುಜನನು | ಜನಿತದೋಷದ ಗೊತ್ತು ಕುತ್ತದ ಬಿತ್ತು ಭಯದೊತ್ತು!! ನೆನೆಯಬಾರದ ಹೇಸಿಕೆಗೆ ತಾ | ಯ್ವನೆ ವಿಚಾರಿಸೆ ಜೀವಗದೆ ಸೆಱೆ | ವನೆಯದನೆ ಬಿಟ್ಟವನೆ ಸುಖಿ ನಿಜಜನಕ ಕೇಳೆಂದ || 2 ರಸರತ್ನಾಕರ ಇದು ಮುಖ್ಯವಾಗಿ ರಸಪ್ರಕ್ರಿಯೆಯನ್ನು ಪ್ರತಿಪಾದಿಸುತ್ತದೆ; ಶೃಂ ಗಾರಪ್ರಪಂಚ, ರಸವಿವರಣ, ನಾಯಕನಾಯಿಕಾವಿವರಣ, ಭಾವಾಧಿಕ ರಣ ಎಂದು 4 ಆಶ್ವಾಸಗಳಾಗಿ ಭಾಗಿಸಲ್ಪಟ್ಟಿದೆ. ಪಂಪ, ರನ್ನ, ನೇಮಿ ಚಂದ್ರ ಮೊದಲಾದ ಕವಿಗಳ ಗ್ರಂಧಗಳಿಂದ ಪದ್ಯಗಳು ಉದಾಹರಿಸಲ್ಪ ಟ್ವಿವೆ. ತಾನು ಅವಲಂಬಿಸಿದ ಪೂರ ಶಾಸ್ತ್ರಕಾರರನ್ನು ಕವಿ ಈ ಭಾಗ ಗಳಲ್ಲಿ ಹೇಳಿದ್ದಾನೆ-- ಆನಾರ್ಯರಿಂದೆ ತಿಳಿದಮೃ | ತಾನಂದಿಯ ರುದ್ರಭಟ್ಟನಾತೆಱದಿಂ ವಿ || ದ್ಯಾನಾಧಹೇಮಚಂದ್ರರ ! ಭೂನುತಮಾರ್ಗಾದಿಯಂದಮಂ ವಿರಚಿಸಿದೆಂ || ಇಂತು ನಾಗವರ್ಮಕವಿಕಾವಾದಿಗಳ ಮಾರ್ಗದಿಂ ರಸಭಾವಾದಿಗಳನೆಲ್ಲಾ ವಿದ್ಯತ್ಸ ಭೆಗಮುಭಯಭಾಷೆಗಮಿಷ್ಟಮಪ್ಪಂತು ಕನ್ನಡಿಸಿದೆಂ, ತನಗೆ ಹಿಂದೆ ಆರೂ ಹೀಗೆ ಕನ್ನಡದಲ್ಲಿ ವಿವರಿಸಿರಲಿಲ್ಲ ಎಂಬಂಶ ವನ್ನು ಈ ಪದ್ಯದಲ್ಲಿ ತಿಳಿಸುತ್ತಾನೆ. ಇಂದುವರಮಾರುಮಾತೆಱ | ದಿಂದಂ ಕನ್ನಡದೊಳಾರ ರಾ ಎಂಬಿನಮೊ || ಳ್ವಿಂದೆ ವಿವರಿಸಿದುದಿಲ್ಲೆನೆ | ಚಂದದೆ ಬಿಚ್ಚಳಿಯೆ ರಚಿಸಿದಂ ಕವಿಸಾಳ್ವಂ || ಗ್ರಂಥಾವತಾರದಲ್ಲಿ ಜಿನಸ್ತುತಿಯೂ ಸರಸ್ವತೀಸ್ತುತಿಯೂ ಇವೆ ಆಶ್ವಾಸಾಂತ್ಯದಲ್ಲಿ ಈ ಗದ್ಯವಿದೆ.. - ಇದು ಶತೇಂದ್ರಮುನೀಂದ್ರ ವಂದಿತಾರ್ಹತ್ಪರಮೇಶ್ವರ ಪಾದಾರವಿಂದಾಮಂದಮಕ ರಂದಾನಂದಿತಭೃಂಗಾಯಮಾನ ಕವಿಸಾಳ್ವ ವಿರಚಿತಮಪ್ಪ ರಸರತ್ನಾ

ಕರದೊಳ್.