ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

268 ಕರ್ಣಾಟಕ ಕವಿಚರಿತೆ. [16 ನಯ ಸ್ವರಾ ಎಂದು ಮುಗಿಯುತ್ತವೆ, ಕೆಲವು ಮಾತ್ರ ಗಿರಿಮಲ್ಲಿಕಾರ್ಜುನಾ ಎಂದು ಮುಗಿಯುತ್ತವೆ ಈ ಗ್ರಂಥವು ಈಶ್ವರಸ್ತುತಿರೂಪವಾಗಿಯೂ ವೀರ ಶೈವಸಿದ್ಧಾಂತಬೋಧಕವಾಗಿಯೂ ಇದೆ. ಇದರಲ್ಲಿ ಗುರು, ಲಿಂಗ, ಜಂ ಗಮ, ಪಾದೋದಕ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಪ್ರಸಾದ ಇವು ಗಳ ಮಹಿಮೆ ವರ್ಣಿತವಾಗಿರುವುದರಿಂದ ಇದಕ್ಕೆ ಅಷ್ಟಾವರಣಸ್ತವ ಎಂಬ ಹೆಸರೂ ಇರುವಂತೆ ತೋರುತ್ತದೆ ಇದರ ವಿಷಯವಾಗಿ ಕವಿ ಹೀಗೆ ಹೇಳುತ್ತಾನೆ. ಇಂತಷ್ಟಾ ವರಣಸ್ತವಾಂಕಮನಿದಂ ಶ್ರೀಶೈಲಮಲ್ಲೇಶನಾ || ಮಂ ತಳ್ತೋಪ್ಪುವ ಪಾಂಗಿನಿಂ ಸದಮಳಾರ್ಧಂ ರಂಜಿಪಂತೊಟ್ಟು ಪೇ || ಳ್ದಂ ತತ್ರ್ವಾ ರ್ಧ ವಿದಂ ಶಿವೈಕ್ಯಪದಪಂಕೇಜಾತಭೃಂಗೋಪಮ | ಸ್ವಾಂತಂ ತಾಂ ಸಿರಿನಾಮಧೇಯನನಘಂ ಸದ್ಭಕ್ತಿಯಿಂ ಯುಕ್ತಿಯಿಂ || - ಗ್ರಂಥಾವತಾರದಲ್ಲಿ ಈಶ್ವರಸ್ತುತಿ ಇದೆ. ಬಳಿಕ ಕವಿ ಬಸವ, ಪ್ರಭುದೇವ, ಚೆನ್ನಬಸವ “ಚರಲಿಂಗಕ್ಕೆ ಷಡಂಗಲಿಂಗದಿರವಂ ಪಿಂಡಾದಿ ಶೂನ್ಯಾಂತಮೆಂದೊರೆದ” ತೋಂಟದನಿದ್ಧ, ನೀಲಲೋಚನೆ ಇವರುಗಳನ್ನು ಹೊಗಳಿದ್ದಾನೆ. ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಇತಿ ಶ್ರೀಮತ್ಪರಮಶಿವಶರಣಚರಣಚಾಮಿಾಕರಾರವಿಂದನಿಷ್ಯಂದಮಾನಮಕರಂದರ ಸಲಲಾಮಲಲಾಟತಟವಿರಾಜಿತಶ್ರೀಮತಿರಿನಾಮಧೇಯವೀರಮಾಹೇಶ್ವರವಿರಚಿತಮಷ್ಟು ಶ್ರೀಶೈಲಮಲ್ಲೇಶ್ವರಾಂಕಿತ ವಿಲಸದಷ್ಟಾವರಣಸ್ತೋತ್ರಶತಕಂ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಜಗುರಿತ್ ಜವ್ವನಮ್ಮೆದಿ ನಾರಿ ತನುಜಾತೋದ್ವಾ ಹಕೆಲ್ಲಂದದಿಂ | ಬಗೆಗಾಣೆಂ ನಿಲಯಕ್ಕೆ ಬೀಯಮಿನಿತಿಲ್ಲಂ ನೋಂಪಿ ನಾಳೈ ದುಗುಂ | ಜಗದೊಳ್ ನಿಮ್ಮನನೇಕಮಾಗಿ ನುಡಿವರ್ ನಾಣಿಲ್ಲವೆಂಬಾಗಳೆಂ | ತಗಜೇಶಾ ತಿಳಿವುಂಟೆ ನಿಮ್ಮ ನೆನೆಯಲ್ ಶ್ರೀಶೈಲಮಲ್ಲೇಶ್ವರಾ || ಶಿರದೊಳ್ ಬೆಳ್ಳ ವಿರುರ್ವೆ ಸುರ್ಕಿರೆ ಮೊಗಂ ರ್ಬೆ ಬಾಗೆ ದಂತಂ ಕಳಿ | ಲ್ದಿರೆ ಶೈಥಿಲ್ಯಮನಾನೆ ಮೈ ನಡುಗೆ ಕೈ ಸರ್ವೆಂದ್ರಿಯಂ ಶಕ್ತಿಗುಂ|| ದಿರೆ ದೋಷಂ ಬಿಡದೊತ್ತೆ ವೃದ್ಧತೆಯನಾಂತಿರ್ಪಲ್ಲಿ ನಿನ್ನ೦ಫ್ರಿಸಂ | ಕರುಹಧ್ಯಾನಮದುಂಟೆ ಪೇಳೆ ನಗೆ ನೀಂ ಶ್ರೀಶೈಲಮಲ್ಲೇಶ್ವರಾ ||