ಈ ಪುಟವನ್ನು ಪರಿಶೀಲಿಸಲಾಗಿಲ್ಲ.
264. ಕರ್ಣಾಟಕ ಕವಿಚರಿತ (16ನೆಯ
ಗ್ರಂಥಾವತಾರದಲ್ಲಿ ಕವಿ ನಂದಿಗಿರೀಶನನ್ನು ಸ್ತುತಿಸಿ ಬಳಿಕ ಬಸವ, ಚೆನ್ನಬಸವ, ಅಲ್ಲಮ, ರೇವಣಾರ, ಮಡಿವಳಮಾಚ, ಸಿದ್ದರಾಮ, ಮಾದಿರಾಜ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥಕ್ಕೆ ಒಂದು ಕನ್ನಡ ವ್ಯಾಖ್ಯಾನವಿದೆ. ಇವನ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದುಬರೆಯುತ್ತೇವೆ_ ಶಂಖ ಹುಟ್ಟಿದೆಡೆಯೇನಲ್ಪವೇ ಶರಧಿ ತನ್ನೊಡನೆ | ಹುಟ್ಟಿದವಳೇಂ ಬಡವೆಯೇ ಲಕ್ಷ್ಮಿ ಭಾವನಂ | ನಿಟ್ಟಿಸುವೊಡೇಂ ಜಾವಳನೆ ಲೋಕರಕ್ಷಿ ಮಾಧವನೆಂಬುದನದೆನ್ನನು | ದಿಟ್ಟ ತನದಿಂದೀಶ್ವರಾಲಯಂಗಳ ಮುಂದೆ! ದುಷ್ಟತಮ್ಮಡಿ ಕಚ್ಚಿ ಕೊಲುತಿರ್ಪನೆಂದು ಮೊರೆ ! ಯಿಟ್ಟು ಕೂಗುವವೊಲಾಮುಂಜಾವದೊಳು ಪುರದೊಳೊದದುವು ಶಂಖಂಗಳು||
ಶಿವನಿಗೆ ಭಿಕ್ಷವ ನೀಡಿದ ಸ್ತ್ರಿಯರು ನಕ್ಷತ್ರಮಂಟಪದೊಳೊರ್ವ ಗೋಪಾಲಸತಿ | ನಕ್ಷತ್ರರಮಣನನುಜನ ತೊಡೆಯ ಮೇಲಿರ್ದು | ನಕ್ಷತ್ರಮಂ ಪಿಡಿದು ನಕ್ಷತ್ರದಿಂ ಹಿಮವ ತುಂಬುತಿರಲಾಕ್ಷಣದೊಳು || ನಕ್ಷತ್ರರಿಪುಜನಕ ದನಿದೋಳು ಬಾಗಿಲೊಳು | ನಕ್ಷತ್ರದಿಂ ಕೇಳುತೆದ್ದು ಭಿಕ್ಷವ ನೀಡಿ | ನಕ್ಷತ್ರಪತಿಧರಗೆ ವಂದಿಸಿ ಮರಳಿ ಮನೆಯ ನಕ್ಷತ್ರಮಂ ಸಾರ್ದಳು| ಕರಿಯ ತಲೆನವಿರೆಣ್ಣೆಗಂಟು ಬೆನ್ನೊಳ್ ನಲಿಯೆ || ಕರಿಸಾಲೆಯಾಮಡಿಯನುಟ್ಟು ಸಾಕಿಯದೊಂದು| ಕರಿಯ ಕತ್ತುರಿಬೊಟ್ಟನಿಟ್ಟು ಮಿಂಚುವ ಕಣ್ಗೆ ಕರಿಯ ಕಾಡಿಗೆಯನೆಚ್ಚಿ| ಕರಿಯನೇಲಹಣ್ಣ ಪೋಲ್ವ ಮೈವೆಳಗಚ್ಚ | ಕರಿಯ ಮುಗಿಲಂ ಜಯೆ ಕರಿಯಗೊವಳಿತಿ ಮದ | ಕರಿದನುಜಹರಗೆ ಭಿಕ್ಷವ ನೀಡಿ ಮುಂಗಾರ ಸಿರಿಯಂತೆ ಕಣ್ಗೆಸೆದಳು || ಧರ್ಮೋಪದೇಶ ಕೊಲ್ಲದಿಹುದೇ ಧರ್ಮ ಪರಧನ ಪರಸ್ತ್ರೀಯ |