ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



266    ಕರ್ಣಾಟಕ ಕವಿಚರಿತೆ.           (16ನೆಯ
ಶ್ವರನನು ಆಂಧ್ರ ದೇಶದಲ್ಲಿ ಮೋವೂರೆಂಬ ಪಟ್ಟಣದ ಅರಸು ಸಂಗಮರಾಜ ಹೆಂಡತಿ ಹೈಮಾವತಿ ಇವರಿಗೆ ಭೈರವರಾಜನೆಂಬ ಮಗನಾಗಿ ಹುಟ್ಟುವಂತೆ ನೇಮಿಸಿದನು. ಭೈರವರಾಜನು ಪ್ರಭುಡಾಚಾರನೆಂಬ ಪೌರಾಣಿಕನಲ್ಲಿ ಪೂರ್ವಕಥೆಗಳನ್ನು ಕೇಳುತ್ತ  ಶಿವಭಕ್ತಿನಿಷ್ಠಾಪರರಾರೆಂದು ಕೇಳಲು -ಮನುಮುನಿಯಕ್ಷರಾಕ್ಷಸರುಂ ಅಲುವತ್ತು ಮರು ಪುರಾತನರುಂ ಶೈವದಲ್ಲಿ ಮುಕ್ತಿಯಂ ಪಡೆದರ್; ದಶಗಣ, ತೇರಸಗಣ, ಷೋಡಶಗಣ, ಪ್ರಮಧಗಣ, ರುದ್ರಗಣ, ಅಮರಗಣ, ಭಕ್ತಗಣ ಮೊದಲಾದ 777 ಪುರಾತನರುಂ ನೂತನಪುರಾತನರುಂ 101 ವಿರಕ್ತರುಂ ವೀರಶೈವದಲ್ಲಿ ಶಿವನ ಕೃಪಾಪ್ರ ಸನ್ನತ್ವಮಂ ಪಡೆದರ್- ಎಂದುದಂ ಕೇಳ್ದು ಗಂಡಹೆಂಡಿರು ಭಕ್ತಿಯುಕ್ತರಾಗಿರಲು ಶಿವನು ಸ್ವಪ್ನದಲ್ಲಿ ಬಂದು "ನೀನು ಹೆಂಡತಿಯೊಡನೆ ಮಲ್ಲಿಪಟ್ಟಣಕ್ಕೆ ಪೋಗಿ ಅಲ್ಲಿ ಗುರುಕರುಣಮಂ ಪಡೆದು ಸಾಸಲಿಗೆ ಪೋಗಿ ಜಂಗಮಾರ್ಚನೆಯ ಮಾಡು; ನಿನಗೆ ನಿತ್ಯಾನಂದಸುಖವನೀವೆನು, ಎನ್ನ ಪೆಸರು ಸಾಸಲ ಸೋಮೇಶ್ವರ" ಎಂದನು. ಅದೇ ಮೇರೆಗೆ ಭೈರವರಾಜನು ಮಲ್ಲಿಪಟ್ಟಣಕ್ಕೆ ಹೋಗಿ ಅಲ್ಲಿಯ ದೊರೆಯಾದ ರಾಮರಾ ಜನಿಂ ಮನ್ನಣೆವಡೆದು ಹಾಲಸೋಮೇಶಗುರುವಿನ ರೂಪದಲ್ಲಿ ಬಂದ ಸಾಸಲಸೋಮೇಶನಿಂದ ದೀಕ್ಷೆವಡೆದು ಅನೇಕಪವಾಡಗಳನ್ನು ಮಾಡಿ ಕೊನೆಗೆ ಶಿವನಿಂದ ಕೈಲಾಸಕ್ಕೆ ಒಯ್ಯಲ್ಪಟ್ಟನುವ್ಯಕ್ತವಾಗಿವ್ಉಯ, ಸಾಸಲಶಂಭುನೃಪತಿ, ಕಿಕ್ಕೇರಿಯ ಮಲ್ಲಣಾರ್ ಇವರು ಭೈರವರಾಜನ ಸಮಕಾಲದವರು. ಈ ಕಥೆಯನ್ನು ಕಿಕ್ಕೇಯಾರಾಧ್ಯ ನಂಜುಂಡೇಶನೆಂಬ ಶಿವಕವೀಶ್ವರನು ವಸ್ತು ಕವರ್ಣಕದಿಂದ ನವರಸಾರ್ಧ 18 ಶೃಂಗಾರಯುಕ್ತವಾದ ಕರ್ಣಾಟಕಕಾವ್ಯ ಪ್ರಬಂಧಮಾಗಿ ಪೇಳಿದನು.

ಈ ಗ್ರಂಥದಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ ಭಕ್ತಿಯ ತಾಣ ಸನ್ಮುಕಿಯ ಸದನ ವಿ | ರಕ್ತಿಯ ಸೀಮೆ ಮೋಹನದ | ಸೂಕ್ತಿಯ ಸಿರಿ ಸರಸೋಕ್ಕಿಯ ನೆಲೆಯಾಗಿ ವ್ಯಕ್ತವಾಗಿವು ದೀಕಾವ್ಯ|| ಚದುರರ ಮಚ್ಚು ಮೇಣ್ ಬುಧರಚ್ಚು ಸತ್ಕಲಾ | ವಿದರ ವಿಲಾಸದ ಪೆರ್ಚು | ಮುದದೊಳೋದುವರ ಭಾವದ ಕೆಚ್ಚು ನಂಜ ಪೇ|ಳಿದ ಕಾವ್ಯವಘಾರಣ್ಯಗಿಚ್ಚು || ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ವೀರ ಭದ್ರ, ಗಣೇಶ, ಸರಸ್ವತಿ, ನಂದಿ, ಭೃಂಗಿ, ಸ್ಕಂದ ಇವರುಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಶಾಲಿವನ ಪಸುರಾಗಿ ಪೊಡೆಯಾಗಿ ಕುಸಿದು ಬಳತ ರಾಗ | ರಸದೀವಿ ಮೆಳವ ಶಾಲಿಗಳ |