ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

314. ಕರ್ಣಾಟಕಕವಿಚರಿತೆ [16 ನೆಯ

ವೀರಶೈವಕವಿ, ಚಿಕ್ಕಭೂಪಾಲನ ಮಗನಾದ ಬಿಜ್ಜವರಪುರಾಧೀಶ್ವರ ಇಮ್ಮಡಿ ಚಿಕ್ಕಭೂಪಾಲನು ತನಗೆ ಪೋಶಕನೆಂದು ಹೇಳಿಕೊಂಡಿದ್ದಾನೆ. ಈ ಇಮ್ಮಡಿ ಚಿಕ್ಕಭೂಪಾಲನಿಗೆ ವಂಕಿಣಿನಾರಾಯಣ, ಸಮರನಿಶ್ಯಂಕ, ನೂತನಭೋಜರಾಜ, ತಲಾಘರಾಯರಾವುತವೇಶ್ಯಾಭುಜಂಗ ಎಂಬ ಬಿರುದುಗಳು ಹೇಳಿವೆ. ಮದ್ದಗಿರಿ 21ನೆಯ ಶಾಸನದಿಂದ ಇವನ ಕಾಲವು 1593 ಎಂದು ತಿಳಿಯುತ್ತದೆ. ಕವಿಯ ಕಾಲವು ಇದೇ ಆಗಿರಬೇಕು. ಕವಿ ಜನಕುಮುದಶಶಾಂಕ ಎಂದು ಕವಿ ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ.

    ಗ ರುರಾಜಕೃತ ಪಂಡಿತಾರಾಧ ಚಾರಿತ್ರಕ್ಕೆ ಕನ್ನಡವ್ಯಾಖ್ಯಾನ
  ಇದು ಗುರುರಾಜನಿಂದ (ಸು, 1430) ರಚಿತವಾದ ಸಂಸ್ಕೃತಪಂಡಿತಾರಾಧ್ಯಚಾರಿತ್ರಕ್ಕೆ ಕನ್ನಡಟೀಕೆ. ಗ್ರಂಥದ ಕೊನೆಯಲ್ಲಿ ಈ ಗದ್ಯವಿದೆ—
    ಇದು ಶ್ರೀಮದಮೃತೇಶ್ವರಕರುಣಾಕಟಾಕ್ಷ ವೀಕ್ಷಣಪ್ರಸಾದಲಬ್ಧಸಾರಸಾರ ಸ್ವತಸಾಮ್ರಾಜ್ಯಸಂಪೂಜ್ಯ ಸಕಲಕಲಾಕಲಾಪ ನೂತನಭೋಜರಾಜ .. ..... ಚೋಳಂಭೇರಿಮಂಡಲಿಕರಗಂಡ ಗಂಡಭೇರುಂಡ ತಲಾಘರಾಯರಾವುತವೇಶ್ಯಾಭುಜಂಗ ಬಿಜ್ಜವರಪುರವರಾಧೀಶ್ವರ ಚಿಕ್ಕಭೂರಮಣಗರ್ಭಕಲಶಾಂಬುರಾಶಿರಾಕಾಸಿಶಾನಾಯ ಕ ಸೋಮಾಂಬಿಕಾಹೈದಯನಂದನವನಹರಿಚಂದನ ಶ್ರೀವದಿರ್ಮಡಿಚಿಕ್ಕಭೂಪಾಲಕೃಪಾಲಾಲಿತ ಕವಿಜನಕ ಮುದಶಶಾಂಕ ಶ್ರೀವತ್ಸಾಲಂಕೃತಮಲ್ಲಿಕಾರ್ಜುನಸುಧೀವಿರಚಿತಂ.
       ಶಂಕರಕವಿಕೃತ ಬಸವಪುರಾಣಕ್ಕೆ ಕನ್ನಡವ್ಯಾಖ್ಯಾನ 
  ಇದು ಶಂಕರಾರಾಧ್ಯ ರಚಿತವಾದ ಸಂಸ್ಕೃತಬಸವಪುರಾಣಕ್ಕೆ 

ಕನ್ನಡ ಟೀಕೆ. ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ—

  ಇದು ಶ್ರೀಮದಮೃತೇಶ್ವರಚರಣಾರವಿಂದಮಕರಂದಾಸ್ವಾದಾಮಂದನಂದದಿಂ ದಿಂದಿರಾಯಮಾಣವಿಶುದ್ಧಾಂತಃಕರಣ ವಂಕಿಣಿನಾರಾಯಣಾಂಕ ಸಮಂನಿಶ್ಯಂಕ ಚಿಕ್ಕ ಭೂಪಾಲಗರ್ಭಾಬ್ಧಿಚಂದ್ರೋದಯ ಸೋಮಾಂಬಿಕಾಗರ್ಭಶುಕ್ತಿಮುಕ್ತಾಫಲ ಸತತ ಸಂತಪಿ೯ ತನಿರವಧಿಕವೀರಮಾಹೇಶ್ವರವಾಂಛಿತಾರ್ಧಸಾಧ೯ ಶ್ರೀಮದ್ಬಿಜ್ಜವರಪುರ ವರಾಧೀಶ್ವರ ಶ್ರೀಮದಿಮ್ಮಡಿಚಿಕ್ಕ ಭೋಪಾಲಕೃಪಾಲಾಲಿತ ಮಲ್ಲಿಕಾರ್ಜುನಕವೀಶ್ವರ ವಿರಚಿತಂ.
           _____________________
                 ಪದ್ಮರಸ, 1599 
     ಈತನು ಶೃಂಗಾರಕಥೆಯನ್ನು ಬರೆದಿದ್ದಾನೆ. ಇವನು ಜೈನಕವಿ ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ-ಅಖಿಲಶಾಸ್ತ್ರ ವಿಶಾರದ