ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಕವಿವಿಟ್ಠಲ. 331 ದೋ ಏನೋ ತಿಳಿಯದು, ಕವಿಯ ಕಾಲವು ಸಮಾರು 16 ೨೦ ಆಗಿರ ಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ನಾನಾರ್ಥರತ್ನಾಕರ ಇದರಲ್ಲಿ ಸಂಸ್ಕೃತಶಬ್ದ ಗಳ ನಾನಾರ್ಥಗಳು ಹೇಳಿವೆ; 169 ವೃತ್ತ ಗಳಿವೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ-- ಜಗದೊಳ್ ಜಾಣರ ಮೆಚ್ಚು ಸತ್ಕ ವಿಸಮೂಹಕ್ಕೆ ದೆ ತಾಯೊಡು ವಾ | ↑ಗಳಾನಂದರಸಾಧಿವಾಸ ಗಮಕಿಸ್ತೋಮಕ್ಕೆ ಸುಪ್ರೀತಿ ವಾ | ದಿಗಳಾವಾಸನಿಧಾನ ದುರ್ಜ ನಮನೋಂಭೋಜಾತಶುಭ್ರಾಂತುವೆಂ | ಬ ಗುಣವಾ್ರತದೆ ಪೆಂಪುವೆತ್ತು ಮೆಳೆಗುಂ ನಾನಾರ್ಧರತ್ನಾ ಕರಂ || ಗ್ರಂಥಾವತಾರದಲ್ಲಿ ಜಿನಸ್ತುತಿಯೂ ಸರಸ್ವತೀಸ್ತುತಿಯೂ ಇವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದುಬರೆಯುತ್ತೇವೆ ಕಾಲದೊಳಂಬುಜಾಸನನೊಳುತ್ತ ಮನೊಳ್ ಕವಿಯೊಳ್ ವಿಧಾನದೊಳ್ | ಮೇಳದೊಳಂ ವಿಚಕ್ಷಣನೊಳಂ ಶ್ರುತಿಯೊಳ್ ವಿಧಿಶಬ್ದ ಮಕ್ಕು ಶುಂ || ಡಾಲಕರಾಗ್ರದೊಳ್ ಶ್ರವಣಕುಂಡಲದೊಳ್ ವನಜಾ ತಮಧ್ಯದೊಳ್ | ಬಾಲೆಯೊಳಾಹವಂಗಳೊಳೆ ತೀರ್ಧದೊಳಂ ನಿಜಕರ್ಣಿಕಾಹ್ವಯಂ || ನೋವುಂ ಬಲ್ಲತನಂ ವಿಚಾರಿಸುವುದಿಂತುಂ ವೇದನಾವಾಚಕಂ || ಸಾವುಂ ನಿಂದೆಭಗಂಗಳೆಂಬಿನಿತು ಸಂಬಾಧಾಹ್ವಯಂ ಮೋಹಮ | ರ್ಛಾವೇಗಂ ಕಡುಮೂರ್ಖನಜ್ಞತೆಗಳುಂ ದುರ್ಮೋಹಮಕ್ಕುಂ ಧನಂ | ಜೀವಂ ಶಬ್ದ ನಿರೂಪಣಂ ವಿಮಲಯೋಗಂ ತಾವಿವರ್ಧಾ೦ಕಿತಂ || ಕವಿವಿಟ್ಠಲ ಸು. 1600 ಈತನು ಅಮರಕೋಶಕ್ಕೆ ಕನ್ನಡವ್ಯಾಖ್ಯಾನವನು್ನ ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ವಾದಿಮೃಗೇಂದ್ರನಾದ ರಾಮಭಟ್ಟನ ಸೌತ್ರನು; ಸಾಹಿತ್ಯವನಚೈತ್ರನಾದ ದೇವರನ ಪುತ್ರನು, ಇವನನ್ನು ಅಮರಸಿಂಹನ 1 ಪೌತ್ರೋ ವಾದಿಮೃಗೇಂದ್ರಸ್ಯ ರಾಮಭಟ್ಟ ವಿಪಶ್ಚಿತಃ | ಸಾಹಿತ್ಯವನಚೈತ್ರಸ್ಯ ದೇವರಸ್ಯ ತನೂಭವಃ || ಕವಿವಿಟ್ರಲನಾವಾಹಂ