ಈ ಪುಟವನ್ನು ಪರಿಶೀಲಿಸಲಾಗಿಲ್ಲ.
360 ಕರ್ಣಾಟಕ ಕವಿಚರಿತೆ
{17 ನೆಯ
ಚಂದ್ರ, ರುದ್ರಭಟ್ಟ, ಅಗ್ಗಳ, ಆಂಡಯ್ಯ, ಮಧುರ ಮುಂತಾದ ಕವಿ
ಗಳ ಕಾವ್ಯಗಳಿಂದ ಪದ್ಯಗಳನ್ನು ಉದಾಹರಿಸಿದ್ದಾನೆ.
ತಾನು ಕನ್ನಡ ಸಂಸ್ಕೃತ ಈ ಎರಡುಭಾಷೆಗಳ ವ್ಯಾಕರಣದ
ಲ್ಲಿಯೂ ಪ್ರವೀಣನೆಂದೂ ರಾಜರ ಸಭೆಗಳಲ್ಲಿ ಜೈನಮತವನ್ನು ಹಲವುಬಾರಿ
ಸ್ಥಾಪಿಸಿದೆನೆಂದೂ ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ.
"ಯೋ ನಾನಾಮತತರ್ಕಕರ್ಕಶ ಸತಿರ್ವ್ಯಾಖ್ಯಾನಮುದ್ರಾಪಟುಃ ||
ಯಃ ಪ್ರಾಭಾವಯಾರ್ಹತಂ ನಿಜಮತಂ ಭೂಭ್ಯಕ್ಷಭೇನೇಕಧಾ |
ಯಃ ಕರ್ಣಾಟಕಸಂಸ್ಕೃತೋಭಯವಿಧಂ ಶಬಾಬ್ಲಿ ಮುತ್ತೀರ್ಣವರ್ಾ |
ಸೋಯಂ ಸಾಧುಜನಪ್ರಿಯೋ ವಿಜಯತೇ ಭಟ್ಟಾಕಳಂಕೋ ಭುವಿ ||
ಇವನ ಗ್ರಂಥ
ಕರ್ಣಾಟಕಕಬ್ದಾನುಶಾಸನ
ಇದು ಕನ್ನಡಭಾಷೆಯ ವ್ಯಾಕರಣಗ್ರಂಥವು. ಇದರಲ್ಲಿ 4 ಪಾದಗ
೪ವೆ; ಸೂತ್ರಗಳು 5+2 ಈ ಸೂತ್ರಗಳಿಗೆ ಭಾಶಾಮಂಜರಿಯಂಒ ವೃತ್ತಿ
ಯ ಮಂಜರೀಮಕರಂದವೆಂಬ ವ್ಯಾಖ್ಯಾನವೂ ಇವೆ. ಸೂತ್ರ, ವೃತ್ತಿ,
ವ್ಯಾಖ್ಯಾನ ಈ ಮೂರೂ ಸಂಸ್ಕೃತಭಾಷೆಯಲ್ಲಿ ಬರೆದಿವೆ. ಪೂರ್ವಕವಿ
ಗಳ ಕನ್ನಡ ಗ್ರಂಥಗಳಿಂದ ಉದಾಹರಣಗಳು ಕೊಟ್ಟಿವೆ. ಇದು ನಾಗ
ವರ್ಮನ ಕರ್ಣಾಟ ಭಾಷಾಭೂಷಣಕ್ಕಿಂತಲೂ ವಿಸ್ತಾರವಾಗಿಯೂ ವೈ
ಡವ್ಯಾಖ್ಯಾನಸಮೇತವಾಗಿಯೂ ಇದೆ; ಶಬ್ದಮಣಿದರ್ಪಣಕ್ಕಿಂತಲೂ ಹೆಚ್ಚು
ವಿಷಯಗಳನ್ನು ಒಳಗೊಂಡಿದೆ, ಕನ್ನಡಭಾಷೆಗೆ ಇದು ಅತ್ಯುತ್ತಮವಾ
ಕರಣಗ್ರಂಥವೆಂದು ಹೇಳಬಹದು.
ಗ್ರಂಧಾವತಾರಗಲ್ಲಿ ವರ್ಧಮಾನಸ್ತುತಿರೂಪವಾದ ಈ ಶ್ಲೋಕವಿದೆ:
ನಮಃ ಶ್ರೀವರ್ಧಮಾನಾಯ ವಿಶ್ವವಿದ್ಯಾವಭಾಸಿನೇ ||
ಸರ್ವಭಾಷಾಮಯಿ ಭಾಷಾ ಪ್ರವೃತ್ಯಾ ಯನ್ನು ಖಾಂಬುಜಾತ್ ||
ಮಂಜರೀಮಕರಂದದಿಂದ ಕನ್ನಡಭಾಷೆಯ ಪ್ರಶಂಸಾರೂಪವಾದ
ಸ್ವಲ್ಪಭಾಗವನ್ನು ತೆಗೆದು ಬರೆಯುತ್ತೇವೆ. *
ನಚೈಷಾ ಭಾಷಾ ಶಾಸ್ತ್ರಾನುಸಯೋಗಿ: ತತ್ಕಾರ್ಧ ಮಹಾಶಾಸ್ತ್ರ ವ್ಯಾಖ್ಯಾನಸ್ಯ ಷಣ್ಣ
ವತಿಸಹಸ್ರಪ್ರಮಿತಗ್ರಂಥಸಂದರ್ಭರೂಪಕ್ಕೆ ಚೂಡಾಮಣ್ಯಭಿಧಾನಸ್ಯ ಮಹಾ