ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

370 ಕರ್ಣಾಟಕಕವಿಚರಿತ [17 ನೆಯ ೪ 6 ದೊರೆಯಾದ ವೆಂಕಟಾದ್ರಿರಾಜನ ಪೌತ್ರನೂ ಧವಳಾಂಕಭೀಮ ಎಂಬ ಬಿರುದುಳ್ಳ ಕೃಷ್ಣಾ ರಾಜನ ಪುತ್ರನೂ ಆದ ವೆಂಕಟಾದ್ರಿರಾಜನ ಆಜ್ಞಾನು ಸಾರವಾಗಿ ಈ ಗ್ರಂಥವನ್ನು ರಚಿಸಿದಂತೆ ಹೇಳುವುದರಿಂದ ಕವಿ ಈ ಗೊರೆಯ ಆಶ್ರಿತನಾಗಿದ್ದಂತೆ ತಿಳಿಯುತ್ತದೆ, ಈ ದೊರೆ 1626 ರಿ೦ದ 1643 ರವರೆಗೆ ಆಳಿದಂತೆ ಶಾಸನಗಳಿಂದ ತಿಳಿವುದರಿಂದ ಕವಿಯ ಕಾಲವು ಸುಮಾರು 1640 ಆಗಬಹುದು. “ಉಭಯಭಾಷಾಕವಿತಾನೂತನಪದ ರಚನಾವಿಖ್ಯಾತ" ಎಂದು ಕವಿ ತನ್ನನ್ನು ವಿಶೇಶಿಸಿ ಹೇಳಿಕೊಂಡಿದ್ದಾನೆ. ಇವನ ಗ್ರಂಧ

                                   ಕವಿಕಂಠಹಾರ 

ಇದು ಕನ್ನಡನಿಘಂಟು , ಇದರಲ್ಲಿ 271 ಕಂದಗಳಿವೆ ಹಿಂದಣವರು ಹೇಳಿರುವ ಶಬ್ದಗಳನ್ನು ಸರಗೊಳಿಸಿ ಈನಿಘಂಟುವನ್ನು ರಚಿಸಿದಂತೆ ಕವಿ ಈಪದ್ಯದಲ್ಲಿ ಹೇಳುತ್ತಾನೆ-- ಹರುಷನಮಿಗೆ ಮುನ್ನಮಾದಿನ | ರೊರೆದೊಳ್ಕಣ​೯ಟಶಬ್ದಮಣಿಸಿಚಯಮುಮಂ | ಸರಗೊಳಿಸಿ ಪೇ ೬ಟ್ಟದು ತಾಂ | ಪರಿಕಿಸೆ ಕವಿಕಂರಹಾರಮೆನಿಕಾಂ ಪೆರಿಂ || ಗ್ರಂಧಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ರಾಮ, ಗಣಪತಿ ಇವರುಗಳನ್ನು ಸ್ತುತಿಸಿದ್ದಾನೆ. ಈಗ್ರಂಧದಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ -

                                     ಬೇಲೂರು 

ನಾಡಿರ್ಪುದೊಂದು ಸಂಕಿಸಿ | ನೋಡಲ್ ಕಾಶ್ಮೀರದೇಶಕಯ್ಯಡಿಯೆನೆ ತಾಂ | ಗಾಡಿವಡೆದಿಹುದು ಗೀರ್ವಧು| ಗಾಡುಂಬೊಲವೆನೆ ಸುದೇಶ ಹೊಯ್ಸಳದೇಶಂ || ಆದೇಶದೊಳಗೆ ನರಹರಿ | ಯಾದೇಶದಿನೊಪ್ತಿಪ್ಪುತಿಪ್ರು ದತವೈಭವದಿಂ || ಮೇದಿನಿಗಚ್ಚರಿಯೆಂದೆನೆ | ಸಾಧುಜನಪ್ರವರವಿನುತವೇಲಾನಗರಂ ||

                                      ನಿಘಂಟು 

ಕಂದೆಂದುಂ ಕತೆಯೆಂದುo | ಸಂದೆಗವಮಿಲ್ಲವು ಕಳಂಕ ಬೊನ್ನಂ ಜ್ಯೋತೃ° | ಸಂದುದು ತಾರಗೆಯ, ಲೆನ | ಅಂದುಡುಸಂತತಿಗೆ ನಾಮವಿವು ಬುಧರಿಂದಂ || ನಿದುದು ಸಮಗ್ರ ಮಕ್ಕೂಂ | ಕೊಹಿಡೇಂದುಂ ಸ್ಥಾಣುವಕ್ಕು ತವಲಾಯಿಯೆಕ |ಪುಡಾಳಕು ಒಗದಿ ವಿಸಟಂ | ಒರಿದುದೆನಲ್ ಸೈರಗಮನಮಕ್ಕಲ ಬುಧರಿಂ ||


1 1638 ರಲ್ಲ ಒರೆದ ಬೇಲೂರು 123 ನೆಯ ಶಾಸನವೇ ಮಂತಾದುವು.