ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಮರಿರಾಚವಟ್ಟೀಶ, 399 ಸಮರಸಜ್ಞಾನಾಚರಣೆಯಿಂ ದಹಿಸುತಲಿ, ನರಿ, ಮನವೆಂಒಸೃಗಾಲನನು, ನಾಯ, ಪಂಚೇಂದ್ರಿಯಂಗಳೆಂಬ ಕುಕ್ಕುರಂಗಳನು, ಬೇಂಟೆಯನಾಡಿ, ಸಂಹರಿಸಿ, ಮೆಆಅದುದು, ವಿಡಂಬಿಸಿದುದು.
ಪ್ರವೃತ್ತಿಯಮಿದು ನಿವೃತ್ತಿಯಿಂ ಶರಣನಾಚರಿಸಿ ವಿನೋದಿಸುತಿರ್ದನೆಂಬುದು
ತಾತ್ಪರ್ಯ.
ಕೊನೆಯ ಗದ್ಯದಲ್ಲಿ “ಸರ್ವಜ್ನತ್ವಾದಿಷಟ್ಘಕ್ತಿ" ಎಂಬುದಕ್ಕೆ ಪ್ರತಿಯಾಗಿ “ಸ್ಫೂಲಸೂಕ್ಷ್ಮಕ್ಕೆ ಕಾರಣ” ಎಂದಿದೆ.
----
ಮರಿರಾಚವಟ್ಟೀಶ ಸು 165) ಈತನು ಪ್ರಭುನಟನತಾರಾವಳಿಯನ್ನು ಬರೆದಿದ್ದಾನೆ. ಇವನು ವೀರಶೈವಕವಿ; (ಪ್ರಸನ್ನದೇಶಿಕನ ಕುಮಾರ' ಎಂದು ಹೇಳಿಕೊಂಡಿದ್ದಾನೆ. 'ಗರುಣಿಯ ಬಸವೇಶಂ ಪ್ರಭು | ಗುರುನುತಿಯಂ ಮಾಸ್ಸುಗೆಂದು ಕರೆದೆ ನಗಆ'ಪಲ್ || ವಿರಚಿಸಿದೆಂ' ಎನ್ನುತ್ತಾನೆ. ಈ ಗರುಣಿ ಬಸವೇಶನಾರೋ ತಿಳಿಯದು. ಸಿದ್ದನಂಜೇಶನು (ಸು. 1650) ರಾಚವಟ್ಟಿಯಾರಾಧ್ಯನೆಂಬ ಒಬ್ಬ ಕವಿಯ ಕೃಪೆಯಿಂದ ತನ್ನ ರಾಘವಾಂಕಚಾರಿತ್ರವು ಪೂರ್ತಿಯಾಯಿತು ಎಂದು ಹೇಳುತ್ತಾನೆ. ಈ ಕವಿಗೂ ಅವನಿಗೂ ಸಂಬಂಧವೇನಾದರೂ ಇರಬಹುದೋ ಏನೋ ತಿಳಿಯದು. ಇವನ ಕಾಲವು ಸುಮಾರು 1650 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಧ ಪ್ರಭುನಟನತಾರಾವಳಿ. ಇದು ಹಾಡಿನರೂಪವಾಗಿದೆ; 27 ನುಡಿಗಳಿವೆ, ಕೊನೆಯಲ್ಲಿ ಮಾತ್ರ 2 ಕಂದಗಳಿವೆ. ಈ ಗ್ರಂಧವನ್ನು ಕವಿ `ಪ್ರಭುದೇವನು ನಟಿಸಿದ ಶೃಂಗಾರದ ನುತಿ' ಎನ್ನುತ್ತಾನೆ. ಇದರಲ್ಲಿ ಮುಖ್ಯವಾಗಿ ಪ್ರಭುದೇವನು ಬನವಸೆಯ ಮಧುಕೇಶ್ವರನ ಮುಂದೆ ಒಂದು ಮದ್ದಳೆಯನ್ನು ಹೆಗಲೊಳಾಂತು ನರ್ತಿಸಲು ಮಾಯೆಗೆ ತಿಳಿದು ಅವನನ್ನು ಕರಸಿ ತನ್ನ ಮದ್ದಳಿಗನನ್ನಾಗಿ ಮಾಡಿಕೊಳ್ಳಲು ಅವನು ಅವಳ ನರ್ತನಕ್ಕೆ ಮದ್ದಳೆಬಾರಿಸಿದಾಗ ಅವಳು ಮೋಹಿತಳಾದ ವಿಷಯವು ಹೇಳಿದೆ. ಈ ಗ್ರಂಥದಿಂದ ಒಂದು ನುಡಿಯನ್ನು ತೆಗೆದು ಬರೆಯುತ್ತೇವೆ...