ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

408 ಕರ್ಣಾಟಕ ಕವಿಚರಿತೆ [17 ನೆಯ ಕಂಡಾಘ್ರಾಣಿಸಿ ಕಿಚಕಿಲ ಬಿಸುಡುತ್ತುಂ ತಾಯೊಡಲ್ಸೋಂಕಿನಿಂ | ದಿಂಡೆದ್ದಾಡುತೆ

ಹಸ್ತಿಪೋತತತಿಯಿರ್ಕು೦ ನೋಡೆ ಕಾಂತಾರದೊಳ್ || ಘನರೋಷಾಗ್ನಿ ಯ ಕೊರ್ವು ಸರ್ವೆ ಮುಸುಗುಟ್ಟುತ್ತಂ ಮಹೀರಂಗಮಂ | ಕೊನೆಗಾಲಂ ಕೆರೆಯುತ್ತೆ ಕೊಂಬಿಡುತೆ ಕಿಗ್ಗಣ್ಣಿಕ್ಕು ತುಂ ಶೃಂಗತಾ || ಡನಸಾಶ್ಚರ್ಯಖಣತ್ಕೃತಿಧ್ವನಿಯಗುರ್ವಾಗಲ್ ಕೆರಳ್ದದ್ರಿಗಳ್ || ಕಿನಿಸಿಂ ತಾಂಗುವವೋಲ್ ಪಳಂಚಿದುವು ಕೋಣಂಗಳ್ ವನೀಮಧ್ಯದೊಳ್ ||

-= ನಾಗರಸ, ಸು. 165೧. ಈತನು ಭಗವದ್ಗೀತೆಯನ್ನು ಬರೆದಿದ್ದಾನೆ, ಇವನು ಬ್ರಾಹ್ಮಣಕವಿ; ಕಾಶ್ಯಪಗೋತ್ರದವನು; ವಿಶ್ವೇಶ್ವರನ ಮಗನು; ಶಂಕರಗುರುವಿನ ಶಿಷ್ಯನು. ಪಂಡರಿವರದವಿಟ್ಠಲರಾಯ ರಕ್ಷಿಪುದು' ಎಂಬುದರಿಂದ ಈತನು ಪಂಡ ರಾಪುರದ ವಿಟ್ಠಲದೇವರ ಭಕ್ತನೆಂದು ತೋರುತ್ತದೆ; ಆ ಪ್ರಾಂತದವನಾ ಗಿದ್ದರೂ ಇರಬಹುದು, ಇವನು ಸುಮಾರು 1650) ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಭಗವದ್ಗೀತೆ. ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಅಧ್ಯಾಯ 19, ಪದ್ಯ 737 ಭಗದ್ಗೀತೆಯ ಪ್ರತಿ ಶ್ಲೋಕದ ಅರ್ಥವನ್ನೂ ಒಂದೊಂದು ಪಟ್ಟದಿಯಲ್ಲಿ ವಿವರಿಸಿರುವಂತೆ “ಗೀತೆಯರ್ಥವನೈದೆ ಪದಕೊಂದೊಂದು ಗ್ರಂಥವ ಸಾಧ ಕರು ತಿಳಿವಂತೆ ಕನ್ನಡದಿಂದೆ ರಚಿಸಿದೆನು” ಎಂಬ ಪದ್ಯಭಾಗದಲ್ಲಿ ಹೇಳಿ ದ್ದಾನೆ. ಗ್ರಂಥಾವತಾರದಲ್ಲಿ ರಾಮನ ಸ್ತುತಿಯೂ, ಪಂಡರಿವರದವಿಟ್ಠಲ ರಾಯನ ಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಹಳೆಯ ವಸ್ತ್ರಂಗಳನುಳದು ಹೊಸ | ಕೆಲವುವಸ್ತ್ರಂಗಳನು ಹೊದೆವಂ | ತಿಳೆಯ ಭೋಗದದೃಷ್ಟ ತೀರಲು ಜೀವನೀತನುವ || ಕಳಚಿ ಹೊಸತಾದನ್ಯವಹ ತನುಗಳನು ತಾನೈದುತ್ತಿಹನು ನಿಜ |