ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

B408 ಕರ್ಣಾಟಕ ಕವಿಚರಿತೆ [17 ನೆಯ. ವಿಜಯವನ್ನು ಬರೆದ ಬಬ್ಬು ರಂಗನ(ಸು, 1750) ಪೂರ್ವಿಕನಾಗಿ ರಬಹುದೋ ಏನೋ ತಿಳಿಯದು, ಇವನ ಗ್ರಂಥ

             ಪಂಪಾವಿರೂಪಾಕ ಶತಕ.                 ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಪದ್ಯ 108, ಪ್ರತಿಪದ್ಯವೂ ಪಂಪಾವಿರೂಪಾಕ್ಷ ಎಂದು ಮುಗಿಯುತ್ತದೆ; ಪಂಪಾ ವಿರೂಪಾಕ್ಷಸ್ತುತಿರೂ ಸಭಕ್ತಿಪ್ರಧಾನವಾದ ಗ್ರಂಥ, ಕೊನೆಯ ಕೆಲವು ಪದ್ಯಗಳಲ್ಲಿ ಅನುಪ್ರಾಸಾ ದಿಶಬ್ದ ಚಿತ್ರಗಳು ಉಪಯೋಗಿಸಿವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತಗೆದು ಬರೆಯುತ್ತೇವೆ.
          ಕಂಡೆನೆನ್ನಯ ಕಲ್ಪತರುವನ ಖಂಡಿತೈಶ್ವರವನು ಸುಧೆಯನು |                      ಕಂಡೆ ಪರಮಾನಂದವಾರ್ಧಿಯ ನನ್ನ ದೃಷ್ಟಿಯಲಿ | ಕಂಡೆ ಚಿಂತಾಮಣಿಯ ಪರಮನ | ಕಂಡೆನಾಭವಭವದ ಪಾಪವ |                
 ಖಂಡಿಸುವ ಶಿವಕರನನೆಲೆಸಂವಾವಿರೂಪಾಕ್ಷ | ಬಲಿದ ಭಕ್ತಿಯೊಳಾನು ನಿಮ್ಮನು | ನಲಿದು ಪೂಜಿಪೆನೆಂದೊಡೀಮನ ಹಲವುಕಡೆಗೆಳಸುತ ದುರಾಶಾಪಾಶದೊಳು ಸಿಲುಕಿ | ಕಲಕುತಿದೆ ಮತಿ ನಿಲುಕದಿದೆಯೆನ | ಗೊಲಿದು ನಿಶ್ಚಲಚಿತ್ತವನು ನೆಲೆ | ಗೊಳಿಸಿ ರಕ್ಷಿಪುದೆನ್ನ ನೆಲೆಪಂಪಾವಿರೂಪಾಕ್ಷ || .
          ತಿಮ್ಮರಸ          ಸು 1650 
   ಈತನು ಮಾರ್ಕಂಡೇಯರಾಮಾಯಣವನ್ನು ಬರೆದಿದ್ದಾನೆ. ಇವ ನು ಬ್ರಾಹ್ಮಣಕವಿ ; ಭಾರದ್ವಾಜಗೋತ್ರದವನು, ಆಶ್ವಲಾಯನಸೂತ್ರ ದವನು,ಋಗ್ವೆೇದಿ   ಕನ್ನಡಿಗವಂಶದವನು ; ಇವನ ತಂದೆ ಪಾಲ್ಕುರಿಕೆಯ ಕರಣಿಕಬುಳ್ಳುರಪ್ಪ. ತನ್ನ ಗ್ರಂಥವನ್ನು ಯದುಗಿರಿ (ಮೇಲುಕೋಟೆ) ನಾರಾಯಣದೇವರ ಅಂಕಿತದಲ್ಲಿ ಬರೆದಿದ್ದಾನೆ, 'ಕವಿಬಾದರಾಯಣನ ಪಾದಾಂಭೋಜಮಕರಂದಭ್ರಮರ' ಎಂದು ಹೇಳಿಕೊಂಡಿದ್ದಾನೆ ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.