ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

436 ಕರ್ಣಾಟಕ ಕವಿಚರಿತೆ. [17 ನೆಯ ಣೆಯಿಂದ ಅನೇಕ ಸಾಹಸ ಕಾರ್ಯಗಳನ್ನು ಮಾಡಿ ಮದನಮೋಹಿನಿಯನ್ನು ಮದು ವೆಯಾದನು. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ. ಸಕ್ಕರೆಯಂತೆ ಜೇನ್ನೊಡದಂತೆ ಚಿಲುವಾಲು ಸೊಕ್ಕುಜವ್ವನೆಯ ಸೊಬಗಿನಂತೆ! ಚಿಕ್ಕಪ್ರಾಯದಹೆಣ್ಣ ತಕ್ಕೆ ಯಗಲಿಕೂಡು | ವಕ್ಕ ನಿಂತಿಹುದು ಈಕೃತಿಯೆಂದ || ಗ್ರಂಥಾವತಾರದಲ್ಲಿ ಈಶ್ವರಸ್ತುತಿಯಿದೆ: ಬಳಿಕ ಕವಿ ನರಸಿಂಹ, ಬ್ರಹ್ಮ ಪಾರ್ವತಿ, ಲಕ್ಷ್ಮಿ, ಸರಸ್ವತಿ, ಗಣೇಶ, ನಂಜುಂಡಲಿಂಗ ಇವರು ಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತವೆ. ಚಂದ್ರೋದಯ ಹೆಚ್ಚಿತು ತಮ ಚಕ್ರವಾಕದ ಬೆಸುಗೆಯು | ಬಿಚ್ಚಿತು ನೈದಿಲು ನಲವೇನೆ | ಮುಚ್ಚಿತು ಮುಖವ ರಾಜೀವ ಚಂದ್ರಮನಂದು | ಕಿಚ್ಚನಿಕ್ಕಿದ ವಿರಹಿಗಳೆ | `ಸ್ತ್ರೀಗಣ ಕಡಲಡಿಯನು ಕಾಣಬಹುದೊಮ್ಮೆ | ಪೊ ಡಿವಿಯ ವಿಸ್ತಾರವನ್ನು ಕಾಣಬಹುದೀಗ | ಪೊಡವಿಯ ವಿಸ್ತರವನು ಕಾಣಬಹುದೀಗ | ಮಡದಿಯ ಮನ ಕಾಣಬಾರದು || ನೀತಿ ಸೋರುವ ಮನೆ ಸೊರಹುವ ಬಂಟ ದುರ್ಜನ 1 ನಾರಿ ಕಾಳೋರಗನಿಹ ಗೃಹ | ಹೋರುವ ನೆರೆ ಹೊಲಬಿಯದ ದಾರಿಯ | ದೂರದಿಂ ವರ್ಜಿಸಬೇಕೆಂದ | ತಂದೆಯ ಮಾತ ಮೀeಿದ ಮಗ ಗುರುವನು | ನಿಂದಿಪ್ಪ ಶಿಷ್ಯನೊಡೆಯನನು | ಹಿಂದೆ ಜಗವ ಬಂಟ ಪತಿಯ ಮೀಾದ ಸತಿ | ಗೆಂದೆಂದು ನರಕತಪ್ಪದು ದೇವ | ಸತ್ಯದೊಳಗೆ ನಡವಗೆ ಬರಲರಿಯದು | ಮೃತ್ಯುಭಯವು ಮತ್ಯ೮ರೊಳಗೆಲ್ಲ | ಸತ್ಯವೆ ಜನನಿ ಜನಕ ಬಂಧುಜನವೆಂದು | ಚಿತ್ರದೊಳಗೆ ತಿಳಿದಿಹುದೆಂದ || - ದೇವತಾಸ್ತುತಿ ಮಾವನ ಮಗನ ರಾಣಿಯ ಹಿಡಿದೆದನ | ಮಾವಗೆ ನಿಜವ ತೋsಸಿದನ | ಮಾವನ ಕೊಂದು ಮಾವಗೆ ಭಾವನಾದನ | ತಾವರೆಯಡಿಗೆ ಆಗುವೆ ನಾನು ) ಶಿವನ ವೈರಿಯ ಸುತನನು ಕಾದ ದೇವನೆ | ಶಿವನ ಮೇಲುಪ್ಪವಡಿಸಿದನೆ | ಶಿವನ ವೈರಿಯ ಬೆನ್ನಲಿ ಬಹ ವಸ್ತುವೆ | ಶಿವನೆ ನೀ ಸಲಹು ಮೂಜಗವನು ||